RCB vs PBKS: ಕಿಂಗ್ಸ್ ಸವಾಲು ಮೆಟ್ಟಿನಿಂತ ಆರ್‌ಸಿಬಿ: ಒಂಬತ್ತು ವರ್ಷಗಳ ಬಳಿಕ ಫೈನಲ್‌ಗೆ
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಬ್ಬರಿಸಿದೆ. ಮೊದಲು ಬೌಲಿಂಗ್‌ನಲ್ಲಿ ಅಬ್ಬರಿಸಿದ ಆರ್‌ಸಿಬಿ ಬೌಲರ್ಸ್ ನಂತರ, ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಆರ್ಭಟಿಸಿತು. ಈ ಮೂಲಕ ಆರ್‌ಸಿಬಿ ನಾಲ್ಕನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ 9 ವರ್ಷಗಳ ಬಳಿಕ ಐಪಿಎಲ್ ಫೈನಲ್‌ಗೆ ಕ್ವಾಲಿಫೈ ಆಗಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತು. ಈ ಮೂಲಕ ಆರ್‌ಸಿಬಿ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ 2009, 2011, 2016ರಲ್ಲಿ ಈ ಮೊದಲು ಆರ್‌ಸಿಬಿ ಫೈನಲ್‌ಗೆ ಪ್ರವೇಶಿಸಿತ್ತು. 9 ವರ್ಷಗಳ ಬಳಿಕ ಆರ್‌ಸಿಬಿ ಮತ್ತೆ ಐಪಿಎಲ್ ಫೈನಲ್‌ಗೆ ಪ್ರವೇಶ ಪಡೆದಿದೆ.

ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿದರು. ಆರಂಭಿಕರು ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 30 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ವಿರಾಟ್ ಕೊಹ್ಲಿ 12 ರನ್ ಬಾರಿಸಿದ್ದಾಗ ಇಲ್ಲದ ಶಾಟ್ ಬಾರಿಸಿ ಔಟ್ ಆದರು.
ಎರಡನೇ ವಿಕೆಟ್‌ಗೆ ಫಿಲ್ ಸಾಲ್ಟ್ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ ಭರ್ಜರಿ ಆಟವನ್ನು ನೀಡಿತು. ಈ ಜೋಡಿ 27 ಎಸೆತಗಳಲ್ಲಿ 54 ರನ್ ಸೇರಿಸಿತು. ಈ ವೇಳೆ 19 ರನ್ ಬಾರಿಸಿದ್ದ ಮಯಾಂಕ್ ಮುಶೀರ್ ಖಾನ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿದರು.
ಫಿಲ್ ಸಾಲ್ಟ್ ಅರ್ಧಶತಕ
ಆರ್‌ಸಿಬಿ ತಂಡದ ಆರಂಭಿಕ ಫಿಲ್ ಸಾಲ್ಟ್ 27 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 56 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ನಾಯಕ ರಜತ್ ಪಾಟಿದಾರ್ ಅಜೇಯ 15 ರನ್ ಸಿಡಿಸಿದರು.
ಕಳಪೆ ಆರಂಭ
ಪಂಜಾಬ್ ಕಿಂಗ್ಸ್ ತಂಡ ಪವರ್ ಪ್ಲೇನಲ್ಲಿ ಪವರ್ ಫುಲ್ ಆರಂಭವನ್ನು ಪಡೆಯುವಲ್ಲಿ ವಿಫಲವಾಯಿತು. ಆರ್‌ಸಿಬಿ ತಂಡದ ಸ್ಟಾರ್ ವೇಗದ ಬೌಲರ್‌ಗಳ ಕರಾರುವಕ್ ದಾಳಿ ನಡೆಸುವಲ್ಲಿ ಸಫಲರಾದರು. ಪವರ್ ಪ್ಲೇ ನಲ್ಲಿ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪ್ರಿಯಾಂಶ್ ಆರ್ಯ (7) ಹಾಗೂ ಪ್ರಭಾಸಿಮ್ರಾನ್ ಸಿಂಗ್ (18), ಜೋಶ್ ಇಂಗ್ಲಿಸ್ (4), ಶ್ರೇಯಸ್ ಅಯ್ಯರ್ (2) ಪವರ್ ಪ್ಲೇನಲ್ಲಿ ವಿಕೆಟ್ ಒಪ್ಪಿಸಿದರು. ಪಂಜಾಬ್ ಪರ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಪಂಜಾಬ್ 4 ವಿಕೆಟ್ ಕಳೆದುಕೊಂಡು 48 ರನ್ ಸಿಡಿಸಿತು.

ಪಂಜಾಬ್ ಕಿಂಗ್ಸ್ ತಂಡ ಮಿಡ್ಲ್ ಓವರ್‌ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲವಾಯಿತು. ಪಂಜಾಬ್ ತಂಡ 53 ರನ್‌ಗೆಳಿಗೆ 6 ವಿಕೆಟ್ ಕಳೆದುಕೊಂಡಿತು. ಪಂಜಾಬ್ ತಮಡದ ಪರ ಮಾರ್ಕಸ್ ಸ್ಟೋಯ್ನಿಸ್ (26) ಉತ್ತಮ ಜೊತೆಯಾಟವನ್ನು ನೀಡಿದರು.
ಸುಯೇಶ್, ಜೋಶ್ ಕಮಾಲ್
ಆರ್‌ಸಿಬಿ ತಂಡದ ಸ್ಟಾರ್ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದರು. ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಹಾಗೂ ಸ್ಪಿನ್ ಬೌಲರ್ ಸುಯೇಶ್ ಶರ್ಮಾ ತಲಾ ಮೂರು ವಿಕೆಟ್ ಕಬಳಿಸಿದರು. ಸುಯೇಶ್ ಶರ್ಮಾ 17 ರನ್ ನೀಡಿ 3 ವಿಕೆಟ್ ಕಬಳಿಸಿದ ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications