Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿ

Royal Challengers Bangalore unveil new logo ahead of IPL 2020

ಬೆಂಗಳೂರು, ಫೆಬ್ರವರಿ 14: ಪ್ರೇಮಿಗಳ ದಿನದಂದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿಗಾಗಿ ನೂತನ ಲೋಗೋ ಬಿಡುಗಡೆ ಮಾಡಿದೆ. ಹಳೆಯ ಲೋಗೋ ರೀತಿಯ ಹೋಲಿಕೆಯೇ ಇಲ್ಲೂ ಇದೆಯಾದರೂ ಹೊಸ ಲೋಗೋ ಹಳೆಯದಕ್ಕಿಂತ ಕೊಂಚ ಭಿನ್ನವಾಗಿದೆ.

ನೂತನ ಲೋಗೋ ಅನಾವರಣಗೊಳಿಸುವುಕ್ಕೂ ಮುನ್ನ ಆರ್‌ಸಿಬಿ ಟ್ವಿಟರ್‌ನಲ್ಲಿ ಸಣ್ಣ ವೀಡಿಯೋದಲ್ಲಿ ಲೋಗೋದ ಬಗ್ಗೆ ಹೇಳಿಕೊಂಡಿತ್ತು. 'ಇದೇ ಕ್ಷಣಕ್ಕಾಗಿ ನೀವು ಕಾಯುತ್ತಿದ್ದಿರಿ. ಹೊಸ ದಶಕ, ಹೊಸ ಆರ್‌ಸಿಬಿ, ಹೊಸ ಲೋಗೋ,' ಎಂದು ಜೊತೆಗೊಂದು ಸಾಲನ್ನೂ ಬರೆದುಕೊಂಡಿತ್ತು.

ಹೊಸ ಲೋಗೋವಿನ ಬಗ್ಗೆ ಹೇಳಲು ಪ್ರಕಟಿಸಿದ ವೀಡಿಯೋಗೂ ಮುನ್ನ ಆರ್‌ಸಿಬಿ ಇನ್ನೊಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‌ನಲ್ಲಿ, 'ಹೆಸರಲ್ಲು ನೀವೆ, ಉಸಿರಲ್ಲು ನೀವೆ, ಎಲ್ಲೆಲ್ಲೂ ನೀವೇ ಸ್ಫೂರ್ತಿ,' ಎಂದು ಅಭಿಮಾನಿಗಳನ್ನುದ್ದೇಶಿಸಿ ಬರೆದುಕೊಂಡಿತ್ತು. ಅಂದ್ಹಾಗೆ ಆರ್‌ಸಿಬಿ ಲೋಗೋ ಬದಲಾಗುತ್ತಿರುವುದು ಇದು ಮೂರನೇ ಸಾರಿ.

ಬುಧವಾರ (ಫೆಬ್ರವರಿ 12) ಆರ್‌ಸಿಬಿ, ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಲೋಗೋ ತೆರವುಗೊಳಿಸಿತ್ತು. 2016ರಲ್ಲಿ ಫೈನಲ್ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡಗಳ (ಡೆಲ್ಲಿ, ಪಂಜಾಬ್) ಸಾಲಿನಲ್ಲಿದೆ. ಈ ಬಾರಿಯಾದರೂ ಆರ್‌ಸಿಬಿ ಹೊಸ ಹುಮ್ಮಸ್ಸಿನೊಂದಿಗೆ ಆಡಲಿ. ಕಪ್‌ ಗೆಲ್ಲದಿದ್ದರೂ ಅತ್ಯುತ್ತಮ ಪ್ರದರ್ಶನವಾದರೂ ನೀಡಿ ಅಭಿಮಾನಿಗಳ ರಂಜಿಸಲಿ ಎಂದು ಹಾರೈಸೋಣ.

Story first published: Friday, February 14, 2020, 11:02 [IST]
Other articles published on Feb 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+