IPL 2025: ಆರ್‍ಸಿಬಿ ಕಪ್ ಗೆಲುವಿನ ಅಭಿಯಾನ ಶುರು
ಈಡನ್ ಗಾರ್ಡನ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಸೀಸನ್‌ನ ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ನಡುವೆ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಆರ್‍ಸಿಬಿ 7 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಆರ್‌ಸಿಬಿ 2008 ರ ಐಪಿಎಲ್ ಸೀಸನ್‌ನ ಉದ್ಘಾಟನಾ ಸೋಲಿನ ಸೇಡನ್ನು ಯಶಸ್ವಿಯಾಗಿ ತೀರಿಸಿಕೊಂಡಿದೆ.
ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅಬ್ಬರ ಇನಿಂಗ್ಸ್ ಆಡಿದರು. ನಾಯಕ ಪಾಟಿದಾರ್ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು. ಈಡನ್ ಗಾರ್ಡನ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 177 ಗಳಿಸುವ ಮೂಲಕ ಜಯ ಸಾಧಿಸಿತು.

ಆರ್‌ಸಿಬಿ ಪರ ತಮ್ಮ ಮೊದಲ ಪಂದ್ಯವನ್ನು ಆಡಿದ ಫಿಲಿಪ್ ಸಾಲ್ಟ್ ಕೇವಲ 31 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 180.65 ರನ್‌ಗಳ ಸರಾಸರಿಯಲ್ಲಿ 56 ರನ್ ಗಳಿಸಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 163.89 ಸ್ಟ್ರೈಕ್ ರೇಟ್‌ನೊಂದಿಗೆ 59 ರನ್ ಗಳಿಸಿದರು. ಇಬ್ಬರೂ ತಂಡಕ್ಕೆ ಉತ್ತಮ ಆರಂಭ ನೀಡಿ ಮೊದಲ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ಆಡಿದರು.
ಫಿಲ್ ಸಾಲ್ಟ್ ಮತ್ತು ಕೊಹ್ಲಿ ನಂತರ ಕ್ರೀಸ್‌ಗೆ ಬಂದ ರಜತ್ ಪಾಟಿದಾರ್ ನಾಯಕನ ಆಟವಾಡಿದರು. ಅವರು 16 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರು. ಇದು ಆರ್‌ಸಿಬಿಯನ್ನು ಗೆಲುವಿನತ್ತ ಕೊಂಡೊಯ್ದಿತು. ಲಿಯಾಮ್ ಲಿವಿಂಗ್‌ಸ್ಟೋನ್ 5 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ಕಳಪೆ ಆರಂಭವನ್ನು ಪಡೆಯಿತು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮೊದಲ ಓವರ್‌ನಲ್ಲಿ ಕೇವಲ 4 ರನ್‌ಗಳಿಗೆ ಔಟಾದರು. ಆದರೆ ಸುನಿಲ್ ನರೈನ್, ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಎರಡನೇ ವಿಕೆಟ್‌ಗೆ ನೂರು ರನ್‌ಗಳ ಜೊತೆಯಾಟ ಆಡಿದರು. 10ನೇ ಓವರ್‌ನಲ್ಲಿ ನರೈನ್ (44) ಔಟಾದ ನಂತರ ಕೆಕೆಆರ್ ಇನ್ನಿಂಗ್ಸ್ ಕುಸಿತ ಕಂಡಿತು. ರಹಾನೆ (56) ಕೂಡ ಅರ್ಧಶತಕ ಪೂರೈಸಿ ತಂಡಕ್ಕೆ ನೆರವಾದರು.
ಇದಾದ ನಂತರ, ಅಂಗ್ಕ್ರಿಶ್ ರಘುವಂಶಿ ಮಾತ್ರ ಆರ್‌ಸಿಬಿ ಬೌಲರ್‌ಗಳನ್ನು ಎದುರಿಸಿ 30 ರನ್‌ಗಳನ್ನು ಸೇರಿಸಿದರು. ಒಂದು ಹಂತದಲ್ಲಿ 200 ರನ್ ದಾಟುವ ಭರವಸೆಯಲ್ಲಿದ್ದ ಕೆಕೆಆರ್ ಇನ್ನಿಂಗ್ಸ್ ಆರ್‍ಸಿಬಿ ಬಿಗುವಿನ ದಾಳಿನಿಂದ 174 ರನ್ ಗಳಿಗೆ ಕುಸಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications