IPL 2026 RCB: ಚೊಚ್ಚಲ ಐಪಿಎಲ್ ಆಡಲು ಸಜ್ಜಾದ ಆರ್‌ಸಿಬಿ ಖರೀದಿಸಿದ ಐವರು ಆಟಗಾರರು: ಇಲ್ಲಿದೆ ಮಾಹಿತಿ
IPL 2026 RCB: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಿಂದ ಆರಂಭವಾಗಲಿದ್ದು, ಅಂದು ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದುವರೆಗೂ ಯಾವುದೇ ಐಪಿಎಲ್ ಆಡಿರದ ಹೊಸ ಮುಖಗಳಿಗೆ ಮಣೆ ಹಾಕಿರುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಆರ್‌ಸಿಬಿ ಅಭಿಮಾನಿಗಳಿಗೆ ಈ ಬಾರಿ ಭರ್ಜರಿ ಕುತೂಹಲವಿದೆ. 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಬೆಂಗಳೂರು ತಂಡ ಹಲವು ಹೊಸ ಮುಖಗಳಿಗೆ ಮಣೆ ಹಾಕಿದೆ. ಐಪಿಎಲ್ 2026ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16, 2025ರಂದು ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆದಿತ್ತು.

ಮಿನಿ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಮುಖಗಳಾದ ಜೋರ್ಡನ್ ಕಾಕ್ಸ್, ಜಾಕೋಬ್ ಡಫಿ, ಸಾತ್ವಿಕ್ ದೇಸ್ವಾಲ್, ಕನಿಷ್ಕ ಚೌಹಾಣ್, ಮಂಗೇಶ್ ಯಾದವ್ ಅವರಿಗೆ ಮಣೆ ಹಾಕಿದೆ. ಇವರು ಐಪಿಎಲ್‌ಗೆ ಪ್ರವೇಶ ಮಾಡಿರುವುದು ಇದೇ ಮೊದಲು. ಇವರು ಯಾವ (ಬೌಲಿಂಗ್, ಬ್ಯಾಟಿಂಗ್, ಆಲ್‌ರೌಂಡರ್, ವಿಕೆಟ್ ಕೀಪರ್) ವಿಭಾಗದಲ್ಲಿ ಗುರುತಿಸಿಕೊಂಡಿದ್ಧಾರೆ ಎಂದು ಇಲ್ಲಿ ತಿಳಿಯೋಣ ಬನ್ನಿ.
ಹೊಸ ಮುಖಗಳಿಗೆ ಮಣೆ ಹಾಕಿದ ಆರ್‌ಸಿಬಿ: ಇಲ್ಲಿದೆ ಕಿರುಪರಿಚಯ
1. ಜೋರ್ಡನ್ ಕಾಕ್ಸ್: ಇಂಗ್ಲೆಂಡ್ ಮೂಲದ ಈ ಆಟಗಾರ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಇವರು ವಿಕೆಟ್ ಕೀಪಿಂಗ್ ಸಹ ಮಾಡುತ್ತಾರೆ. ಟಿ20 ಫಾರ್ಮ್ಯಾಟ್ ಪಂದ್ಯಗಳಲ್ಲಿ ತೋರಿದ ಅದ್ಭುತ ಪ್ರದರ್ಶನ ಇವರನ್ನು ಐಪಿಎಲ್‌ಗೆ ಕರೆತಂದಿದೆ. ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಬ್ಯಾಟರ್ ಇವರಾಗಿದ್ದಾರೆ.
2. ಜಾಕೋಬ್ ಡಫ್ಪಿ: ನ್ಯೂಜಿಲೆಂಡ್‌ನ ಈ ವೇಗಿ ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ಹೊಸ ಬಲ ತುಂಬಲಿದ್ದಾರೆ. ಇವರ ಬಲಗೈ ವೇಗದ ಬೌಲರ್ ಆಗಿದ್ದ, ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವಲ್ಲಿ ನಿಪುಣರಾಗಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಿವೀಸ್ ಪರ ಉತ್ತಮ ಪ್ರದರ್ಶನ ನೀಡಿದ್ದು, ಮೊದಲ ಬಾರಿಗೆ ಐಪಿಎಲ್‌ಗೆ ಪಾದರ್ಪಣೆ ಮಾಡಿದ್ದಾರೆ.
3. ಸಾತ್ವಿಕ್ ದೇಸ್ವಾಲ್ (ಭಾರತ): ಇವರು ದೇಶೀಯ ಕ್ರಿಕೆಟ್‌ನಿಂದ ಬಂದಿರುವ ಪ್ರತಿಭಾವಂತ ಆಟಗಾರ ಆಗಿದ್ದು, ಲೆಗ್-ಸ್ಪಿನ್ ಬೌಲರ್- ಆಲ್ ರೌಂಡರ್ ಆಗಿದ್ದಾರೆ. ಇವರು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಇವರ ಮೇಲೆ ಭರವಸೆ ಇಟ್ಟಿದ್ದು, ಸ್ಪಿನ್ ವಿಭಾಗದಲ್ಲಿ ಇವರು ಅಚ್ಚರಿಯ ಆಯ್ಕೆಯಾಗಿದ್ದಾರೆ.
4. ಕನಿಷ್ಕ ಚೌಹಾಣ್ (ಭಾರತ): ಇವರು ಅಂಡರ್-19 ಹಂತದಲ್ಲಿ ಗಮನ ಸೆಳೆದ ಯುವ ಆಟಗಾರನಾಗಿದ್ದು, ಬೌಲಿಂಗ್ ಮತ್ತು ಬ್ಯಾಟಿಂಗ್ (ಆಲ್‌ರೌಂಡರ್) ಎರಡರಲ್ಲೂ ನೆರವಾಗಬಲ್ಲರು. ಇವರು ಕೂಡ ಐಪಿಎಲ್‌ಗೆ ಹೊಸಬರಾಗಿದ್ದಾರೆ.
5. ಮಂಗೇಶ್ ಯಾದವ್ (ಭಾರತ): ಉತ್ತರ ಪ್ರದೇಶದ ಈ ಆಟಗಾರ ವೇಗದ ಬೌಲಿಂಗ್‌ಗೆ ಹೆಸರುವಾಸಿ. ಇವರು ಬಲಗೈ ವೇಗದ ಬೌಲರ್ ಆಗಿದ್ದು, ಸ್ಥಳೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರನ್ನು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಗುರುತಿಸಿ ಹರಾಜಿನಲ್ಲಿ ಖರೀದಿಸಿದೆ. ಇವರ ವೇಗ ಮತ್ತು ಲಯ ತಂಡಕ್ಕೆ ಸಹಕಾರಿಯಾಗಲಿದೆ ಅಂತಲೇ ಹೇಳಬಹುದು.
ಆರ್‌ಸಿಬಿ ಯಾರಿಗೆ ಎಷ್ಟು ಹಣ ನೀಡಿದೆ?
* ಕನಿಷ್ಕ್ ಚೌಹಾಣ್: ₹30,00,000
* ಮಂಗೇಶ್ ಯಾದವ್: ₹5,20,00,000
* ಜಾಕೋಬ್ ಡಫ್ಫಿ: ₹2,00,00,000
* ಜೋರ್ಡಾನ್ ಕಾಕ್ಸ್: ₹75,00,000
* ಸಾತ್ವಿಕ್ ದೇಸ್ವಾಲ್: ₹30,00,000
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಬಾರಿ ಅನುಭವಿಗಳ ಜೊತೆಗೆ ಈ ಐವರು ಯುವ ಮತ್ತು ಹೊಸ ಆಟಗಾರರನ್ನು ಸೇರಿಸಿಕೊಳ್ಳುವ ಮೂಲಕ ಸಮತೋಲಿತ ತಂಡವನ್ನು ಕಟ್ಟಲು ಪ್ರಯತ್ನಿಸಿದೆ. ಇವರೆಲ್ಲರಿಗೂ ಇದು ಚೊಚ್ಚಲ ಐಪಿಎಲ್ ಆಗಿರುವುದರಿಂದ, ಇವರ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಆರ್‌ಸಿಬಿ ಸಂಪೂರ್ಣ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್. ಮಿನಿ ಹರಾಜಿನಲ್ಲಿ ಈ ಪಟ್ಟಿಗೆ ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್ ಸೇರ್ಪಡೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications