IPL 2025: ಡೆಲ್ಲಿಗೆ ಲಗಾಮು ಹಾಕಿದ ಭುವನೇಶ್ವರ್ ಕುಮಾರ್
ರಾಜಸ್ಥಾನ ರಾಯಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ ದುಬಾರಿ ಎನಿಸಿಕೊಂಡಿದ್ದರು. ಆದರೆ, ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭುವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
ತವರಿನಲ್ಲಿ ಬಿಗ್ ಸ್ಕೋರ್ ನಿರೀಕ್ಷೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಕ್ಕೆ ಭುವನೇಶ್ವರ್ ಕುಮಾರ್ ಬ್ರೇಕ್ ಹಾಕಿದರು. ಪರಿಣಾಮಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‍ಗಳಲ್ಲಿ 164 ರನ್ ಗಳಿಸಲು ಶಕ್ತವಾಯಿತು. ಈ ಗುರಿಯನ್ನು ಬೆಂಗಳೂರು ತಂಡ ಸುಲಭವಾಗಿ ಕೇವಲ 18.3 ಓವರ್‍ಗಳಲ್ಲಿ 165 ರನ್ ಗಳಿಸಿ ಗೆದ್ದು ಬೀಗಿತು.

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ತವರಿನಲ್ಲಿ ನಿರೀಕ್ಷಿಸಿದಷ್ಟು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕರಾದ ಅಭಿಷೇಕ್ ಪೊರೆಲ್ (28) ಮತ್ತು ಫಾಫ್ ಡು ಪ್ಲೆಸಿಸ್ (22) ತಮ್ಮ ಆರಂಭವನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸುವಲ್ಲಿ ವಿಫಲರಾದರು.
ಕೆಎಲ್ ರಾಹುಲ್ ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ, ರಾಹುಲ್ 41 ರನ್‌ಗಳಿಗೆ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರಿ. ಟ್ರಿಸ್ಟಾನ್ ಸ್ಟಬ್ಸ್ ಅವರ ಬಿರುಸಿನ ಬ್ಯಾಟಿಂಗ್ ಡೆಲ್ಲಿ ತಂಡವು ಬಿಗ್ ಸ್ಕೋರ್ ತಲುಪುವ ಭರವಸೆಯನ್ನು ಹುಟ್ಟುಹಾಕಿತು. ಆದರೆ ಅವರು ಕೂಡ 18 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 34 ರನ್ ಗಳಿಸಿದ ಭುವನೇಶ್ವರ್ ಬಲೆಗೆ ಬಿದ್ದರು.
ಡೆಲ್ಲಿ ನಾಯಕ ಅಕ್ಷರ್ ಪಟೇಲ್ (15) ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಅಶುತೋಷ್ ಶರ್ಮಾ (2) ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಭುವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಈ ಮೂಲಕ ಡೆಲ್ಲಿ ತಂಡ ಬಿಗ್ ಸ್ಕೋರ್ ಕಲೆ ಹಾಕುವುದಲ್ಲಿ ಅಡ್ಡಿಯಾದರು. ಮತ್ತೊಂದೆಡೆ ಜೋಶ್ ಹೇಜಲ್‌ವುಡ್ ಎರಡು ವಿಕೆಟ್ ಪಡೆದರು. ಯಶ್ ದಯಾಳ್ ಮತ್ತು ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications