For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲೇ ಬಿಗ್ ಡೀಲ್: ₹16,000 ಕೋಟಿಗೆ ಬಿರ್ಲಾ ಗ್ರೂಪ್‌ ಪಾಲಾದ ಆರ್‌ಸಿಬಿ

RCB Sold: ಐಪಿಎಲ್ 2026ರ ಸೀಸನ್ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ನಡುವೆಯೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ನೇತೃತ್ವದ ಒಕ್ಕೂಟವು ಅಂದಾಜು ₹16,000 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ತಿಳಿದುಬಂದಿದೆ.

ಈ ಒಪ್ಪಂದವು ಅಂದಾಜು ₹16,000 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಒಪ್ಪಂದಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಫ್ರಾಂಚೈಸಿಯ ಮಾಲೀಕತ್ವವನ್ನು ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಹೊಂದಿದೆ.

Royal Challengers Bengaluru Sold for 16 000 Crore Ahead of Indian Premier League 2026 Know details

₹16,000 ಕೋಟಿಗೂ ಅಧಿಕ ಮೌಲ್ಯದ ಈ ವ್ಯವಹಾರವು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಒಪ್ಪಂದಗಳಲ್ಲಿ ಒಂದಾಗಿ ದಾಖಲಾಗಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಸಂಸ್ಥೆಗಳು ಜಂಟಿಯಾಗಿ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಿವೆ.

ಆರ್‌ಸಿಬಿ ಫ್ರಾಂಚೈಸಿಗೆ ಹೊಸ ಸಾರಥಿ

ಆದಿತ್ಯ ಬಿರ್ಲಾ ಸಮೂಹದ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್‌ಸಿಬಿಯ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2025ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಚಾಂಪಿಯನ್ ಪಟ್ಟಕ್ಕೇರಿದ್ದು ಈ ಬೃಹತ್ ಮೌಲ್ಯದ ಒಪ್ಪಂದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಬಹುದು.

ಕುಮಾರ್ ಮಂಗಲಂ ಬಿರ್ಲಾ ನೇತೃತ್ವದ ಭಾರತದ ಬಹುರಾಷ್ಟ್ರೀಯ ಸಂಸ್ಥೆ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿ ಮಾಡಿವೆ. ಇವರೊಂದಿಗೆ ಅಮೆರಿಕದ ಕ್ರೀಡಾ ಉದ್ಯಮಿ ಡೇವಿಡ್ ಬ್ಲಿಟ್ಜರ್ ನೇತೃತ್ವದ ಬೋಲ್ಟ್ ವೆಂಚರ್ಸ್ ಕೈಜೋಡಿಸಿದೆ. ಬ್ಲಿಟ್ಜರ್ ಅವರು ಫಿಲಡೆಲ್ಫಿಯಾ 76ers (NBA) ಮತ್ತು ಕ್ರಿಸ್ಟಲ್ ಪ್ಯಾಲೇಸ್ (ಇಂಗ್ಲಿಷ್ ಪ್ರೀಮಿಯರ್ ಲೀಗ್) ನಂತಹ ಪ್ರಖ್ಯಾತ ಕ್ರೀಡಾ ತಂಡಗಳಲ್ಲಿ ಪ್ರಮುಖ ಪಾಲನ್ನು ಹೊಂದಿದ್ದಾರೆ. ಬ್ಲ್ಯಾಕ್‌ಸ್ಟೋನ್ ತನ್ನ 'ಬ್ಲ್ಯಾಕ್‌ಸ್ಟೋನ್ ಪ್ರೈವೇಟ್ ಇಕ್ವಿಟಿ ಸ್ಟ್ರಾಟಜೀಸ್' ಮೂಲಕ ಈ ಒಪ್ಪಂದದಲ್ಲಿ ಹೂಡಿಕೆ ಮಾಡಿದೆ ಎಂದು ತಿಳಿದುಬಂದಿದೆ.

ಒಂದೇ ದಿನ ಎರಡು ಫ್ರಾಂಚೈಸಿಗಳ ಮಾರಾಟ

ಮಂಗಳವಾರ ಐಪಿಎಲ್‌ನ ಎರಡು ಫ್ರಾಂಚೈಸಿಗಳು ಮಾರಾಟವಾಗಿವೆ. ಮೊದಲು ಉದ್ಯಮಿ ಕಲ್ ಸೋಮಾನಿ ನೇತೃತ್ವದ ಅಮೆರಿಕ ಮೂಲದ ಒಕ್ಕೂಟವು ಸುಮಾರು 1.63 ಬಿಲಿಯನ್ ಯುಎಸ್ ಡಾಲರ್ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಖರೀದಿಸಿದೆ ಎಂದು ವರದಿಯಾಗಿದೆ. ಈ ಒಕ್ಕೂಟಕ್ಕೆ ಜಾಗತಿಕ ದೈತ್ಯ ಸಂಸ್ಥೆಗಳಾದ ವಾಲ್ಮಾರ್ಟ್ ಮತ್ತು ಫೋರ್ಡ್ ಕುಟುಂಬಗಳ ಬೆಂಬಲವಿದೆ.

ರಾಜಸ್ಥಾನ್ ರಾಯಲ್ಸ್ ಒಪ್ಪಂದ ನಡೆದ ಕೆಲವೇ ಗಂಟೆಗಳಲ್ಲಿ, ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್‌ ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದೆ. ಇದು ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಒಪ್ಪಂದಗಳಲ್ಲಿ ಒಂದಾಗಿ ದಾಖಲಾಗಿದೆ. ಒಂದೇ ದಿನದಲ್ಲಿ ಐಪಿಎಲ್‌ನ ಎರಡು ಪ್ರಮುಖ ತಂಡಗಳು ಬೃಹತ್ ಮೊತ್ತಕ್ಕೆ ಹೊಸ ಮಾಲೀಕರ ಪಾಲಾಗಿದ್ದು, ಇದು ಭಾರತೀಯ ಕ್ರಿಕೆಟ್‌ನ ಜಾಗತಿಕ ಮೌಲ್ಯ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ವಿಶೇಷವೆಂದರೆ, ಆರ್‌ಸಿಬಿ ತಂಡವು ಈ ಶನಿವಾರದಿಂದ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಮೈದಾನಕ್ಕಿಳಿಯಲಿದ್ದು, ಪಂದ್ಯಾವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಈ ಮಾಲೀಕತ್ವದ ಬದಲಾವಣೆ ನಡೆದಿದೆ. ಆರ್‌ಸಿಬಿ ತಂಡವು ಮೈದಾನದಲ್ಲಿ ಮತ್ತೊಮ್ಮ ಟ್ರೋಫಿ ಗೆಲ್ಲಲು ಸಜ್ಜಾಗುತ್ತಿರುವಂತೆಯೇ, ಮೈದಾನದ ಹೊರಗೆ ತಂಡದ ಆಡಳಿತ ಮಂಡಳಿಯಲ್ಲಿ ಒಂದು ಹೊಸ ಯುಗ ಆರಂಭವಾಗಿದೆ.

ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಮತ್ತು ಮಾಜಿ ವೃತ್ತಿಪರ ಕ್ರಿಕೆಟಿಗರಾದ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಫ್ರಾಂಚೈಸಿಯ ಹೊಸ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಕ್ರಿಕೆಟ್ ಹಿನ್ನೆಲೆ ಹೊಂದಿರುವ ಇವರು ತಂಡದ ಆಡಳಿತಕ್ಕೆ ಹೊಸ ದೃಷ್ಟಿಕೋನ ನೀಡಲಿದ್ದಾರೆ. ಇನ್ನೂ ಟೈಮ್ಸ್ ಇಂಟರ್ನೆಟ್‌ನ ಅಧ್ಯಕ್ಷರಾದ ಸತ್ಯನ್ ಗಜ್ವಾನಿ ಅವರನ್ನು ತಂಡದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆದಿತ್ಯ ಬಿರ್ಲಾ ಗ್ರೂಪ್‌ ಹೇಳಿದ್ದೇನು?

"ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಶಕ್ತಿಯಾಗಿ ಬೆಳೆದಿದೆ ಮತ್ತು ಭಾರತೀಯ ಕ್ರಿಕೆಟ್‌ನ ಮುಖಬೆಲೆಯನ್ನು ಬದಲಿಸಿದೆ. ಆಧುನಿಕ ಕ್ರೀಡಾ ಜಗತ್ತಿನ ಅತ್ಯಂತ ಆಕರ್ಷಕ ಫ್ರಾಂಚೈಸಿಗಳಲ್ಲಿ ಒಂದಾದ ಆರ್‌ಸಿಬಿ, ನಮ್ಮ ಸಂಸ್ಥೆಯ ಪರಂಪರೆಯನ್ನು ಜಾಗತಿಕವಾಗಿ ವಿಸ್ತರಿಸಲು ಒಂದು ವಿಶಿಷ್ಟ ವೇದಿಕೆಯನ್ನು ನೀಡಿದೆ. ಇದರ ಭಾಗವಾಗಲು ನಾವು ಸಂತೋಷಪಡುತ್ತೇವೆ ಮತ್ತು ಈ ಅದ್ಭುತ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದೇವೆ," ಎಂದು ಆದಿತ್ಯ ಬಿರ್ಲಾ ಗ್ರೂಪ್‌ ಹೇಳಿದೆ.

ಡೇವಿಡ್ ಬ್ಲಿಟ್ಜರ್ ಹೇಳಿದ್ದೇನು?

ಬ್ಲ್ಯಾಕ್‌ಸ್ಟೋನ್ ಮತ್ತು ಬೋಲ್ಟ್ ವೆಂಚರ್ಸ್ ಸೇರ್ಪಡೆಯು ಆರ್‌ಸಿಬಿಯನ್ನು ಅಂತಾರಾಷ್ಟ್ರೀಯ ಕ್ರೀಡಾ ಗುಣಮಟ್ಟಕ್ಕೆ ಏರಿಸುವ ಮುನ್ಸೂಚನೆಯಾಗಿದೆ. ಇನ್ನು ಬೋಲ್ಟ್ ವೆಂಚರ್ಸ್ ಸ್ಥಾಪಕರಾದ ಡೇವಿಡ್ ಬ್ಲಿಟ್ಜರ್ ಮಾತನಾಡಿದ್ದು, "ಆರ್‌ಸಿಬಿ ವಿಶ್ವಮಟಗದಲ್ಲಿ ಅಭಿಮಾನಿ ಬಳಗವನ್ನು ಹೊಂದಿದೆ. ವಿಶ್ವದಾದ್ಯಂತ ಹಲವು ಕ್ಲಬ್‌ಗಳು ಮತ್ತು ಲೀಗ್‌ಗಳಲ್ಲಿ ಹೂಡಿಕೆ ಮಾಡಿರುವ ನನಗೆ, ಆರ್‌ಸಿಬಿಯಲ್ಲಿರುವ ಅವಕಾಶವು ಅತ್ಯಂತ ವಿಶಿಷ್ಟವಾದುದು ಎಂದು ಅನಿಸುತ್ತದೆ. ನಮ್ಮ ಪಾಲುದಾರರು ಮತ್ತು ಬಿಸಿಸಿಐ ಜೊತೆಗೂಡಿ ಈ ಚಾಂಪಿಯನ್ ತಂಡದ ಯಶಸ್ಸನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ," ಎಂದು ಹೇಳಿದ್ದಾರೆ.

ಬಿಎಕ್ಸ್‌ಪಿಇ ಸಿಇಒ ವಿರಲ್ ಪಟೇಲ್ ಮಾತನಾಡಿ, "ಆರ್‌ಸಿಬಿಯಲ್ಲಿ ಹೂಡಿಕೆ ಮಾಡುತ್ತಿರುವುದು ನಮಗೆ ಸಂತೋಷ ತಂದಿದೆ. ಬಲಿಷ್ಠ ಬ್ರ್ಯಾಂಡ್ ಮತ್ತು ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ಇದು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ತಂಡಗಳಲ್ಲಿ ಒಂದಾಗಿದೆ. ತಂಡದ ಸುದೀರ್ಘ ಪರಂಪರೆ ಮತ್ತು ಯಶಸ್ಸನ್ನು ಬೆಂಬಲಿಸಲು ನಾವು ಎದುರು ನೋಡುತ್ತಿದ್ದೇವೆ," ಎಂದು ಹೇಳಿದರು.

ಆರ್ಯಮನ್ ವಿಕ್ರಮ್ ಬಿರ್ಲಾ ಹೇಳಿದ್ದೇನು?

ಫ್ರಾಂಚೈಸಿಗೆ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿರುವ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಈ ಬದಲಾವಣೆಯನ್ನು ಒಂದು ಗೌರವ ಎಂದು ಭಾವಿಸಿದ್ದಾರೆ. "ಆರ್‌ಸಿಬಿಯ ಮುಂದಿನ ಬೆಳವಣಿಗೆಯ ಹಂತವನ್ನು ರೂಪಿಸಲು ಈ ಪಾಲುದಾರಿಕೆಯಲ್ಲಿ ಒಂದಾಗಿರುವುದು ಹೆಮ್ಮೆಯ ವಿಷಯ. ಮೈದಾನದಲ್ಲಿ, ಗ್ರೂಪ್‌ನಲ್ಲಿ ಅಭಿಮಾನಿಗಳಿಗಾಗಿ ನಾವು 'ಪ್ಲೇ ಬೋಲ್ಡ್' ಸಂಸ್ಕೃತಿಯನ್ನು ಮುಂದುವರಿಸುತ್ತೇವೆ," ಎಂದು ಹೇಳಿದ್ದಾರೆ.

Story first published: Tuesday, March 24, 2026, 23:57 [IST]
Other articles published on Mar 24, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+