RCB ನಮ್ಮ ಸಿಂಹಗಳು: ಮುಂಬೈ ವಿರುದ್ಧ ರಜತ್ ಪಡೆ ಗೆದ್ದ ಬಳಿಕ ವಿಜಯ್ ಮಲ್ಯ ಪೋಸ್ಟ್
ಮುಂಬೈ: ವಾಂಖೆಡೆ ಅಂಗಳದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿತು. ಆರ್‌ಸಿಬಿ ಪಂದ್ಯದಲ್ಲಿ ಗೆಲುವು ದಾಖಲಿಸುತ್ತಿದ್ದಂತೆ ಮಾಜಿ ಮಾಲೀಕ ವಿಜಯ್ ಮಲ್ಯ ಶುಭಕೋರಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 240 ರನ್ ಸೇರಿಸಿತು. ಈ ವೇಳೆ ಟಾಪ್ ಆಡರ್ ಬ್ಯಾಟರ್‌ಗಳಾದ ಫಿಲ್ ಸಾಲ್ಟ್ (78), ವಿರಾಟ್ ಕೊಹ್ಲಿ (50), ರಜತ್ ಪಾಟಿದಾರ್ (53), ಟೀಮ್ ಡೇವಿಡ್ (34) ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 222 ರನ್ ಸೇರಿಸಿ ಸೋಲು ಕಂಡಿತು.

ಆರ್‌ಸಿಬಿ ಮುಂಬೈನಲ್ಲಿ ಜಯ ದಾಖಲಿಸುತ್ತಿದ್ದಂತೆ ಆರ್‌ಸಿಬಿ ನಮ್ಮ ಸಿಂಹಗಳು ಎಂದು ಟ್ವೀಟ್ ಮಾಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ಮುಂಬೈ ಇಂಡಿಯನ್ಸ್ ತಂಡವನ್ನು ಅವರದ್ದೇ ತವರಿನಲ್ಲಿ ಆರ್‌ಸಿಬಿ ಸೋಲಿಸಿತು. ಈ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ.
ವಿಜಯ್ ಮಲ್ಯ ಅವರು 2016ರಿಂದ ಭಾರತದಿಂದ ಹೊರಗಿದ್ದಾರೆ. ಇವರು ಸದ್ಯ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಹಲವಾರು ಸಾವಿರ ಕೋಟಿ ಮೊತ್ತದ ಸಾಲ ಮರುಪಾವತಿ ಮಾಡದ ಆರೋಪ ಎದುರಿಸುತ್ತಿದ್ದಾರೆ. ಸಾವಿರ ಕೋಟಿಗಿಂತ ಹೆಚ್ಚು ಹಣದ ವಂಚನೆ ಮಾಡಿ, ವಿಚಾರಣೆಗೆ ಹೆದರಿ ದೇಶ ಬಿಟ್ಟು ಹೋದವರನ್ನು ಫ್ಯುಜಿಟಿವ್ ಎಕನಾಮಿಕ್ ಅಫೆಂಡರ್' ಎಂದು ಕರೆಯಲಾಗುತ್ತದೆ.
ಆರ್‌ಸಿಬಿ, ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್ ಒಂದನ್ನು ಸೋತಿದ್ದು ಬಿಟ್ಟರೆ ಉಳಿದ ವಿಭಾಗಗಳಲ್ಲಿ ಮೆಲುಗೈ ಸಾಧಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಆರಂಭವನ್ನು ನೀಡಿದರು. ಈ ಜೋಡಿ ಪವರ್ ಪ್ಲೇನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಯಿತು. ಟಾಪ್ ಆರ್ಡರ್ ಆಟಗಾರರ ಭರ್ಜರಿ ಆಟದ ನೆರವಿನಿಂದ ಆರ್‌ಸಿಬಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು.
ಪಂದ್ಯದ ಫಲಿತಾಂಶ
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆದರೆ ತಂಡದ ಮೊತ್ತ 57 ಆಗಿದ್ದಾಗ ರೋಹಿತ್ ಶರ್ಮಾ 19 ರನ್‌ಗಳಿಸಿ ಗಾಯದ ಸಮಸ್ಯೆಯಿಂದ ಹೊರ ನಡೆದರು. ಆರಂಭಿಕ ರಯನಾ ರಿಕಲ್ಟನ್ (37) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಹಾರ್ದಿಕ್ ಪಾಂಡ್ಯ (40) ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ನಡೆಸಿದರೂ ಸಹ ತಂಡಕ್ಕೆ ಜಯದ ಮಾಲೆ ತೊಡಿಸಲಿಲ್ಲ. ಶೆರ್ಫೇನ್ ರುದರ್ಫೋರ್ಡ್ (71) ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿದರು. ಈ ಸೋಲಿನ ಮೂಲಕ ಮುಂಬೈ ಇಂಡಿಯನ್ಸ್ ಅಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications