ಸಂಭ್ರಮಾಚರಣೆಯ ವೇಳೆ ಕಾಲ್ತಳಿತ: ಮೃತರ ನೆನಪಿಗೆ ಆರ್‌ಸಿಬಿ ವಿಶೇಷ ಕಾರ್ಯಕ್ರಮ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ 17 ವರ್ಷ ವಿಫಲವಾಗಿತ್ತು. ಆದರೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಆರ್‌ಸಿಬಿ ಟ್ರೋಫಿ ಗೆಲುವಿನ ನಗೆ ಬೀರಿತ್ತು. ಜೂನ್ 3 ರಂದು ಅಹಮದಾಬಾದ್ ಅಂಗಳದಲ್ಲಿ 6 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಚಾಂಪಿಯನ್ ಪಟ್ಟದ ಸಂಭ್ರಮಾಚರಣೆ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ರಾತ್ರಿಯಲ್ಲಾ ನಡೆದಿತ್ತು. ಇನ್ನು ಜೂನ್ 4 ರಂದು ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಆಚರಿಸಿಕೊಳ್ಳುವ ಆಸೆ ಆರ್‌ಸಿಬಿ ತಂಡದ್ದಾಗಿತ್ತು. ಆದರೆ ಆ ಒಂದು ಕಹಿ ಘಟನೆ ಆರ್‌ಸಿಬಿ ತಂಡವನ್ನು ಬಹುವಾಗಿ ಕಾಡಿತ್ತು.
ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯನ್ನು ಕಣ್ಣು ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಮೃತ ಪಟ್ಟಿದ್ದರು. ಈ ಘಟನೆ ಆರ್‌ಸಿಬಿಗೆ ಕಪ್ಪು ಚುಕ್ಕೆ ಇಟ್ಟಿತ್ತು. ಇದರಿಂದ ಅಭಿಮಾನಿಗಳಿಗೆ ಬಹಳ ಬೇಸರವಾಗಿತ್ತು. ಮೂರು ತಿಂಗಳ ಬಳಿಕ ಆರ್‌ಸಿಬಿ ಅಭಿಮಾನಿಗಳಿಗಾಗಿ ಆರ್‌ಸಿಬಿ ಕೇರ್ಸ್ ಎಂಬ ಸಾಮಾಜಿಕ ತಾಣದಲ್ಲಿ ಪೇಜ್ ಓಪನ್ ಮಾಡಿತು. ಈ ಮೂಲಕ ಮೂರು ತಿಂಗಳ ಬಳಿಕ ಎಂಟ್ರಿ ನೀಡಿದ್ರೂ, ಅಭಿಮಾನಿಗಳಿಗೆ ಮುದ ನೀಡುವ ಸುದ್ದಿಯನ್ನು ನೀಡಿತು. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ನೀಡುವುದಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಘೋಷಿಸಿತು.

ಈಗ ಆರ್‌ಸಿಬಿ ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಕಾಲ್ತುಳಿತದ ವೇಳೆ ಅಂಟಿಕೊಂಡಿದ್ದ ಕಪ್ ಚುಕ್ಕೆಯನ್ನು ತೊಡೆದು ಹಾಕಲು ಶತ ಪ್ರಯತ್ನ ಮಾಡುತ್ತಿದೆ. ತನ್ನಿಂದ ಆದ ತಪ್ಪಿಗೆ ಪಶ್ಚಾತಾಪ ಪಡುತ್ತಿರುವ ಆರ್‌ಸಿಬಿ ಅಭಿಮಾನಿಗಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ. ಅಭಿಮಾನಿಗಳಿಗಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲು ಕೂಡ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಲ್ಲಿ ಮಡಿದವರಿಗೆ ಗೌರವ ಸೂಚಿಸುಚಂತೆ ಆಗಿದೆ. ಈ ಮೂಲಕ ವಿಶ್ವದ್ಯಂತ ಇರೋ ಆರ್‌ಸಿಬಿ ಅಭಿಮಾನಿಗಳ ಕಥೆಗಳನ್ನು ಹೆಸರುಗಳನ್ನು ವಿಶೇಷ ರೀತಿಯಲ್ಲಿ ಗೌರವ ಸೂಚಿಸುವ ಕ್ರಮವಾಗಿದೆ.
ಅಭಿಮಾನಿಗಳಿಗೆ ವಿಶೇಷ ಪ್ಲ್ಯಾನ್
ಆರ್‌ಸಿಬಿ ಬರಿ ಹಣಕಾಸಿನ ನೆರವು ಮಾತ್ರವಲ್ಲದೆ ಅದರ ಹೊರತಾಗಿಯೂ ಸಹಾಯ ಮಾಡಲು ಆರ್‌ಸಿಬಿ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿಕೊಂಡಿದೆ. ದುರಂತದಲ್ಲಿ ತೊಂದರೆಗೀಡಾದ ಜನರ ಬೆಂಬಲಕ್ಕೆ ನಿಲ್ಲುವ ವಾಗ್ದಾನ ಮಾಡಿದೆ. ಅಲ್ಲದೆ ಕ್ರೌಡ್ ಮ್ಯಾನೇಜ್ಮೆಂಟ್‌ಗೆ ಹೊಸ ಪ್ಲ್ಯಾನ್ ರೂಪಿಸಲು ಆರ್‌ಸಿಬಿ ಸಿದ್ಧವಾಗಿದೆ. ಕೆಎಸ್‌ಸಿಎ, ಬಿಸಿಸಿಐ ಜೊತೆಗೂಡಿ ಕ್ರೌಡ್ ಮ್ಯಾನೇಜ್ಮೆಂಟ್‌ಗೆ ಕ್ರಮ ಕೈಗೊಳ್ಳಲಿದೆ. ಇದೇ ವೇಳೆ ವಿಶೇಷವಾದ ತರಬೇತಿಯನ್ನು ನೀಡಲು ಆರ್‌ಸಿಬಿ ರೂಪು ರೇಷೆ ಸಿದ್ಧಪಡಿಸಿಕೊಂಡಿದೆ. ಇನ್ನು ಹಲವು ಜನಾಂಗಗಳ ಶಿಕ್ಷಣ ಆರೋಗ್ಯ, ಸೇರಿದಂತೆ ಮೂಲಭೂತ ಅಗತ್ಯಗಳಿಗೆ ನೆರವಾಗಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications