IPL 2025: ಆರ್‌ಸಿಬಿಗೆ "ಗುರು" ಬಲವೋ, "ರಾಹು" ಕಾಟವೋ
ಐಪಿಎಲ್ 2025ರ ಮತ್ತೊಂದು ಹೈವೋಲ್ಟೇಜ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಅಂದರೆ ಗುರುವಾರ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇದು ಇಬ್ಬರ ಯುವ ನಾಯಕರ ನಡುವಿನ ಹೋರಾಟವಾಗಿದೆ. ಒಂದು ಕಡೆ ಡೆಲ್ಲಿ ತಂಡವನ್ನು ಅಕ್ಸರ್ ಪಟೇಲ್ ಮುನ್ನಡೆಸುತ್ತಿದ್ದರೆ, ಆರ್‌ಸಿಬಿ ತಂಡಕ್ಕೆ ರಜತ್ ಪಾಟಿದಾರ್ ನಾಯಕತ್ವ ವಹಿಸಿದ್ದಾರೆ.
ಆರ್‍ಸಿಬಿ ತವರಿನಲ್ಲಿ ಪಂದ್ಯವನ್ನು ಆಡುತ್ತಿದ್ದರೂ, ಡೆಲ್ಲಿ ತಂಡದ ಸ್ಟಾರ್ ಆಟಗಾರರಾದ ಫಾಪ್ ಡು ಪ್ಲೆಸಿಸ್ ಹಾಗು ಕೆಎಲ್ ರಾಹುಲ್ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಐಪಿಎಲ್ 2024 ರಲ್ಲಿ ಫಾಪ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕರಾಗಿದ್ದರು. ಆದರೆ ಈ ಬಾರಿ ಆರ್‌ಸಿಬಿ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ. ಇದಲ್ಲದೆ, ಕೆಎಲ್ ರಾಹುಲ್ ಕೂಡ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಬಿಡ್ ಮಾಡದ ತಮ್ಮ ಮಾಜಿ ತವರು ತಂಡ ಆರ್‍ಸಿಬಿ ವಿರುದ್ಧ ಮಿಂಚಲು ಸಿದ್ಧರಾಗಿದ್ದಾರೆ.

ಆರ್‌ಸಿಬಿ ತಂಡದ ಪ್ರದರ್ಶನವೂ ಇಲ್ಲಿವರೆಗೆ ಉತ್ತಮವಾಗಿದೆ. ಆರ್‌ಸಿಬಿ ಆಡಿರುವ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಕಳೆದ ಪಂದ್ಯದಲ್ಲಿ ಮುಂವೈ ಇಂಡಿಯನ್ಸ್ ತಂಡವನ್ನು 10 ವರ್ಷಗಳ ಬಳಿಕ ವಾಂಖೆಡೆ ಮೈದಾನದಲ್ಲಿ ಆರ್‍ಸಿಬಿ ಸೋಲಿಸಿತು. ಇದು ಆರ್‍ಸಿಬಿ ತಂಡದ ಗೆಲುವಿನ ಉತ್ಸಾಹವನ್ನು ಹೆಚ್ಚಿಸಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದ್ದಾರೆ.
ಟಾಪ್ ರನ್ ಗೆಟರ್ಸ್
ವಿರಾಟ್ ಕೊಹ್ಲಿ- 4 ಪಂದ್ಯ, 164 ರನ್
ರಜತ್ ಪಾಟಿದಾರ್- 4 ಪಂದ್ಯ, 161 ರನ್
ಫಿಲ್ ಸಾಲ್ಟ್- 4 ಪಂದ್ಯ, 106 ರನ್
ಟಾಪ್ ವಿಕೆಟ್ ಟೇಕರ್ಸ್
ಜೋಶ್ ಹೇಜಲ್‌ವುಡ್- 4 ಪಂದ್ಯ, 9 ವಿಕೆಟ್
ಕೃನಾಲ್ ಪಾಂಡ್ಯ- 4 ಪಂದ್ಯ, 7 ವಿಕೆಟ್
ಯಶ್ ದಯಾಳ್- 4 ಪಂದ್ಯ, 5 ವಿಕೆಟ್
ಸಂಭಾವ್ಯ ಪ್ಲೇಯಿಂಗ್-11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಾಸಿಖ್ ಸಲಾಂ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಐಪಿಎಲ್ 2025 ರ ಡೆಲ್ಲಿ ಕ್ಯಾಪಿಟಲಸ್ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಇಲ್ಲಿವರೆಗೆ ಡೆಲ್ಲಿ ಆಡಿರುವ 3 ಪಂದ್ಯಗಳಲ್ಲಿ ಜಯ ಕಂಡಿದೆ. ತಂಡದ ಬೌಲರ್ಸ್ ಮತ್ತು ಬ್ಯಾಟರ್ಸ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಇದನ್ನು ನೋಡಿದರೆ ಇಂದು ಆರ್‍ಸಿಬಿ ಬೌಲರ್ಸ್‌ಗೆ ಕೆಎಲ್ ರಾಹುಲ್ ಕಾಟ ನೀಡಬಹುದು.
ಟಾಪ್ ರನ್ ಗೆಟರ್ಸ್
ಕೆಎಲ್ ರಾಹುಲ್- 2 ಪಂದ್ಯ, 92 ರನ್
ಫಾಪ್ ಡು ಪ್ಲೆಸಿಸ್- 2 ಪಂದ್ಯ, 79 ರನ್
ಟ್ರಿಸ್ಟಾನ್ ಸ್ಟಬ್ಸ್- 3 ಪಂದ್ಯ, 79 ರನ್
ಟಾಪ್ ವಿಕೆಟ್ ಟೇಕರ್ಸ್
ಮಿಚೆಲ್ ಸ್ಟಾರ್ಕ್- 3 ಪಂದ್ಯ, 9 ವಿಕೆಟ್
ಕುಲ್‌ದೀಪ್ ಯಾದವ್- 3 ಪಂದ್ಯ, 6 ವಿಕೆಟ್
ವಿಪ್ರಜ್ ನಿಗಮ್- 3 ಪಂದ್ಯ, 3 ವಿಕೆಟ್
ಸಂಭಾವ್ಯ ಪ್ಲೇಯಿಂಗ್-11: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಮೋಹಿತ್ ಶರ್ಮಾ.
ಹೆಡ್ ಟು ಹೆಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೂ ಐಪಿಎಲ್‌ನಲ್ಲಿ ಡೆಲ್ಲಿ ಎದುರು ಆರ್‌ಸಿಬಿ ಮೇಲುಗೈ ಸಾಧಿಸಿದೆ. ಇಲ್ಲಿವರೆಗೆ ಉಭಯ ತಂಡಗಳು ಒಟ್ಟು 31 ಪಂದ್ಯಗಳನ್ನು ಆಡಿವೆ. ಇದರಲ್ಲಿ ಆರ್‌ಸಿಬಿ 19 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ 11 ಪಂದ್ಯಗಳನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications