IPL 2024 Eliminator: ಅವೇಶ್ ಖಾನ್ ಬಿಗಿ ಬೌಲಿಂಗ್ ದಾಳಿ; ರಾಜಸ್ಥಾನಕ್ಕೆ ಸವಾಲಿನ ಗುರಿ ನೀಡಿದ ಆರ್‌ಸಿಬಿ
ಮೇ 22 ಬುಧವಾರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸವಾಲಿನ ಮೊತ್ತ ಕಲೆಹಾಕಿದೆ.
ಆರ್‌ಆರ್ ಸಂಘಟಿತ ಬೌಲಿಂಗ್ ಎದುರು ಮಂಕಾದ ಆರ್‌ಸಿಬಿ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಆರ್‌ಸಿಬಿ 173 ರನ್‌ಗಳನ್ನು ಗಳಿಸಿದೆ. ಆರ್‌ಆರ್ ಗೆಲ್ಲಲು 171 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಸೋತು ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರು. ಆದರೆ ಈ ಜೋಡಿಯಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.
ಫಾಫ್ ಡು ಪ್ಲೆಸಿಸ್ ಕೇವಲ 15 ರನ್‌ಗಳಿ ಔಟ ಆದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಕ್ಯಾಮೆರಾನ್ ಗ್ರೀನ್ ಅವರು ವಿರಾಟ್ ಕೊಹ್ಲಿ ಜೊತೆಗೂಡಿ ನಿಧಾನವಾಗಿ ರನ್ ಗಳಿಸಿದರು. ಈ ಹಂತದಲ್ಲಿ ವಿರಾಟ್ ಕೊಹ್ಲಿ 33 ರನ್‌ಗೆ ವಿಕೆಟ್ ಕಳೆದುಕೊಂಡರು.
ನಂತರ ನಾಲ್ಕನೇ ಕ್ರಮಾಂಕದಲ್ಲಿ ಬಂದ ರಜತ್ ಪಾಟಿದಾರ್ ಕೂಡ ಗ್ರೀನ್ ಜೊತೆ ವೇಗವಾಗಿ ರನ್‌ಗಳಿಸಲು ಮುಂದಾದರು. ಆದರೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಗ್ರೀನ್ 27 ರನ್‌ಗಳಿಗೆ ಔಟದರೆ, ಅದ್ಭುತವಾಗಿ ಆಡುತ್ತಿದ ಪಾಟಿದಾರ್ 2 ಸಿಕ್ಸರ್ ಹಾಗು 2 ಬೌಂಡರಿ ಮೂಲಕ 34 ರನ್‌ಗಳಿಸಿ ಔಟ್ ಆದರು.

ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಕೂಡ ಸಂಕಷ್ಟದಲ್ಲಿದದ್ದ ಆರ್‌ಸಿಬಿ ನೆರವಾಗದ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ದಿನೇಶ್ ಕಾರ್ತಿಕ್ 11 ರನ್ ಬಾರಿಸಿ ಔಟ್ ಆದರು.
ಕೊನೆಯಲ್ಲಿ ಆರ್‌ಸಿಬಿ ರನ್ ಹೆಚ್ಚಿಸಿದ ಮಹಿಪಾಲ್ ಲೊಮ್ರೊರ್ 32 ರನ್ ಗಳಿಗೆ ಕ್ಯಾಚ್ ನೀಡಿ ಹೊರ ನಡೆದರು. ಸ್ವಪ್ನಿಲ್ ಸಿಂಗ್ ಅಜೇಯ 9 ರನ್ ಗಳಿಸದರೆ, ಕರಣ್ ಶರ್ಮಾ 5 ರನ್‌ಗೆ ಔಟ್ ಆದರು.
ರಾಜಸ್ಥಾನ ರಾಯಲ್ ಪರ ಅವೇಶ್ ಖಾನ್ 3 ಉರುಳಿಸಿ ಮಿಂಚಿದರು. ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಹಾಗು ಯುಜ್ವೇಂದ್ರ ಚಹಾಲ್ ತಲಾ ಒಂದು ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications