ಐಪಿಎಲ್ 2025 ರಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ ಇಂದು ಅಂದರೆ ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಐಪಿಎಲ್ 18ನೇ ಸೀಸನ್‌ನ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಇದುವರೆಗೆ ಆರ್‍ಸಿಬಿ ತವರಿನಲ್ಲಿ ಆಡಿದ ಮೂರು ಪಂದ್ಯಗಳನ್ನು ಸೋತಿದೆ. ಹೀಗಾಗಿ ಈ ಪಂದ್ಯ ರೋಚಕತೆ ಹುಟ್ಟಿಸಿದೆ.
ಜೈಪುರದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್‍ಸಿಬಿ 9 ವಿಕೆಟ್‌ಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಅದ್ಭುತ ಗೆಲುವು ಸಾಧಿಸಿತು. ಅಂತಹ ಪರಿಸ್ಥಿತಿಯಲ್ಲಿ ರಾಜಸ್ಥಾನ ವಿರುದ್ಧ ಆರ್‍ಸಿಬಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಕಳೆದ ಪಂದ್ಯದ ಸೋಲಿಗೆ ರಾಜಸ್ಥಾನ ತಂಡ ಕೂಡ ಸೇಡು ತಿರಿಸಿಕೊಳ್ಳಲು ಸಜ್ಜಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಇಲ್ಲಿವರೆಗೆ ಅದ್ಭುತವಾಗಿದೆ. ತಂಡದ ಏಕೈಕ ಚಿಂತೆ ಎಂದರೆ ತವರಿನಲ್ಲಿ ಗೆಲುವು ಕಾಣದಿರುವುದು. ಐಪಿಎಲ್ 2025 ರಲ್ಲಿ ಆರ್‍ಸಿಬಿ 8 ಪಂದ್ಯಗಳನ್ನು ಆಡಿದ್ದು, 5 ಪಂದ್ಯಗಳಲ್ಲಿ ಜಯಗಳಿಸಿದೆ. ಈ ಎಲ್ಲಾ ವಿಜಯಗಳು ತವರಿನ ಹೊರಗೆ ಸಿಕ್ಕಿವೆ. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ತಂಡದ ಪ್ರದರ್ಶನ ತವರು ಮತ್ತು ಹೊರಗೆ ಎರಡಲ್ಲೂ ಸಾಮಾನ್ಯವಾಗಿದೆ. ರಾಜಸ್ಥಾನ ಇದುವರೆಗೆ 8 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆದ್ದಿದ್ದು, 6 ರಲ್ಲಿ ಹೀನಾಯ ಸೋಲನ್ನು ಎದುರಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಗಾಯದ ಕಾರಣ ಹೊರಗುಳಿದಿದ್ದಾರೆ. ಇದು ತಂಡಕ್ಕೆ ಹಿನ್ನಡೆ ಉಂಟು ಮಾಡಲಿದೆ. ಕಳೆದ ಎರಡು ಪಂದ್ಯಗಳಲ್ಲಿ ರಾಜಸ್ಥಾನ ಕೊನೆಯ ಓವರ್‍ಗಳಲ್ಲಿ ಸೋತಿದೆ. ಆರ್‍ಸಿಬಿ ಒಂದು ಪಂದ್ಯವನ್ನು ಸೋತು ಇನ್ನೊಂದರಲ್ಲಿ ಗೆಲುವು ಸಾಧಿಸಿದೆ.
ಐಪಿಎಲ್ ಇತಿಹಾಸದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ತೀವ್ರ ಪೈಪೋಟಿ ನಡೆದಿವೆ. ಆದಾಗ್ಯೂ, ಬೆಂಗಳೂರು ತಂಡ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಒಟ್ಟು 33 ಪಂದ್ಯಗಳು ನಡೆದಿವೆ. ಇದರಲ್ಲಿ ಬೆಂಗಳೂರು 16 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ 14 ರಲ್ಲಿ ಜಯ ಕಂಡಿದೆ. 3 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಇತ್ತೀಚಿನ ದಿನಗಳಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬದಲಾಗಿದೆ. ಮೊದಲು ಈ ಪಿಚ್‌ನಲ್ಲಿ ಬಿಗ್ ಸ್ಕೋರ್ ಪಂದ್ಯಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪಿಚ್ ಬೌಲರ್ಸ್‌ಗೆ ಹೆಚ್ಚು ಅನುಕೂಲವಾಗಿದೆ. ಪಂದ್ಯದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವುದು ಸೂಕ್ತವಾಗಿದೆ. ಈ ಪಿಚ್‌ನಲ್ಲಿ 175 ಕ್ಕಿಂತ ಹೆಚ್ಚಿನ ರನ್‌ಗಳನ್ನು ಉತ್ತಮ ಮೊತ್ತವೆಂದು ಪರಿಗಣಿಸಬಹುದು.
ವಿರಾಟ್ ಕೊಹ್ಲಿ- 8 ಪಂದ್ಯ, 322 ರನ್
ರಜತ್ ಪಾಟಿದಾರ್- 8 ಪಂದ್ಯ, 221 ರನ್
ಫಿಲ್ ಸಾಲ್ಟ್- 8 ಪಂದ್ಯ, 213 ರನ್
ಜೋಶ್ ಹೇಜಲ್‌ವುಡ್- 8 ಪಂದ್ಯ, 12 ವಿಕೆಟ್
ಕೃನಾಲ್ ಪಾಂಡ್ಯ- 8 ಪಂದ್ಯ, 10 ವಿಕೆಟ್
ಭುವನೇಶ್ವರ್ ಕುಮಾರ್- 7 ಪಂದ್ಯ, 8 ವಿಕೆಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಯಶಸ್ವಿ ಜೈಸ್ವಾಲ್- 8 ಪಂದ್ಯ, 307 ರನ್
ಸಂಜು ಸ್ಯಾಮ್ಸನ್- 7 ಪಂದ್ಯ, 224 ರನ್
ರಿಯಾನ್ ಪರಾಗ್- 8 ಪಂದ್ಯ, 212 ರನ್
ವನಿಂದು ಹಸರಂಗ- 8 ಪಂದ್ಯ, 9 ವಿಕೆಟ್
ಜೋಫ್ರಾ ಆರ್ಚರ್- 8 ಪಂದ್ಯ, 8 ವಿಕೆಟ್
ಮಹೀಶ್ ತೀಕ್ಷಣ- 8 ಪಂದ್ಯ, 7 ವಿಕೆಟ್
ರಾಜಸ್ಥಾನ ರಾಯಲ್ಸ್: ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಶುಭಂ ದುಬೆ, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ.