IPL 2026 Auction: RCB ಈ 8 ಆಟಗಾರರನ್ನು ಬಿಟ್ಟು 18.20 ಕೋಟಿ ರೂ. ಉಳಿಸಿಕೊಳ್ಳುವ ಪ್ಲ್ಯಾನ್
17 ವರ್ಷಗಳ ಪ್ರಶಸ್ತಿ ಗೆಲುವಿನ ಕನಸು, 2025ರಲ್ಲಿ ನನಸಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ದೊಡ್ಡ ಸವಾಲಿಗೆ ತನ್ನನ್ನು ತಾನು ಸಿದ್ಧ ಪಡಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ರೀತಿ ಸಾಲು ಸಾಲು ಪ್ರಶಸ್ತಿಗಳನ್ನು ಗೆಲ್ಲುವ ಆಸೆ ಆರ್‌ಸಿಬಿ ತಂಡದ್ದಾಗಿದೆ. ಹೀಗಾಗಿ ತಂಡ ಬಿಗ್ ಪ್ಲ್ಯಾನ್ ಮಾಡಿಕೊಂಡಿದೆ.
2026ರ ಐಪಿಎಲ್ ಹರಾಜು ಆರ್‌ಸಿಬಿ ತಂಡಕ್ಕೆ ತನ್ನ ದೌರ್ಬಲ್ಯಗಳನ್ನು ಸರಿ ಪಡಿಸಿಕೊಳ್ಳಲು ಒಳ್ಳೆಯ ವೇದಿಕೆ ಆಗಲಿದೆ. ಈ ಮೂಲಕ ಮತ್ತೊಮ್ಮೆ ಬೆಂಗಳೂರು ತಂಡ ಟ್ರೋಫಿಯನ್ನು ಗೆಲ್ಲುವ ಕನಸು ಹೊಂದಿದೆ. ಹೀಗಾಗಿ ಈಗಿನಿಂದಲೇ ಆರ್‌ಸಿಬಿ ತೆರೆ ಮರೆಯ ಕಾರ್ಯಗಳನ್ನು ಆರಂಭಿಸಿದೆ. ಈ ಬಾರಿಯೂ ತಂಡವನ್ನು ರಜತ್ ಪಟಿದಾರ್ ಮುನ್ನಡೆಸಲಿದ್ದಾರೆ. ಇವರು 18ನೇ ಆವೃತ್ತಿಯಲ್ಲಿ ಅಮೋಘವಾಗಿ ತಂಡವನ್ನು ಮುನ್ನಡೆಸಿದ್ದಾರೆ.

ರಜತ್ ಪಟಿದಾರ್ ಅವರಿಗೆ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಬಹುದು. ಇವರು ಆರ್‌ಸಿಬಿ ತಂಡ ಬ್ಯಾಟಿಂಗ್ ಬೆನ್ನೆಲೆಬು. ಇವರು ಪವರ್ ಪ್ಲೇನಲ್ಲಿ ಕೊಹ್ಲಿ ಆಕ್ರಮಣಕಾರಿ ಆಟವನ್ನು ಆಡಬಹುದು. ಇವರು ಚೇಸಿಂಗ್‌ನಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಇವರು ಮತ್ತೊಮ್ಮೆ ಆರ್‌ಸಿಬಿ ತಂಡದ ಕೇಂದ್ರ ಬಿಂದುವಾಗಿದ್ದಾರೆ.
ಯಾರನ್ನು ಉಳಿಸಿಕೊಳ್ಳಬಹುದು?
ಫಿಲ್ ಸಾಲ್ಟ್ ಹಾಗೂ ಟೀಮ್ ಡೇವಿಡ್ ಅವರು ಆರ್‌ಸಿಬಿ ತಂಡ ಉಳಿಸಿಕೊಂಡಿದೆ. ಅಲ್ಲದೆ ಇವರು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕುತ್ತಾರೆ. ಅಲ್ಲದೆ ಇವರ ಆಕ್ರಮಣಕಾರಿ ಮನೋಭಾವ ಎದುರಾಳಿಗಳ ಟೆನ್ಷನ್ ಹೆಚ್ಚಿಸಲಿದೆ. ಇನ್ನು ಟೀಮ್ ಡೇವಿಡ್ ತಂಡಕ್ಕೆ ಉತ್ತಮ ಫಿನಿಷರ್ ಆಗಿ ಕಾಣಿಸಿಕೊಂಡಿದ್ದು ಭರವಸೆ ಹೆಚ್ಚಿಸಿದ್ದಾರೆ. ಇನ್ನು ಭಾರತೀಯ ಆಟಗಾರರಾ ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ ತಂಡದ ಬ್ಯಾಲೆನ್ಸ್ ಕಾಪಾಡಲು ನೆರವಾಗಬಲ್ಲರು. ಇವರಿಬ್ಬರೂ ಬಿಗ್ ಹಿಟ್ಟಿಂಗ್ ಶಾಟ್‌ಗಳನ್ನು ಬಾರಿಸುವ ಕ್ಷಮತೆ ಹೊಂದಿದ್ದಾರೆ.
ಆರ್‌ಸಿಬಿ ತಂಡದ ಬೌಲಿಂಗ್‌ನಲ್ಲೂ ಉತ್ತಮ ಬೌಲರ್‌ಗಳು ಇದ್ದಾರೆ. ವೇಗದ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಅವರನ್ನು ತಂಡ ಉಳಿಸಿಕೊಳ್ಳಬಹುದು. ಹ್ಯಾಜಲ್‌ವುಡ್ ತನ್ನ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಭುವಿ ಬೌಲಿಂಗ್‌ನಲ್ಲಿ ಉತ್ತಮ ಕಂಟ್ರೋಲ್ ಹಾಗೂ ಅನುಭವ ತಂಡಕ್ಕೆ ನೆರವಾಗಲಿದೆ. ಯಶ್ ದಯಾಳ್ ಅವರ ವಿಕೆಟ್ ಪಡೆಯುವ ಕ್ಷಮತೆ ಇವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತೆ ಮಾಡುತ್ತದೆ. ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಆರ್‌ಸಿಬಿ ಉಳಿಸಿಕೊಳ್ಳಬೇಕಾದ ಆಟಗಾರರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಸುಯಾಶ್ ಶರ್ಮಾ, ನುವಾನ್ ತುಷಾರ.
ಆರ್‌ಸಿಬಿ ಮುಂದಿನ ಆವೃತ್ತಿಗಾಗಿ ಈ 8 ಆಟಗಾರರನ್ನು ಕೈ ಬಿಟ್ಟು 18.20 ಕೋಟಿ ರೂ.ಯೊಂದಿಗೆ ಹರಾಜು ಅಂಗಳಕ್ಕೆ ಇಳಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಹಾಗಿದ್ದರೆ ಆ ಆಟಗಾರರು ಯಾರು?
ಆರ್‌ಸಿಬಿ ಕೈ ಬಿಡುವ ಸಾಧ್ಯತೆ ಇರುವ ಆಟಗಾರರು
ಸ್ವಸ್ತಿಕ್ ಛಿಕಾರ (₹30 ಲಕ್ಷ)
ಲಿಯಾಮ್ ಲಿವಿಂಗ್‌ಸ್ಟೋನ್ (₹8.75 ಕೋಟಿ)
ಸ್ವಪ್ನಿಲ್ ಸಿಂಗ್ (₹50 ಲಕ್ಷ)
ಮನೋಜ್ ಭಾಂಡಗೆ (₹30 ಲಕ್ಷ)
ರಾಸಿಖ್ ದಾರ್ (₹6 ಕೋಟಿ)
ಲುಂಗಿ ಎನ್‌ಗಿಡಿ (₹1 ಕೋಟಿ)
ಅಭಿನಂದನ್ ಸಿಂಗ್ (₹30 ಲಕ್ಷ)
ಮೋಹಿತ್ ರಥಿ (₹30 ಲಕ್ಷ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications