Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈಭವ್ ಸೂರ್ಯವಂಶಿಗೆ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವ ಆಸೆ

ರಾಜಸ್ಥಾನ್ ರಾಯಲ್ಸ್‌ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. 19ನೇ ಆವೃತ್ತಿಯ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ. ಈ ವೇಳೆ ಎಲ್ಲರ ಕಣ್ಣುಗಳು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿವೆ. ಅನುಭವಿ ಬ್ಯಾಟರ್‌ ರೀತಿ ಮೈದಾನದಲ್ಲಿ ಬ್ಯಾಟ್ ಮಾಡುವ ವೈಭವ್ ಈಗಾಗಲೇ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇವರಿಗೆ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವ ದೊಡ್ಡ ಕನಸು ಇದೆ ಎಂದು ಬಹಿರಂಗ ಪಡಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ ಈ ಬಾರಿಯ ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಂಡರ್‌ ಬಾಯ್‌ ವೈಭವ್ ಸೂರ್ಯವಂಶಿ ಅವರ ಪಾತ್ರ ದೊಡ್ಡದು. ಇವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಪವರ್‌ ಪ್ಲೇನಲ್ಲಿ ರನ್‌ಗಳ ಸುರಿಮಳೆ ಗೈಯುವ ಆಟಗಾರ. ಈ ಬಾರಿಯ ಐಪಿಎಲ್‌ನ ಆರೆಂಜ್‌ ಕ್ಯಾಪ್ ರೇಸ್‌ನಲ್ಲಿರುವ ವೈಭವ್, ಸಿಕ್ಸರ್‌ಗಳ ಹೊಸ ಸುಲ್ತಾನ್ ರೀತಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ 50 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರ ಕಣ್ಣುಗಳು ಈಗ ಕ್ರಿಸ್‌ ಗೇಲ್‌ ಅವರ ದಾಖಲೆಯ ಮೇಲೆ ನೆಟ್ಟಿವೆ.

RR Batsman

ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ವೈಭವ್ ಸೂರ್ಯವಂಶಿ ಕಾಣಿಸಿಕೊಂಡರು. ಇದೇ ವೇಳೆ ಅವರೊಂದಿಗಿನ ಸಂಭಾಷಣೆಯಲ್ಲಿ ಯುವ ಆರಂಭಿಕ ಆಟಗಾರ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವ ಆಸೆ

ಪೀಟರ್ಸನ್ ಅರ್ಧಶತಕದ ಸಂಭ್ರಮವನ್ನು ಆಚರಿಸಲು ನೀವು ಇಷ್ಟ ಪಡುವಿರಾ ಎಂದು ಕೇಳುತ್ತಾರೆ. ವೈಭವ್ ನನಗೆ ಅದು ಹೆಚ್ಚು ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಿದರು. ಇದೇ ಚರ್ಚೆಯಲ್ಲಿ ಮಾತು ಮುಂದುವರಿಸಿದ ವೈಭವ್ ನಾನು ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಲು ಬಯಸುತ್ತೇನೆ. ಕ್ರಿಸ್ ಗೇಲ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದು ಟಿ20ಯಲ್ಲಿ 200 ರನ್ ಗಳಿಸಲು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ. ಯುನಿವರ್ಸಲ್‌ ಬಾಸ್‌ ಖ್ಯಾತಿಯ ಗೇಲ್ ಐಪಿಎಲ್‌ನಲ್ಲಿ 175 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದರು.

ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಚಾನೆಲ್ "ದಿ ಸ್ವಿಚ್"ನಲ್ಲಿ ಡ್ಯಾಶಿಂಗ್ ಬ್ಯಾಟ್ಸ್‌ಮನ್ ವೈಭವ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಈ ವೇಳೆ ಟೀಮ್ ಇಂಡಿಯಾ ಮತ್ತು ರಾಜಸ್ಥಾನ್ ರಾಯಲ್ಸ್‌ನ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಅವರು ಬೌಲಿಂಗ್ ಮಿಷನ್ ಆಪರೇಟ್ ಮಾಡುತ್ತಿದ್ದರು. ಪ್ರತಿ ಚೆಂಡಿನ ಬಳಿಕ ವೇಗ, ಲೈನ್ ಹಾಗೂ ಲೆಂಥ್ ಬದಲಾಗಿತ್ತು. ಈ ಎಲ್ಲ ಸವಾಲುಗಳನ್ನು ವೈಭವ್ ಮೆಟ್ಟಿನಿಂತಿದ್ದಾರೆ. ಈ ವೇಳೆ ವೈಭವ್ ಸೂರ್ಯವಂಶಿ ಅವರಿಗೆ 50 ಎಸೆತಗಳಲ್ಲಿ 100 ರನ್ ಬಾರಿಸುವ ಗುರಿ ನೀಡಲಾಗಿತ್ತು. ವೈಭವ್ ಈ ಸವಾಲನ್ನು 25 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಇದರಲ್ಲಿ 14 ಸಿಕ್ಸರ್‌ ಸೇರಿವೆ.

Story first published: Monday, May 25, 2026, 23:46 [IST]
Other articles published on May 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+