ಎರಡನೇ ಕ್ವಾಲಿಫೈಯರ್ ಪ್ರವೇಶಿಸಲು ಎಸ್‌ಆರ್‌ಎಚ್‌ಗೆ 244 ರನ್ ಗುರಿ ನೀಡಿದ ರಾಯಲ್ಸ್
ನ್ಯೂ ಚಂಡೀಗಢ: 15 ವರ್ಷ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವಿಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಬುಧವಾರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 244 ರನ್‌ಗಳ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರರು ಅಬ್ಬರದ ಜೊತೆಯಾಟದ ಕಾಣಿಕೆ ನೀಡಿತು. ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಪವರ್ ಪ್ಲೇನಲ್ಲಿ 80 ರನ್ ಸಿಡಿಸಿ ಅಬ್ಬರಿಸಿತು.

ವೈಭವ್ ಎಂಬ ಸುನಾಮಿಯನ್ನು ಕಟ್ಟಿಹಾಕಲು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳು ವಿಫಲರಾದರು. ಕ್ಲಾಸ್ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದರು. ಮೊದಲ ವಿಕೆಟ್‌ಗೆ ವೈಭವ್ ಹಾಗೂ ಯಶಸ್ವಿ 8 ಓವರ್‌ಗಳಲ್ಲಿ 125 ರನ್ ಸೇರಿಸಿತು. ಈ ಹಂತದಲ್ಲಿ 29 ಎಸೆತಗಳಲ್ಲಿ 5 ಬೌಂಡರಿ 12 ಸಿಕ್ಸರ್ ಬಾರಿಸಿದ್ದ ವೈಭವ್ ಸೂರ್ಯವಂಶಿ ಇಲ್ಲದ ಹೊಡೆತಕ್ಕೆ ಹೋಗಿ ಔಟ್ ಆದರು. ಈ ಮೂಲಕ ಐಪಿಎಲ್‌ನಲ್ಲಿ ವೇಗದ ಶತಕದ ದಾಖಲೆಯನ್ನು ಕೂದಲೆಳೆಯ ಅಂತರದಲ್ಲಿ ಮಿಸ್ ಮಾಡಿಕೊಂಡರು.
ಯಶಸ್ವಿ ಜೈಸ್ವಾಲ್ 4 ಬೌಂಡರಿ ನೆರವಿನಿಂದ 29 ರನ್ ಸಿಡಿಸಿ ಔಟ್ ಆದರು. ಮೂರನೇ ವಿಕೆಟ್‌ಗೆ ಧ್ರುವ್ ಜುರೇಲ್ ಹಾಗೂ ರಿಯಾನ್ ಪರಾಗ್ ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಈ ಜೋಡಿ 21 ಎಸೆತಗಳಲ್ಲಿ 56 ರನ್ ಸಿಡಿಸಿತು. ಈ ವೇಳೆ ಧ್ರುವ್ ಜುರೇಲ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಔಟ್ ಆದರು.
ಮಧ್ಯದ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ
ಉಳಿದ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ನಾಯಕ ರಿಯಾನ್ ಪರಾಗ್ 26, ಡೊನೊವನ್ ಫೆರೀರಾ 12, ರವೀಂದ್ರ ಜಡೇಜಾ 12 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 243 ರನ್ ಸೇರಿಸಿತು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಪ್ರಫುಲ್ ಹಿಂಗೆ 54 ರನ್ ಸಿಡಿಸಿ ಮೂರು ವಿಕೆಟ್ ಪಡೆದರು. ಇಶಾನ್ ಮಲಿಂಗ್, ಶಿವಂಗ್ ಕುಮಾರ್, ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು. ಸನ್ ರೈಸರ್ಸ್ ತಂಡದ ಸ್ಟಾರ್ ಆಟಗಾರರು 10ಕ್ಕೂ ಹೆಚ್ಚು ಎಕಾನಮಿಯನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications