IPL 2022: ಮುಂದಿನ ಆವೃತ್ತಿಯಲ್ಲಿ ಕಣಕ್ಕಿಳಿಯುತ್ತಾರಾ ಧೋನಿ?: ಗೊಂದಲಕ್ಕೆ ತೆರೆ ಎಳೆದ MSD

ಐಪಿಎಲ್ 15ನೇ ಆವೃತ್ತಿಯ 68ನೇ ಪಂದ್ಯ ಇಂದು ನಡೆಯುತ್ತಿದ್ದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯ ಸಿಎಸ್‌ಕೆ ಹಾಗೂ ಆರ್‌ಆರ್ ಈ ಎರಡು ತಂಡಗಳಿಗೂ ಲೀಗ್ ಹಂತದ ಅಂತಿಮ ಪಂದ್ಯವೂ ಆಗಿದೆ. ಆರ್‌ಆರ್ ಈ ಪಂದ್ಯವನ್ನು ಗೆದ್ದು ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನೊಂದಿಗೆ ಗೌರವಯುತ ನಿರ್ಗಮನದ ನಿರೀಕ್ಷೆಯಲ್ಲಿದೆ.
ಇನ್ನು ಲೀಗ್ ಹಂತದಿಂದ ಸಿಎಸ್‌ಕೆ ತಂಡ ಈಗಾಗಲೇ ಹೊರಬಿದ್ದಿರುವ ಕಾರಣ ಈ ಆವೃತ್ತಿಯ ಅಂತಿಮ ಪಂದ್ಯ ಇದಾಗಿದೆ. ಹೀಗಾಗಿ ಸಿಎಸ್‌ಕೆ ಹಾಗೂ ಧೋನಿ ಅಭಿಮಾನಿಗಳಲ್ಲಿ ಒಂದು ಗೊಂದಲ ಕಾಡುತ್ತಿತ್ತು. ಸಿಎಸ್‌ಕೆ ನಾಯಕ ಎಂಎಸ್ ಧೋನಿಯ ಅಂತಿಮ ಪಂದ್ಯ ಇದಾಗಲಿದೆಯೇ ಎಂಬ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಈ ಬಗ್ಗೆ ಎಂಎಸ್ ಧೋನಿ ಟಾಸ್ ಪ್ರಕ್ರಿಯೆಯ ಸಂದರ್ಭದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ಮುಂದಿನ ಆವೃತ್ತಿಯಲ್ಲಿ ತಾನು ಆಡಲಿದ್ದೇನೆಯೇ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.

ಖಂಡಿತವಾಗಿ ಆಡಲಿದ್ದೇನೆ
ಸಿಎಸ್‌ಕೆ ನಾಯಕ ಎಂಎಸ್ ಧೋನಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ನಿರೂಪಕ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್ ಎಂಎಸ್ ಧೋನಿ ಬಳಿ ಮುಂದಿನ ಆವೃತ್ತಿಯಲ್ಲಿ ಧೋನಿ ಆಡುವುದನ್ನು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸಿದ್ದರು. ಇದಕ್ಕೇ ಮಾಹಿ ನೇರ ಉತ್ತರವನ್ನು ನೀಡಿದ್ದಾರೆ. ಎಂಎಸ್ ಧೋನಿ ಮಿಂದಿನ ಆವೃತ್ತಿಯಲ್ಲಿ ಖಂಡಿತವಾಗಿಯೂ ತಾನು ಆಡುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ.

"ಚೆನ್ನೈಗೆ ಧನ್ಯವಾದ ಹೇಳದಿದ್ದರೆ ಅನ್ಯಾಯವಾಗುತ್ತದೆ"
ಮುಂದಿನ ಆವೃತ್ತಿಯಲ್ಲಿ ತಾನು ಆಡುವುದಕ್ಕೆ ಧೋನಿ ಕಾರಣವನ್ನು ಮೂಡ ಮುಂದಿಟ್ಟಿದ್ದಾರೆ. "ನಾನು ಚೆನ್ನೈಗೆ ಧನ್ಯವಾದವನ್ನು ಹೇಳಲಿದ್ದರೆ ಅದು ಅನ್ಯಾಯವಾಗುತ್ತದೆ. ಮುಂಬೈನಲ್ಲಿ ಕೂಡ ನನಗೆ ವೈಯಕ್ತಿವಾಗಿ ಅತಿ ದೊಡ್ಡ ಮಟ್ಟದ ಪ್ರೀತಿ ಹಾಗೂ ವಾತ್ಸಲ್ಯವನ್ನು ನೀಡಿದೆ. ಆದರೆ ಚೆನ್ನೈ ಅಭಿಮಾನಿಗಳಿಗೆ ಇದರಿಂದ ತೃಪ್ತಿಯಾಗುವುದಿಲ್ಲ" ಎಂದಿದ್ದಾರೆ ಎಂಎಸ್ ಧೋನಿ.

ಮುಂದಿನ ಆವೃತ್ತಿಯಲ್ಲಿ ಬಿನ್ನ ತಾಣಗಳಲ್ಲಿ ಆಡುವ ಬಗ್ಗೆ ವಿಶ್ವಾಸ
ಇನ್ನು ಮುಂದುವರಿದು ಮಾತನಾಡಿದ ಎಂಎಸ್ ಧೋನಿ ಮುಂದಿನ ಆವೃತ್ತಿಯಲ್ಲಿ ಭಿನ್ನ ತಾಣಗಳಲ್ಲಿ ಆಡುವ ಬಗ್ಗೆ ಧೋನಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಬಹುಶಃ ಮುಂದಿನ ಆವೃತ್ತಿಯಲ್ಲಿ ಭಿನ್ನ ತಾಣಗಳಿಗೆ ಪ್ರಯಾಣಿಸಿ ಆಡುವ ಅವಕಾಶ ದೊರೆಯುವ ಬಗ್ಗೆ ನಿರೀಕ್ಷೆ ಹೊಂದಿದ್ದೇನೆ. ಈ ಮೂಲಕ ನಾನು ಬೇರೆ ಬೇರೆ ತಾಣಗಳಿಗೆ ಧನ್ಯವಾದಗಳನ್ನು ಹೇಳಲು ಸಾಧ್ಯವಾಗಬಹುದು.ಎಲ್ಲರಿಗೂ ಇದು ನನ್ನ ಅಂತಿಮ ಐಪಿಎಲ್ ಆವೃತ್ತಿಯಾಗಿರಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಎರಡು ವರ್ಷಗಳ ಅಂತರದಲ್ಲಿ ನೀವು ಏನನ್ನೂ ಊಹಿಸಲು ಸಾಧ್ಯವಿಲ್ಲ. ಆದರೆ ನಾನು ಮುಂದಿನ ವರ್ಷ ಖಂಡಿತವಾಗಿಯೂ ಬಲಿಷ್ಠವಾಗಿ ವಾಪಾಸಾಗಲು ಪ್ರಯತ್ನಿಸಲಿದ್ದೇನೆ" ಎಂದಿದ್ದಾರೆ ಎಂಎಸ್ ಧೋನಿ.

ಆಡುವ ಬಳಗ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಓಬೇದ್ ಮೆಕಾಯ್
ಬೆಂಚ್: ಕರುಣ್ ನಾಯರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಶುಭಂ ಗರ್ವಾಲ್, ಕಾರ್ಬಿನ್ ಬಾಷ್, ಜೇಮ್ಸ್ ನೀಶಮ್
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಅಂಬಟಿ ರಾಯುಡು, ಎನ್ ಜಗದೀಸನ್, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಮತೀಶ ಪತಿರಣ, ಮುಖೇಶ್ ಚೌಧರಿ
ಬೆಂಚ್: ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕ್ರಿಸ್ ಜೋರ್ಡಾನ್, ಡ್ವೈನ್ ಪ್ರಿಟೋರಿಯಸ್, ತುಷಾರ್ ದೇಶಪಾಂಡೆ, ಹರಿ ನಿಶಾಂತ್, ಸುಭ್ರಾಂಶು ಸೇನಾಪತಿ, ಕೆಎಂ ಆಸಿಫ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ಭಗತ್ ವರ್ಮಾ, ಶಿವಂ ದುಬೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications