ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಹೀನಾಯವಾಗಿ ಸೋಲು ಕಂಡಿತು. ಅತ್ಯಂತ ಸಮತೋಲಿತ ತಂಡ ಎಂದು ಕರೆಸಿಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆರ್‌ಆರ್ ತಂಡದ ಈ ಪ್ರದರ್ಶನಕ್ಕೆ ಕೋಚ್ ಕುಮಾರ್ ಸಂಗಕ್ಕರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟನ್ಸ್ ತಂಡದ ಸ್ಪಿನ್ನರ್‌ಗಳಾದ ರಶೀದ್ ಖಾನ್ ಹಾಗೂ ನೂರ್ ಅಹ್ಮದ್ ಅವರ ಸ್ಪಿನ್ ದಾಳಿಗೆ ತತ್ತರಿಸಿತು. 17.5 ಓವರ್‌ಗಳಲ್ಲಿ ಆರ್‌ಆರ್ ತಂಡ ಕೇವಲ 118 ರನ್‌ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ನಂತರ ಬೌಲಿಂಗ್‌ನಲ್ಲಿಯೂ ಭಾರೀ ವೈಫಲ್ಯ ಅನುಭವಿಸಿತು ಆರ್‌ಆರ್.

ರಾಜಸ್ಥಾನ್ ರಾಯಲ್ಸ್ ನೀಡಿದ ಗುರಿಯನ್ನು ಗುಜರಾತ್ ಟೈಟನ್ಸ್ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು 13.5 ಓವರ್‌ಗಳಲ್ಲಿಯೇ ಗುರಿ ತಲುಪುವ ಮೂಲಕ ಚಾಂಪಿಯನ್ ಆಟವನ್ನು ಜಿಟಿ ತಂಡ ಪ್ರದರ್ಶಿಸಿತು. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ಅವಮಾನಕರ ರೀತಿಯ ಸೋಲು ಕಂಡಿದೆ. ಹೀಗಾಗಿ ಆರ್‌ಆರ್ ತಂಡದ ಕೋಚ್ ಕುಮಾರ್ ಸಂಗಕ್ಕರ ತಂಡದ ಪ್ರದರ್ಶನದ ಬಗ್ಗೆ ಕಿಡಿಕಾರಿದ್ದಾರೆ.
"ಟಿ20 ಕ್ರಿಕೆಟ್‌ನಲ್ಲಿ ನೀವು ಕುಳಿತು ಕಾಯುತ್ತಾ ಇರಲು ಸಾಧ್ಯವಿಲ್ಲ. ಬೌಲರ್‌ಗಳ ಎಸೆತಕ್ಕೆ ಅಭ್ಯಾಸವನ್ನು ನಡೆಸುತ್ತಲೇ ಇರಬೇಕು. ರಶೀದ್ ಖಾನ್ ಹಾಗೂ ನೂರ್ ಅಹ್ಮದ್ ಬಹಳ ಅದ್ಭುತವಾಗಿ ಬೌಲಿಂಗ್ ನಡೆಸಿದರು. ಅವರು ಮಾತ್ರವಲ್ಲದೆ ಅವರ ವೇಗದ ಬೌಲಿಂಗ್ ವಿಭಾಗದ ಪ್ರದರ್ಶನ ಕುಡ ಅದ್ಭುತವಾಗಿತ್ತು. ಅವರು ಆಡಿದ್ ರೀತಿಯತಿಂದಾಗಿ ಈ ಪಂದ್ಯದ ಶ್ರೇಯಸ್ಸು ಸಂಪೂರ್ಣವಾಗಿ ಗುಜರಾತ್ ಟೈಟನ್ಸ್ ತಂಡಕ್ಕೆ ಸಲ್ಲಬೇಕು. ನಾವು ಬಹಳ ಕಳಪೆ ಆಟವನ್ನು ಪ್ರದರ್ಶಿಸಿದೆವು" ಎಂದಿದದಾರೆಕುಮಾರ್ ಸಂಗಕ್ಕರ.
ಮುಂದುವರಿದು ಮಾತನಾಡಿದ ಅವರು ಉತ್ತಮ ಆರಂಭವನ್ನು ಪಡೆದುಕೊಂಡರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ. "ನಮಗೆ ದೊರೆತ ಆರಂಭವನ್ನು ಸಮರ್ಥವಾಗಿ ಬಳಸಿಕೊಳ್ಳಳು ನಾವು ಸಂಪೂರ್ನವಾಗಿ ವಿಫಲವಾಗಿದ್ದೇವೆ. ಕೆಲ ಕಾಲ ನಾವು ಹೋರಾಟದ ಮನೋಭಾವ ಪ್ರದರ್ಶಿಸಿದೆವು. ಆದರೆ ಬಳಿಕ ಜಡಗಟ್ಟಿದಂತಿತ್ತು ನಮ್ಮ ಬ್ಯಾಟಿಂಗ್. ನಂತರ ಸ್ಪಿನ್ನರ್‌ಗಳ ವಿರುದ್ಧ ನಮ್ಮಲ್ಲಿ ಹೋರಾಟದ ಮನೋಭಾವವೇ ಕಾಣಿಸಲಿಲ್ಲ. ರಶೀದ್ ಖಾನ್ ಹಾಗೂ ನೂರ್ ಅಹ್ಮದ್ ಅದ್ಭುತವಾಗಿ ಬೌಲಿಂಗ್ ನಡೆಸಿದರು. ಬ್ಯಾಟರ್‌ಗಳು ಜವಾಬ್ಧಾರಿ ವಹಿಸಿಕೊಂಡು ಹೋರಾಟದ ಮನೋಭಾವವನ್ನು ಪ್ರದರ್ಶಿಸಲು ಇದು ಸೂಕ್ತವಾದ ಸಮಯ" ಎಂದಿದ್ದಾರೆ ಕುಮಾರ್ ಸಂಗಕರ.
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್