For Quick Alerts
ALLOW NOTIFICATIONS  
For Daily Alerts
 

RR vs LSG: ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಕಿಡಿಕಾರಿದ ರವಿ ಶಾಸ್ತ್ರಿ

ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ. 154 ರನ್‌ಗಳನ್ನು ಗಳಿಸಿದ್ದರೂ ಈ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಎಲ್‌ಎಸ್‌ಜಿ ಬೌಲರ್‌ಗಳು ಯಶಸ್ವಿಯಾಗಿದ್ದು ಈ ಐಪಿಎಲ್‌ನಲ್ಲಿ ಕನಿಷ್ಠ ಮೊತ್ತವನ್ನು ರಕ್ಷಣೆ ಮಾಡಿಕೊಂಡ ಸಾಧನೆ ಮಾಡಿದೆ.

ಆದರೆ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಕಿಡಿಕಾರಿದ್ದಾರೆ. ಕೆಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ರವಿ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದು ನಿಧಾನಗತಿಯ ಆರಂಭವನ್ನು ಪಡೆದ ಬಳಿಕ ರಾಹುಲ್ ತಮ್ಮ ಬ್ಯಾಟಿಂಗ್‌ನ ವೇಗವನ್ನು ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ.

RR vs LSG: Ravi Shastri disappointed about LSG captain KL Rahul slow batting

ಕೆಎಲ್ ರಾಹುಲ್ ಈ ಹಿಂದಿನ ಪಂದ್ಯಗಳಲ್ಲಿಯೂ ಸ್ಟ್ರೈಕ್‌ರೇಟ್ ವಿಚಾರವಾಗಿ ಟೀಕೆಗೆ ಒಳಗಾಗಿದ್ದರು. ಆರ್‌ಆರ್ ವಿರುದ್ಧದ ಪಂದ್ಯದಲ್ಲಿಯೂ ಅದು ಮುಂದುವರಿದಿತ್ತು. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ ಪವರ್‌ಪ್ಲೇ ಅವಧಿಯಲ್ಲಿ ಒಂದು ವಿಕೆಟ್ ಕಳೆದುಕೊಳ್ಳದಿದ್ದರೂ 37 ರನ್ ಮಾತ್ರವೇ ಗಳಿಸಿತ್ತು. ಅಲ್ಲದೆ ದೊಡ್ಡ ಹೊಡೆತಗಳನ್ನು ಬಾರಿಸುವಲ್ಲಿ ರಾಃಉಲ್ ವೈಫಲ್ಯತೆಯನ್ನು ಕೂಡ ಅನುಭವಿಸಿದರು. ಪವರ್‌ಪ್ಲೇ ಅವಧಿಯಲ್ಲಿ ಎರಡು ಜೀವದಾಣಗಳನ್ನು ಅವರು ಪಡೆದುಕೊಂಡಿದ್ದರು.

"ಕೆಎಲ್ ರಾಹುಲ್ ಅವರ ಬ್ಯಾಟ್‌ನಿಂದ 39ರ ಬದಲಾಗಿ 69 ಅಥವಾ 70 ರನ್ ಬರಬೇಕಾಗಿತ್ತು. ಹಾಗಿದ್ದಾಗ ತಂಡದ ಮೊತ್ತ 170-180ರಷ್ಟು ಬರಲು ಸಾಧ್ಯವಿತ್ತು. ಹೊಸದಾಗಿ ಕ್ರೀಸ್‌ಗಿಳಿದ ಆಟಗಾರರಿಗೆ ಬೇರವಾಗಿ ಆಕ್ರಮಣಕಾರಿಯಾಗಿ ಆಡುವುದು ಕಷ್ಟ ಸಾಧ್ಯ. ಅವರು ಪಿಚ್‌ಅನ್ನು ಅರ್ಐ ಮಾಡಿಕೊಳ್ಳುವಲ್ಲಿ ಎಡವಿದರು. 190-200 ರನ್‌ಗಳನ್ನು ಗಳಿಸದಿದ್ದರೂ ಕನಿಷ್ಠ 170 ರನ್‌ಗಳನ್ನಾದರೂ ಗಳಿಸಬೇಕಿತ್ತು" ಎಂದಿದ್ದಾರೆ ರವಿ ಶಾಸ್ತ್ರಿ.

ಅಂದ ಹಾಗೆ ಸವಾಯ್‌ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಸವಾಲಾಗಿತ್ತು ಎಂಬುದು ರಾಜಸ್ಥಾನ್ ರಾಯಲ್ಸ ತಂಡದ ಬ್ಯಾಟಿಂಗ್‌ನಲಲ್ಲಿಯೂ ಸ್ಪಷ್ಟವಾಗಿತ್ತು. ಆರ್‌ಆರ್ ತಂಡದ ಆಟಗಾರರು ಕೂಡ ಈ ಪಿಚ್‌ನಲ್ಲಿ ವೇಗವಾಗಿ ರನ್‌ಗಳಿಸಲು ವಿಫಲವಾದರು. ಸ್ಪೋಟಕ ಆಟಕ್ಕೆ ಹೆಸರಾದ ಜೋಸ್ ಬಟ್ಲರ್ ಈ ಪಂದ್ಯದಲ್ಲಿ 41 ಎಸೆತಗಳಲ್ಲಿ 40 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಗಿದ್ದರು ಎಂಬುದು ಗಮನಾರ್ಹ.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್

ಬೆಂಚ್: ದೇವದತ್ ಪಡಿಕ್ಕಲ್, ಮುರುಗನ್ ಅಶ್ವಿನ್, ಆಕಾಶ್ ವಸಿಷ್ಟ್, ಡೊನಾವನ್ ಫೆರೇರಾ, ನವದೀಪ್ ಸೈನಿ, ಜೋ ರೂಟ್, ಕೆಸಿ ಕಾರಿಯಪ್ಪ, ಓಬೇದ್ ಮೆಕಾಯ್, ಕೆಎಂ ಆಸಿಫ್, ಕುಲದೀಪ್ ಯಾದವ್, ಕುಲದೀಪ್ ಸೇನ್, ಅಬ್ದುಲ್ ಬಸಿತ್, ಕುನಾಲ್ ಸಿಂಗ್ ರಾಥೋಡ್, ಆಡಮ್ ಝಂಪಾ

ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೋನಿ, ನವೀನ್-ಉಲ್-ಹಕ್, ಅವೇಶ್ ಖಾನ್, ಯುದ್ವೀರ್ ಸಿಂಗ್ ಚರಕ್, ರವಿ ಬಿಷ್ಣೋಯ್
ಬೆಂಚ್: ಜಯದೇವ್ ಉನದ್ಕತ್, ಕೃಷ್ಣಪ್ಪ ಗೌತಮ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಕರಣ್ ಶರ್ಮಾ, ಮಯಾಂಕ್ ಯಾದವ್, ಮಾರ್ಕ್ ವುಡ್

Story first published: Wednesday, April 19, 2023, 23:51 [IST]
Other articles published on Apr 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+