RR vs LSG: ತವರಿನಲ್ಲಿ ಎಲ್‌ಎಸ್‌ಜಿ ಸೋಲಿಗೆ ಕಾರಣರಾದ ವಿಲನ್ ಯಾರು?
ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಡುವಣ ಹೈವೋಲ್ಟೇಜ್ ಫೈಟ್‌ಗೆ ಲಕ್ನೋನ ಸಾಕ್ಷಿಯಾಯಿತು. ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದ್ದ ಆರ್‌ಆರ್ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿತು. ಲೀಗ್‌ನಲ್ಲಿ ಕಮಾಲ್‌ನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಾಯಲ್ಸ್ ತಂಡದ ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು.
ವೈಭವ್ (8) ಹಾಗೂ ಯಶಸ್ವಿ (22) ಮೊದಲ ವಿಕೆಟ್‌ಗೆ 32 ರನ್ ಸೇರಿಸಿ ತಂಡಕ್ಕೆ ಆಧಾರವಾದರು. ಉಭಯ ಆಟಗಾರರು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಯಕ ರಿಯಾನ್ ಪರಾಗ್ (20), ಶಿಮ್ರೊನ್ ಹೆಟ್ಮೆಯರ್ (22), ಡೊನೊವನ್ ಫೆರೀರಾ (20), ರನ್ ವೇಗಕ್ಕೆ ಚುರುಕು ಮುಟ್ಟಿಸುವಲ್ಲಿ ಎಡವಿದರು. ಆಲ್‌ರೌಂಡರ್ ರವೀಂದ್ರ ಜಡೇಜಾ 29 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 43 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಕಲೆ ಹಾಕಿತು.

ಸಾಧಾರಣ ಮೊತ್ತವನ್ನು ಹಿಂಬಾಲಿಸಿದ ಎಲ್‌ಎಸ್‌ಜಿ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳಾದ ಆಯುಷ್ ಬದೋನಿ, ರಿಷಭ್ ಪಂತ್, ಏಡನ್ ಮಾರ್ಕ್ರಾಮ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ನಿಕೋಲಸ್ ಪೂರನ್ 22 ರನ್ ಬಾರಿಸಿ ಮಿಚೆಲ್ ಮಾರ್ಷ್‌ಗೆ ಉತ್ತಮ ಸಾಥ್ ನೀಡಿದರು. ನಿಕೋಲಸ್ ಅವರಿಗೆ ಜಡೇಜಾ ಖೆಡ್ಡಾ ತೋಡುವಲ್ಲಿ ಸಫಲರಾದರು. ಹಿಮ್ಮತ್ ಸಿಂಗ್ 15 ರನ್ ಬಾರಿಸಿ ಔಟ್ ಆದರು. ಮಿಚೆಲ್ ಮಾರ್ಷ್ 55 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಎಲ್‌ಎಸ್‌ಜಿ 119 ರನ್‌ಗಳಿಗೆ ಆಲೌಟ್ ಆಯಿತು.
ಮಾರಕ ಬೌಲಿಂಗ್
ಮೇಲ್ನೋಟಕ್ಕಂತೂ ಈ ಪಂದ್ಯದ ಹೀರೋ ರವೀಂದ್ರ ಜಡೇಜಾ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು. ಆದರೆ ನಿಜಕ್ಕೂ ಪಂದ್ಯಕ್ಕೆ ತಿರುವು ನೀಡಿದ್ದು ವೇಗದ ಬೌಲರ್ ಜೋಫ್ರಾ ಆರ್ಚರ್.
ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಪವರ್ ಪ್ಲೇನಲ್ಲಿ ಪವರ್ ಪ್ಯಾಕ್ಡ್ ಪ್ರದರ್ಶನ ನೀಡಿದರು. ಇವರ ಬೆಂಕಿಯಂತಹ ಎಸೆತಗಳನ್ನು ಎದುರಿಸುವಲ್ಲಿ ಎಲ್‌ಎಸ್‌ಜಿ ಬ್ಯಾಟರ್‌ಗಳು ಎಡವಿದರು. ಇವರು ಪವರ್ ಪ್ಲೇನ ಐದನೇ ಓವರ್‌ನಲ್ಲಿ ಒಂದೇ ಒಂದು ರನ್ ನೀಡದೇ ಎಲ್‌ಎಸ್‌ಜಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಇವರ ಶಿಸ್ತುಬದ್ಧ ದಾಳಿ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಲು ಕಾರಣವಾಯಿತು. ಇವರು ಮಾಡಿದ 4 ಓವರ್‌ಗಳಲ್ಲಿ 1 ಮೇಡನ್ ಮಾಡಿ 20 ರನ್ ನೀಡಿ ಮೂರು ವಿಕೆಟ್ ಪಡೆದರು. ಜೋಫ್ರಾ ನಿಶ್ಚಿತವಾಗಿ ಪಂದ್ಯದ ಗತಿಯನ್ನೇ ಬದಲಿಸಿದರು. ಇವರು ಎಲ್‌ಎಸ್‌ಜಿ ತಂಡಕ್ಕೆ ವಿಲನ್ ರೀತಿ ಕಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications