Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕುಸಿದ ಮುಂಬೈಗೆ ತಿಲಕ್‌ ವರ್ಮಾ ಅರ್ಧಶತಕದ ಆಸರೆ: ರಾಜಸ್ಥಾನಕ್ಕೆ ಸವಾಲಿನ ಗುರಿ

ಸೋಮವಾರದ ಐಪಿಎಲ್‌- 2024ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (ಆರ್‌ಆರ್) ವಿರುದ್ಧ ಮುಂಬೈ ಇಂಡಿಯನ್ಸ್‌ (ಎಂಐ) ತಂಡ ಬೃಹತ್‌ ರನ್‌ ಗಳಿಸುವಲ್ಲಿ ವಿಫಲವಾಗಿದೆ. ಜೈಪುರದ ಸವಾಯಿ ಮಾನ್ಸಿಂಗ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ರನ್‌ ವೇಗಕ್ಕೆ ರಾಜಸ್ಥಾನ ತಂಡದ ಬೌಲರ್ಸ್‌ ಬ್ರೇಕ್‌ ಹಾಕಿದ್ದಾರೆ.

ಉತ್ತಮ ಆರಂಭ ಪಡೆಯುವಲ್ಲಿ ಮುಂಬೈ ಎಡುವಿದರು ಕೂಡ ಮಾಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅದ್ಭುತ ಪ್ರದರ್ಶನದಿಂದ 180 ರನ್‌ಗಳ ಟಾರ್ಗೆಟ್‌ ಅನ್ನು ರಾಜಸ್ಥಾನ ತಂಡಕ್ಕೆ ನೀಡಿದೆ. ನಿಗದಿತ 20 ಓವರ್‌ಗಳಲ್ಲಿ ಮುಂಬೈ 9 ವಿಕೆಟ್‌ ನಷ್ಟಕ್ಕೆ 179 ರನ್‌ಗಳನ್ನು ಗಳಿಸಷ್ಟೆ ಶಕ್ತವಾಯಿತು. ಮುಂಬೈ ಪರ ತಿಲಕ್ ವರ್ಮಾ (50) ಅರ್ಧಶತಕ ಸಿಡಿಸಿ ಮಿಂಚಿದರು. ಮತ್ತೊಂದೆಡೆ ನೆಹಾಲ್ ವಧೇರಾ (49) ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್‌ ಕಳೆದುಕೊಂಡರು.

RR vs MI Match Rajasthan Royals vs Mumbai Indians match First innings Report

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಇನ್ನಿಂಗ್ಸ್‌ ಶುರು ಮಾಡಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಆರಂಭಿಕರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಅವರಿಂದ ಹೇಳಿಕೊಳ್ಳುವಂತ ಪ್ರದರ್ಶನ ಕಂಡು ಬರಲಿಲ್ಲ. ಕೇವಲ 6 ರನ್‌ ಗಳಿಸುವಷ್ಟರಲ್ಲೆ ಮುಂಬೈ ಇಶಾನ್‌ (೦) ಮತ್ತು ರೋಹಿತ್‌ (6) ವಿಕೆಟ್‌ ಕಳೆದುಕೊಳ್ಳಬೇಕಾಯಿತು.

ನಂತರ ಕ್ರೀಸ್‌ಗೆ ಬಂದ ಸೂರ್ಯಕುಮಾರ್‌ ಯಾದವ್‌ (10) ಕೂಡ ತಂಡದ ಪರ ರನ್‌ ಗಳಿಸಲು ಸಾಧ್ಯವಾಗದೆ ಔಟ್‌ ಆದರು. ಈ ಹಂತದಲ್ಲಿ ಒಂದಾದ ತಿಲಕ್ ವರ್ಮಾ ಹಾಗು ಮೊಹಮ್ಮದ್ ನಬಿ ನಿಧನ ಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದರು. ಆದರೆ 23 ರನ್‌ ಗಳಿಸಿದ ನಬಿ ಅವರ ವಿಕೆಟ್‌ ಪಡೆಯುವ ಮೂಲಕ ಮುಂಬೈಗೆ ಮತ್ತೆ ಯುಜ್ವೇಂದ್ರ ಚಹಾಲ್ ಶಾಕ್‌ ನೀಡಿದರು.

ಆದರೂ ಕುಗ್ಗ ತಿಲಕ್‌ ವರ್ಮಾ ರಾಜಸ್ಥಾನ ಬೌಲರ್ಸ್‌ಗಳನ್ನು ಕಾಡಿದರು. ತಿಲಕ್‌ ಜೊತೆಗೂಡಿದ ನೆಹಾಲ್ ವಧೇರಾ ಸಹಾ ಅಬ್ಬರದ ಬ್ಯಾಟಿಂಗ್‌ ಮಾಡಿದರು. ಈ ಜೋಡಿ 99 ರನ್‌ಗಳ ಜೊತೆಯಾಟವಾಡಿ ಮುಂಬೈ ತಂಡದ ಸ್ಕೋರ್‌ ಅನ್ನು 150 ರನ್‌ಗಳ ಗಡಿ ದಾಟಿಸಿತು.

ಉತ್ತಮವಾಗಿ ಆಡುತ್ತಿದ್ದ ನೆಹಾಲ್ ವಧೇರಾ 49 ರನ್‌ಗಳಿಗೆ ವಿಕೆಟ್‌ ಕಳೆದುಕೊಳ್ಳುವ ಮೂಲಕ ಅರ್ಧಶತಕದ ವಂಚಿತರಾದರು. ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್‌ ಹಾಗು 3 ಬೌಂಡರಿ ಸಿಡಿಸಿ ನೆಹಾಲ್‌ ಮಿಂಚಿದರು. ಮಾಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಹಾರ್ದಿಕ್‌ ಪಾಂಡ್ಯ ಸಹಾ ಬಿರುಸಿನ ಬ್ಯಾಟಿಂಗ್‌ ಮಾಡಲಿಲ್ಲ. ಕೇವಲ 10 ರನ್‌ಗಳಿಗೆ ಪಾಂಡ್ಯ ಔಟ್‌ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು.

ಇನ್ನುಳಿಂದತೆ ಟಿಮ್ ಡೇವಿಡ್ (3) ಹಾಗು ಜೆರಾಲ್ಡ್ ಕೋಟ್ಜಿ (0) ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಳೆದುಕೊಂಡರು. ಇತ್ತ ಮಿಂಚಿನ ಆಟವಾಡಿದ ತಿಲಕ್‌ ವರ್ಮಾ ಕೊನೆಯಲ್ಲಿ 45 ಎಸೆತಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 5 ಬೌಂಡರಿ ಹೊಡೆದು 65 ರನ್‌ಗಳಿಗೆ ಔಟ್‌ ಆದರು. ಪಿಯೂಷ್ ಚಾವ್ಲಾ (1), ಜಸ್ಪ್ರೀತ್ ಬುಮ್ರಾ (2) ಅಜೇಯರಾಗಿ ಉಳಿದರು. ಅಂತಿಮವಾಗಿ ಮುಂಬೈ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡು 179 ರನ್‌ಗಳನ್ನು ಗಳಿಸಿತು.

ರಾಜಸ್ಥಾನ ಪರ ಸಂದೀಪ್ ಶರ್ಮಾ ಐದು ವಿಕೆಟ್‌ ಪಡೆದು ಮುಂಬೈ ರನ್‌ಗಳಿಸದಂತೆ ನೋಡಿಕೊಂಡರು. ಇನ್ನೊಂದೆಡೆ ದಾಳಿಗಿಳಿದಿದ್ದ ಟ್ರೆಂಟ್ ಬೌಲ್ಟ್ 2 ವಿಕೆಟ್‌ ಹಾಗು ಅವೇಶ್ ಖಾನ್, ಯುಜ್ವೇಂದ್ರ ಚಹಾಲ್ ತಲಾ ಒಂದು ವಿಕೆಟ್‌ ಪಡೆದರು.

Story first published: Monday, April 22, 2024, 21:31 [IST]
Other articles published on Apr 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+