For Quick Alerts
ALLOW NOTIFICATIONS  
For Daily Alerts
 

RR vs MI: 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ನಿರ್ಮಿಸಿದ ಮೊದಲಿಗ ಯುಜ್ವೇಂದ್ರ ಚಹಾಲ್!

ಸೋಮವಾರ, ಏಪ್ರಿಲ್ 22ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಇದೇ ವೇಳೆ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 200 ವಿಕೆಟ್‌ಗಳ ಸಾಧನೆಯನ್ನು ಪೂರೈಸಿದರು. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಬೌಲರ್ ಎನಿಸಿಕೊಂಡರು.

RR vs MI Yuzvendra Chahal Became the 1st Player to achieve 200th Wickets in 17 years of IPL history

ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಭಾರತದ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ 200 ವಿಕೆಟ್‌ಗಳ ದಾಖಲೆ ನಿರ್ಮಿಸಿದರು. ಚಹಾಲ್ ಅವರ ಕ್ರಿಕೆಟ್ ವೃತ್ತಿಜೀವನದ ಈ ಅದ್ಭುತ ಕ್ಷಣವು ಪಂದ್ಯದ 8ನೇ ಓವರ್‌ನಲ್ಲಿ ಸಂಭವಿಸಿತು.

ಅಫ್ಘಾನಿಸ್ತಾನ ಮತ್ತು ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರನ್ನು 23 ರನ್‌ಗಳಿಗೆ ಔಟ್ ಮಾಡುವ ಮೂಲಕ ಯುಜ್ವೇಂದ್ರ ಚಹಾಲ್ ಐಪಿಎಲ್‌ನಲ್ಲಿ ವಿಕೆಟ್‌ಗಳ ದ್ವಿಶತಕದ ಸಾಧನೆ ಮಾಡಿದರು.

ಈವೆರೆಗೆ 153 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಯುಜ್ವೇಂದ್ರ ಚಹಾಲ್ 21.37ರ ಸರಾಸರಿಯಲ್ಲಿ 200 ವಿಕೆಟ್‌ಗಳನ್ನು ಪಡೆದಿದ್ದಾರೆ. 40 ರನ್‌ಗಳಿಗೆ 5 ವಿಕೆಟ್ ಗಳಿಕೆಯು ಅತ್ಯುತ್ತಮ ಅಂಕಿಅಂಶಗಳಾಗಿವೆ. ಯುಜ್ವೇಂದ್ರ ಚಹಾಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆರು ಬಾರಿ 4 ವಿಕೆಟ್ ಸಾಧನೆಗಳನ್ನು ಮತ್ತು ಒಂದು ಬಾರಿ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

RR vs MI Yuzvendra Chahal Became the 1st Player to achieve 200th Wickets in 17 years of IPL history

ಯುಜ್ವೇಂದ್ರ ಚಹಾಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರುವ ಮೊದಲು ಮುಂಬೈ ಇಂಡಿಯನ್ಸ್ (2011-13) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) (2014-21) ಪರ ಆಡಿದ್ದರು.

ಯುಜ್ವೇಂದ್ರ ಚಹಾಲ್ ಮುಂಬೈ ಇಂಡಿಯನ್ಸ್ ಪರ ಆಡಿದ ಏಕೈಕ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, ನಂತರ ಆರ್‌ಸಿಬಿ ಪರ ಆಡಿದ 113 ಪಂದ್ಯಗಳಲ್ಲಿ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ ಅವರು ಈವರೆಗೆ 39 ಪಂದ್ಯಗಳಲ್ಲಿ 61 ವಿಕೆಟ್‌ಗಳನ್ನು ಪಡೆದಿದ್ದಾರೆ.

ಯುಜ್ವೇಂದ್ರ ಚಹಾಲ್ ಅವರ ಹಿಂದೆ ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ (161 ಐಪಿಎಲ್ ಪಂದ್ಯಗಳಲ್ಲಿ 183 ವಿಕೆಟ್), ಪಿಯೂಷ್ ಚಾವ್ಲಾ (186 ಪಂದ್ಯಗಳಲ್ಲಿ 181 ವಿಕೆಟ್), ಭುವನೇಶ್ವರ್ ಕುಮಾರ್ (167 ಪಂದ್ಯಗಳಲ್ಲಿ 174 ವಿಕೆಟ್) ಮತ್ತು ಅಮಿತ್ ಮಿಶ್ರಾ (161 ಪಂದ್ಯಗಳಲ್ಲಿ 173 ವಿಕೆಟ್) ಅವರಂತಹ ಆಟಗಾರರು ಹೆಚ್ಚಿನ ವಿಕೆಟ್ ಪಡೆದಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಡ್ಯಾನಿ ಬ್ರಿಗ್ಸ್ (219 ವಿಕೆಟ್) ಮತ್ತು ಸಮಿತ್ ಪಟೇಲ್ (208 ವಿಕೆಟ್) ನಂತರ, ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಯುಜ್ವೇಂದ್ರ ಚಹಾಲ್ 200 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಆಟಗಾರ ಎನಿಸಿದರು.

ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ ಪಂದ್ಯದ ವಿವರ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ತಿಲಕ್ ವರ್ಮಾ ಅವರ ಅಮೋಘ ಅರ್ಧಶತಕ ಮತ್ತು ನೇಹಾಲ್ ವಧೇರಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

180 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕದ ಸಹಾಯದಿಂದ 18.4 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 183 ರನ್ ಗಳಿಸುವ ಮೂಲಕ ಸುಲಭವಾಗಿ ಗೆಲುವು ಸಾಧಿಸಿತು.

Story first published: Tuesday, April 23, 2024, 8:50 [IST]
Other articles published on Apr 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+