RR vs RCB: 202 ರನ್‌ಗಳ ಗುರಿಯನ್ನು ರಾಯಲ್ಸ್ 18 ಓವರ್‌ಗಳಲ್ಲಿ ಬೆನ್ನಟ್ಟಿದ್ದು ಹೇಗೆ?
19ನೇ ಆವೃತ್ತಿ ಐಪಿಎಲ್‌ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳು ಕಾದಾಟ ನಡೆಸಿದವು. ಈ ವೇಳೆ ರಾಜಸ್ಥಾನ್ ತಂಡ ಅಮೋಘ ಪ್ರದರ್ಶನ ನೀಡಿ, ಲೀಗ್ ಹಂತದಲ್ಲಿ ನಾಲ್ಕನೇ ಗೆಲುವು ದಾಖಲಿಸಿತು. ಈ ಮೂಲಕ ಪ್ಲೇ ಆಫ್‌ಗೆ ಒಂದು ಹೆಜ್ಜೆ ಹತ್ತಿರ ಇಟ್ಟಿದೆ. ಆರ್‌ಆರ್ ಪ್ರಸಕ್ತ ಐಪಿಎಲ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಪವರ್ ಪ್ಲೇನಲ್ಲಿ ಆರ್‌ಸಿಬಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಜತ್ ಪಾಟಿದಾರ್ ಏಕಾಂಗಿ ಹೋರಾಟವನ್ನು ನಡೆಸಿ ತಂಡಕ್ಕೆ ಆಧಾರವಾದರು. ಇವರ ಅರ್ಧಶತಕದ ಬಲದಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 201 ರನ್ ಸೇರಿಸಿತು. ಆರ್‌ಆರ್ ತಂಡದ ಬೌಲರ್‌ಗಳು ಪವರ್ ಪ್ಲೇನಲ್ಲಿ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಪಂದ್ಯದಲ್ಲಿ ಕೊಂಚ ಹಿಡಿತ ಸಾಧಿಸಿದರು.

ಈ ಗುರಿಯನ್ನು ಬೆನ್ನಟ್ಟಿದ ಆರ್‌ಆರ್ ತಂಡ ಆರಂಭದಿಂದಲೂ ಮೈಚಳಿ ಬಿಟ್ಟು ಬ್ಯಾಟ್ ಮಾಡಿತು. ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಆರ್ಭಟಿಸಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಜೋಶ್ ಹ್ಯಾಜಲ್‌ವುಡ್ ಸಫಲರಾದರು. ಆದರೆ ವೈಭವ್ ತಮ್ಮ ನೈಜ ಆಟವನ್ನು ಆಡಿ ಗಮನ ಸೆಳೆದರು. ಯಶಸ್ವಿ ಔಟ್ ಆಗುತ್ತಿದ್ದಂತೆ ವೈಭವ್ ಹಾಗೂ ಧ್ರುವ್ ಜುರೇಲ್ ತಂಡಕ್ಕೆ ಶತಕದ ಜೊತೆಯಾಟದ ಕಾಣಿಕೆ ನೀಡಿದರು.
ಗೆಲುವಿಗೆ ಕಾರಣವಾಗಿದ್ದು ಇದೇ ಅಂಶ
ರಾಜಸ್ಥಾನ್ ರಾಯಲ್ಸ್ ಪವರ್ ಪ್ಲೇನಲ್ಲಿ 97 ರನ್ ಬಾರಿಸಿ ಅರ್ಧ ಪಂದ್ಯವನ್ನು ಗೆದ್ದಂತೆ ಆಗಿತ್ತು. ಇದು ರಾಯಲ್ಸ್ ಒಟ್ಟಾರೆ ಐಪಿಎಲ್‌ನಲ್ಲಿ ಕಲೆ ಹಾಕಿದ ದೊಡ್ಡ ಪವರ್ ಪ್ಲೇ ಮೊತ್ತವಾಗಿದೆ. ಇಲ್ಲಿಂದ ರಾಜಸ್ಥಾನ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಹಂತ ಹಂತವಾಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ರಾಜಸ್ಥಾನ್ ಅಬ್ಬರಿಸಿತು. ಇದೇ ಹಂತದಲ್ಲಿ ಆರ್‌ಸಿಬಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಪುಟಿದೇಳುವ ಸೂಚನೆ ನೀಡಿದರೂ ಸಹ, ಧ್ರುವ್ ಜುರೇಲ್ ಇನ್ನೊಂದು ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು.

ರಾಜಸ್ಥಾನ್ ಪ್ರಸಕ್ತ ಐಪಿಎಲ್‌ನಲ್ಲಿ 4ನೇ ಗೆಲುವಿನ ನಗೆ ಬೀರಿತು. ಅಲ್ಲದೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು.
ಆರ್‌ಸಿಬಿ ಪಟಪಟನೇ ವಿಕೆಟ್ ಕಳೆದುಕೊಂಡಿದ್ದರಿಂದ ರನ್ ವೇಗವನ್ನು ಹೆಚ್ಚಿಸಲು ಇಂಪ್ಯಾಕ್ಟ್ ಪ್ಲೇಯರ್ ವೆಂಕಟೇಶ್ ಅಯ್ಯರ್ ಅವರನ್ನು ಬಳಸಿತು. ಇದರಿಂದ ಸ್ಪಿನ್ ಬೌಲರ್ ಸುಯಶ್ ಶರ್ಮಾ ಬೌಲಿಂಗ್ ನಡೆಸಲು ಸಾಧ್ಯವಾಗಲಿಲ್ಲ. ಇದು ಸಹ ಆರ್‌ಆರ್ ತಂಡ ಪಂದ್ಯ ಗೆಲ್ಲಲು ಕಾರಣವಾಯಿತು. ಆದರೆ ಪವರ್ ಪ್ಲೇನಲ್ಲಿ ರಾಯಲ್ಸ್ ಆಡಿದ ಆಟ ಗೆಲುವಿನ ವೇದಿಕೆಯನ್ನು ಸಿದ್ಧ ಪಡಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications