IPL 2024 Qualifier-2: ಬೌಲ್ಟ್, ಅವೇಶ್ ದಾಳಿಗೆ ಹೈದರಾಬಾದ್ ಬ್ಯಾಟಿಂಗ್ ಛಿದ್ರಾ; ಆರ್‌ಆರ್‌ಗೆ ಸುಲಭ ಗುರಿ
ಮೇ 24 ಶುಕ್ರವಾರ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಕ್ವಾಲಿಫೈಯರ್ -2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಎದುರು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಸಾಧಾರಣ ಮೊತ್ತ ಗಳಿಸಿದೆ.
ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿದ ಟ್ರೆಂಟ್ ಬೌಲ್ಟ್ ದಾಳಿಗೆ ಹೈದರಾಬಾದ್ ತತ್ತರಿಸಿ ಹೋಗಿದೆ. ಹೆನ್ರಿಚ್ ಕ್ಲಾಸೆನ್ ಅರ್ಧಶತಕದ ಆಸರೆಯಿಂದ ಕುಸಿದ ಎಸ್‌ಆರ್‌ಹೆಚ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್‌ಗಳನ್ನು ಕಲೆ ಹಾಕಿದೆ. ಈ ಪಂದ್ಯವನ್ನು ಆರ್‌ಆರ್ ಗೆಲ್ಲಲು 176 ರನ್‌ಗಳ ಅವಶ್ಯಕತೆ ಇದೆ.

ಟಾಸ್ ಸೋತು ಬ್ಯಾಟಿಂಗ್ ಶುರು ಮಾಡಿದ ಹೈದರಾಬಾದ್ ಆರಂಭಿಕರು ತಮ್ಮ ಅಬ್ಬರವನ್ನು ತೋರಿಸಲು ಸಾಧ್ಯವಾಗಲಿಲ್ಲ. 5 ಎಸೆತಗಳಲ್ಲಿ 12 ರನ್‌ಗಳಿ ಅಭಿಷೇಕ್ ಶರ್ಮಾ ಔಟ್ ಆದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಠಿ ಮತ್ತು ಆರಂಭಿಕ ಟ್ರಾವಿಸ್ ಹೆಡ್ ಒಂದಾಗಿ ರನ್ ಗಳಿಸಿದರು.
ಉತ್ತಮವಾಗಿ ಆಡುತ್ತಿದ ರಾಹುಲ್ ತ್ರಿಪಾಠಿ 37 ರನ್‌ಗೆ ವಿಕೆಟ್ ಕಳೆದುಕೊಂಡರೆ, ನಾಲ್ಕನೇ ಕ್ರಮಾಂಕದಲ್ಲಿ ಬಂದ ಐಡೆನ್ ಮಾರ್ಕ್ರಾಮ್ ಕೇವಲ 1 ರನ್‌ಗೆ ಔಟ್ ಆಗಿ ನಿರಾಸೆ ಮೂಡಿಸಿದರು.
ಬಳಿಕ ಬಂದ ಹೆನ್ರಿಚ್ ಕ್ಲಾಸೆನ್ ಆರ್‌ಆರ್ ಬೌಲರ್ಸ್ ವಿರುದ್ಧ ತಾಳ್ಮೆಯಿಂದ ಬ್ಯಾಟ್ ಬೀಸಿ ರನ್‌ಗಳಿಸಿದರು. ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟರ್ ಟ್ರಾವಿಸ್ ಹೆಡ್ (34) ರನ್‌ಗಳಿಸುವ ಬರದಲ್ಲಿ ಔಟ್ ಆದರು. ನಂತರ ನಿತೀಶ್ ರೆಡ್ಡಿ ಕೂಡ ಕೇವಲ 5 ರನ್‌ಗೆ ವಿಕೆಟ್ ಕಳೆದುಕೊಂಡರು.
ಅಬ್ದುಲ್ ಸಮದ್ ಬಂದ ದಾರಿಗೆ ಸುಂಕವಿಲ್ಲದಂತೆ ಶೂನ್ಯಕ್ಕೆ ಔಟ್ ಆದರು. ಆದರೆ ಕ್ರೀಸ್‌ಗೆ ಕಚ್ಚಿ ನಿಂತು ಆಡಿದ ಹೆನ್ರಿಚ್ ಕ್ಲಾಸೆನ್ ಅರ್ಧಶತಕ ಸಿಡಿಸಿ ಮಿಂಚಿದರು. 34 ಎಸೆತಗಳಲ್ಲಿ 4 ಬೌಂಡರಿ ಮೂಲಕ 50 ರನ್‌ಗಳಿಸಿ ಔಟ್ ಆದರು.
ಶಹಬಾಜ್ ಅಹಮದ್ 18 ರನ್‌ಗೆ ವಿಕೆಟ್ ಕಳೆದುಕೊಂಡರು. ಜಯದೇವ್ ಉನದ್ಕತ್ 5 ರನೌಟ್ ಆದರು. ಕೊನೆಯಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅಜೇಯ 5 ರನ್ ಹೊಡೆದು ಎಸ್‌ಆರ್‌ಹೆಚ್ ಮೊತ್ತ ಹೆಚ್ಚಿಸಿದರು.
ರಾಜಸ್ಥಾನ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಮತ್ತು ಅವೇಶ್ ಖಾನ್ ತಲಾ 3 ವಿಕೆಟ್ ಪಡೆದು ಸಂಭ್ರಮಿಸಿದರು. ಸಂದೀಪ್ ಶರ್ಮಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications