IPL 2024 Qualifier 2: ಪಿಂಕ್ ಬಾಯ್ಸ್ ಸೋಲಿಸಿದ ಆರೆಂಜ್ ಆರ್ಮಿ; ಫೈನಲ್‌ನಲ್ಲಿ KKR vs SRH ಹಣಾಹಣಿ
ಮೇ 24 ಶುಕ್ರವಾರ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಕ್ವಾಲಿಫೈಯರ್ -2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಎದುರು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಭರ್ಜರಿ ಗೆಲುವು ಕಂಡಿದೆ.
ನಾಕೌಟ್ ಪಂದ್ಯದಲ್ಲಿ ಶಹಬಾಜ್ ಅಹ್ಮದ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ಶಹಬಾಜ್ ಅಹ್ಮದ್ ಸ್ಪಿನ್ ದಾಳಿಗೆ ಸಿಲುಕಿದ ಆರ್‌ಆರ್ ಬ್ಯಾಟರ್‌ಗಳು ರನ್ ಗಳಿಸಲು ಪರದಾಟ ನಡೆಸಿದರು.

ಆರ್‌ಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಎಸ್‌ಆರ್‌ಎಚ್ 36 ರನ್‌ಗಳ ಜಯ ಸಾಧಿಸಿದೆ. ಜೊತೆಗೆ ಐಪಿಎಲ್ 2024ರ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ಎದುರು ಎಸ್‌ಆರ್‌ಹೆಚ್ ಸೆಣಸಾಡಲಿದೆ.
ಹೈದರಾಬಾದ್ ನೀಡಿದ 176 ರನ್‌ಗಳ ಗುರು ಬೆನ್ನಟ್ಟಿದ್ದ ರಾಜಸ್ಥಾನ ಉತ್ತಮ ಆರಂಭ ಪಡೆಯಲಿಲ್ಲ. ಶುರುವಿನಲ್ಲೇ ಟಾಮ್ ಕೊಹ್ಲರ್-ಕ್ಯಾಡ್ಮೋರ್ 10 ರನ್‌ಗೆ ಔಟ್ ಆದರು. ಅದ್ಭುತವಾಗಿ ಆಡುತ್ತಿದ ಯಶಸ್ವಿ ಜೈಸ್ವಾಲ್ ಸಹಾ 42 ರನ್‌ಗೆ ವಿಕೆಟ್ ಕಳೆದುಕೊಂಡು ತಮ್ಮ ಆಟ ನಿಲ್ಲಿಸಿದರು.
ನಂತರ ಮೂರನೇ ಕ್ರಮಾಂಕದಲ್ಲಿ ಆಗಮಿಸಿದ ಸಂಜು ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಕೇವಲ 10 ರನ್‌ಗಳಿಸಿದ ಸಂಜು ವಿಕೆಟ್ ಕಳೆದುಕೊಂಡರು. ಬಳಿಕ ರಿಯಾನ್ ಪರಾಗ್ ಕೇವಲ 6 ರನ್‌ಗೆ ಔಟ್ ಆದರು.
ರವಿಚಂದ್ರನ್ ಅಶ್ವಿನ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರೆ, ಶಿಮ್ರಾನ್ ಹೆಟ್ಮೆಯರ್ 4 ಮತ್ತು ರೋವ್ಮನ್ ಪೊವೆಲ್ 6 ರನ್‌ಗೆ ಔಟ್ ಆಗುವ ಮೂಲಕ ಪೆವಿಲಿಯನ್ ಪರೇಡ್ ನಡೆಸಿದರು. ಈ ಹಂತದಲ್ಲಿ ಆರ್‌ಆರ್ ಗೆಲುವಿಗೆ ಹೋರಾಡಿದ ಧ್ರುವ್ ಜುರೆಲ್ ಬಿರುಸಿನ ಬ್ಯಾಟಿಂಗ್ ಮಾಡಿದರು.
36 ಎಸೆತಗಳಲ್ಲಿ 2 ಸಿಕ್ಸರ್ ಹಾಗು 7 ಬೌಂಡರಿ ಮೂಲಕ ಅಜೇಯ 56 ರನ್ ಬಾರಿಸಿದ ಧ್ರುವ್ ಜುರೆಲ್ ಆರ್‌ಆರ್‌ಗೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈದರಾಬಾದ್ ಎದುರು ರಾಜಸ್ಥಾನ ಸೋಲಿಗೆ ಶರಣಾಯಿತು.
ಹೈದರಾಬಾದ್ ಪರ ಶಹಬಾಜ್ ಅಹ್ಮದ್ 3 ವಿಕೆಟ್ ಪಡೆದು ಸಂಭ್ರಮಿಸಿದರು. ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದರೆ, ಟಿ ನಟರಾಜನ್ ಮತ್ತು ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications