RSWS-2: ಸ್ಟುವರ್ಟ್ ಬಿನ್ನಿ ಸ್ಪೋಟಕ ಆಟ: ರನ್ ಮಳೆ ಸುರಿಸಿದ ಇಂಡಿಯಾ ಲೆಜೆಂಡ್ಸ್

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಎರಡನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಇಂಡಿಯಾ ಲೆಜೆಂಡ್ಸ್ ತಂಡ ಅದ್ಭುತ ಆರಂಭ ಪಡೆದಿದೆ. ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ನೀಡಿದ ಅಮೋಘ ಬ್ಯಾಟಿಂಗ್ ಪ್ರದರ್ಶನ ಹಾಗೂ ಯೂಸುಫ್ ಪಠಾಣ್ ಅಂತಿಮ ಹಂತದಲ್ಲಿ ಸಿಡಿಸಿದ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಇಂಡಿಯಾ ಲೆಜೆಂಡ್ಸ್ ಕೇವಲ 4 ವಿಕೆಟ್ ಕಳೆದುಕೊಂಡು 217 ರನ್‌ಗಳನ್ನು ಗಳಿಸಿದೆ.
ಆರಂಭಿಕರಾಗಿ ಕಣಕ್ಕಿಳಿದ ನಮನ್ ಓಜಾ ಹಾಗೂ ನಾಯಕ ಸವಿನ್ ತೆಂಡೂಲ್ಕರ್ 46 ರನ್‌ಗಳ ಜೊತೆಯಾಟ ನೀಡುವ ಮೂಲಕ ಉತ್ತ ಅಡಿಪಾಯವನ್ನು ನೀಡಿದರು.ಸಚಿನ್ ತೆಂಡೂಲ್ಕರ್ ಬ್ಯಾಟ್‌ನಿಂದ ಕಢವಲ 16 ರನ್ಗಳು ಬಂತಾದರೂ ಎರಡು ಬೌಂಡರಿಗಳು ಅಭಿಮಾನಿಗಳಿಗೆ ಗತಕಾಲವನ್ನು ನೆನಪಿಸಿದ್ದು ಸುಳ್ಳಲ್ಲ. ಇನ್ನು ಇತ್ತೀಚೆಗಷ್ಟೇ ಐಪಿಎಲ್‌ಗೆ ಕೂಡ ನಿವೃತ್ತಿ ಘೋಷಣೆ ಮಾಡಿರುವ ಸುರೇಶ್ ರೈನಾ 22 ಎಸೆತಗಳಲ್ಲಿ 33 ರನ್‌ಗಳನ್ನು ಸಿಡಿಸಿ ಉತ್ತ ಪ್ರದರ್ಶನ ನೀಡಿದ್ದಾರೆ. ಆದರೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವರಾಜ್ ಸಿಂಗ್ ಮಾತ್ರ 8 ಎಸೆತಗಳಲ್ಲಿ 6 ರನ್‌ಗಳನ್ನು ಮಾತ್ರವೇ ಗಳಿಸಿದರು.

ಭರಪೂರ ಮನರಂಜನೆ ನೀಡಿದ ಸ್ಟುವರ್ಟ್ ಬಿನ್ನಿ
ಇನ್ನು ಭಾರತದ ಇನ್ನಿಂಗ್ಸ್‌ನ ಪ್ರಮುಖ ಹೈಲೈಟ್ಸ್ ಎಂದರೆ ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್. ಯುವರಾಜ್ ಸಿಂಗ್‌ಗೂ ಮುನ್ನವೇ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಾಗ ಎಲ್ಲರಿಗೂ ಅಚ್ಚರಿ ಮೂಡಿಸಿತು. ಆದರೆ ನಾಯಕ ಸಚಿನ್ ತೆಂಡೂಲ್ಕರ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬಿನ್ನಿ ಬ್ಯಾಟಟ್ ಬೀಸಿದರು. ಕೇವಲ 42 ಎಸೆತಗಳಲ್ಲಿ 82 ರನ್‌ಗಳನ್ನು ಬಾರಿಸಿದ ಅವರು ತಂಡದ ಮೊತ್ತ 200ರ ಗಡಿ ದಾಟಲು ಪ್ರಮುಖ ಕಾರಣವಾದರು. ಭರ್ಜರಿ ಆರು ಸಿಕ್ಸರ್ ಸಿಡಿಸಿದ ಬಿನ್ನಿ ಐದು ಬೌಂಡರಿ ಕೂಡ ಗಳಿಸಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ರಹಾನೆ, ಯಶಸ್ವಿ ಜೈಸ್ವಾಲ್!

ಬ್ಯಾಟಿಂಗ್‌ನಲ್ಲಿ ಯೂಸುಫ್ ಪಠಾಣ್ ಕಮಾಲ್
ಇನ್ನು ಮತ್ತೋರ್ವ ಆಲ್‌ರೌಂಡರ್ ಯೂಸುಫ್ ಪಠಾಣ್ ಕೂಡ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದು ರನ್ ವೇಗವನ್ನು ಹೆಚ್ಚಿಸಿದರು. 15 ಎಸೆತಗಳನ್ನು ಎದುರಿಸಿದ ಯೂಸುಫ್ ಪಠಾಣ್ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸಿದ್ದು ಒಂದು ಬೌಂಡರಿ ಬಾರಿಸಿದರು. ಈ ಮೂಲಕ 35 ರನ್‌ಗಳನ್ನು ಗಳಿಸಿದ್ದಾರೆ. ಸ್ಟುವರ್ಟ್ ಬಿನ್ನಿ ಹಾಗೂ ಯೂಸುಫ್ ಪಠಾಣ್ ಜೋಡಿ ಅಂತಿಮ ಐದು ಓವರ್‌ಗಳಲ್ಲಿ ಬರೊಬ್ಬರಿ 74 ರನ್‌ಗಳನ್ನು ಪೇರಿಸಿದ್ದಾರೆ.
ಇದೇ ಅಲ್ಲವೇ ಕ್ರೀಡಾಸ್ಫೂರ್ತಿ: ವಿರಾಟ್ ಕೊಹ್ಲಿ ಶತಕಕ್ಕೆ ಅಫ್ಘಾನ್ ಸ್ಟಾರ್ ಆಟಗಾರನಿಂದ ವಿಶೇಷ ಉಲ್ಲೇಖ!

ಇಂಡಿಯಾ ಲೆಜೆಂಡ್ಸ್ ಆಡುವ ಬಳಗ
ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ (ವಿಕೆಟ್ ಕೀಪರ್), ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಮನ್‌ಪ್ರೀತ್ ಗೋನಿ, ಮುನಾಫ್ ಪಟೇಲ್, ರಾಹುಲ್ ಶರ್ಮಾ, ಪ್ರಗ್ಯಾನ್ ಓಜಾ
ಬೆಂಚ್: ಹರ್ಭಜನ್ ಸಿಂಗ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್, ಎಸ್ ಬದ್ರಿನಾಥ್
ಸೌತ್ ಆಫ್ರಿಕಾ ಲೆಜೆಂಡ್ಸ್ ಆಡುವ ಬಳಗ: ಹೆನ್ರಿ ಡೇವಿಡ್ಸ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಅಲ್ವಿರೊ ಪೀಟರ್ಸನ್, ಜಾಕ್ವೆಸ್ ರುಡಾಲ್ಫ್, ಜಾಂಟಿ ರೋಡ್ಸ್ (ನಾಯಕ), ಜೋಹಾನ್ ಬೋಥಾ, ಎಡ್ಡಿ ಲೀ, ಜೋಹಾನ್ ವಾನ್ ಡೆರ್ ವಾತ್, ಗಾರ್ನೆಟ್ ಕ್ರುಗರ್, ಮಖಾಯಾ ಎನ್ಟಿನಿ, ಆಂಡ್ರ್ಯೂ ಪುಟ್ಟಿಕ್
ಬೆಂಚ್: ವೆರ್ನಾನ್ ಫಿಲಾಂಡರ್, ಲ್ಯಾನ್ಸ್ ಕ್ಲುಸೆನರ್, ಝಾಂಡರ್ ಡಿ ಬ್ರುಯ್ನ್, ಥಂಡಿ ತ್ಶಬಲಾಲಾ, ಲಾಯ್ಡ್ ನಾರ್ರಿಸ್ ಜೋನ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications