Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RSWS-2: ಇಂಡಿಯಾ ಲೆಜೆಂಡ್ಸ್ vs ದ. ಆಫ್ರಿಕಾ ಲೆಜೆಂಡ್ಸ್, ಟಾಸ್ ರಿಪೋರ್ಟ್ ಹಾಗೂ ಆಡುವ ಬಳಗ

RSWS-2: match 1 India Legends vs South Africa Legends toss report and Playing XI

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ದಿಗ್ಗಜ ಕ್ರಿಕೆಟಿಗರು ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟೂರ್ನಿಯ ಎರಡನೇ ಆವೃತ್ತಿಯ ಮೊದಲ ಪಂದ್ಯ ಆರಂಭವಾಗಿದ್ದು ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ಲೆಜೆಂಡ್ಸ್ ತಂಡವನ್ನು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಮುನ್ನಡೆಸುತ್ತಿದ್ದು ಯುವರಾಜ್ ಸಿಂಗ್, ಸುರೇಶ್ ರೈನಾ ಯೂಸೂಫ್ ಪಠಾಣ್ ಮುನಾಫ್ ಪಟೇಲ್ ಅವರಂತಾ ಆಟಗಾರರು ಇದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕತ್ವವನ್ನು ಜಾಂಟಿ ರೋಡ್ಸ್ ವಹಿಸಿಕೊಂಡಿದ್ದು ಹೆನ್ರಿ ಡೇವಿಡ್ಸ್, ಮಖಾಯ ಎನ್‌ಟಿನಿ ಮೊದಲಾದ ಆಟಗಾರರು ಈ ತಂಡದಲ್ಲಿ ಕಣಕ್ಕಿಳಿದಿದ್ದಾರೆ.

ಕಳೆದ ಬಾರಿಯ ಆವೃತ್ತಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಗೆದ್ದು ಟೂರ್ನಿಯ ಚಾಂಪಿಯನ್ ಎನಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದ್ದು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಎಲ್ಲರ ಕುತೂಹಲ ಮೂಡಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ದಿಗ್ಗಜ ಆಟಗಾರರು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವುದು ಅಭಿಮಾಣಿಗಳ ಕುತೂಹಲ ಹೆಚ್ಚಿಸಿದೆ.

ಇಂಡಿಯಾ ಲೆಜೆಂಡ್ಸ್ ಆಡುವ ಬಳಗ: ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ (ವಿಕೆಟ್ ಕೀಪರ್), ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಮನ್‌ಪ್ರೀತ್ ಗೋನಿ, ಮುನಾಫ್ ಪಟೇಲ್, ರಾಹುಲ್ ಶರ್ಮಾ, ಪ್ರಗ್ಯಾನ್ ಓಜಾ
ಬೆಂಚ್: ಹರ್ಭಜನ್ ಸಿಂಗ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್, ಎಸ್ ಬದ್ರಿನಾಥ್

ಸೌತ್ ಆಫ್ರಿಕಾ ಲೆಜೆಂಡ್ಸ್ ಆಡುವ ಬಳಗ: ಹೆನ್ರಿ ಡೇವಿಡ್ಸ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಅಲ್ವಿರೊ ಪೀಟರ್ಸನ್, ಜಾಕ್ವೆಸ್ ರುಡಾಲ್ಫ್, ಜಾಂಟಿ ರೋಡ್ಸ್ (ನಾಯಕ), ಜೋಹಾನ್ ಬೋಥಾ, ಎಡ್ಡಿ ಲೀ, ಜೋಹಾನ್ ವಾನ್ ಡೆರ್ ವಾತ್, ಗಾರ್ನೆಟ್ ಕ್ರುಗರ್, ಮಖಾಯಾ ಎನ್ಟಿನಿ, ಆಂಡ್ರ್ಯೂ ಪುಟ್ಟಿಕ್
ಬೆಂಚ್: ವೆರ್ನಾನ್ ಫಿಲಾಂಡರ್, ಲ್ಯಾನ್ಸ್ ಕ್ಲುಸೆನರ್, ಝಾಂಡರ್ ಡಿ ಬ್ರುಯ್ನ್, ಥಂಡಿ ತ್ಶಬಲಾಲಾ, ಲಾಯ್ಡ್ ನಾರ್ರಿಸ್ ಜೋನ್ಸ್

Story first published: Saturday, September 10, 2022, 20:54 [IST]
Other articles published on Sep 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+