ಇಂಗ್ಲೆಂಡ್ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್: ಟಾಸ್ ರಿಪೋರ್ಟ್ ಹಾಗೂ ಆಡುವ ಬಳಗ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ದಿಗ್ಗಜ ಕ್ರಿಕೆಟಿಗರು ಸೆಣೆಸಾಡುವ ರೋಡ್ ಸೇಫ್ಟಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟೂರ್ನಿಯ ಎರಡನೇ ಆವೃತ್ತಿಯ ಪಂದ್ಯಗಳು ನಡೆಯುತ್ತಿದೆ. ಇಂದು ಈ ಬಾರಿಯ ಆವೃತ್ತಿಯ 5ನೇ ಪಂದ್ಯ ನಡೆಯುತ್ತಿದ್ದು ಇಂಗ್ಲೆಂಡ್ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಶೀಲಂಕಾ ಲೆಜೆಂಡ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಇಂಗ್ಲೆಂಡ್ ಲೆಜೆಂಡ್ಸ್ ತಂಡವನ್ನು ಇಯಾನ್ ಬೆಲ್ ಮುನ್ನಡೆಸುತ್ತಿದ್ದು ಟಿಮ್ ಆಂಬ್ರೋಸ್, ಡಿಮಿಟ್ರಿ ಮಸ್ಕರೇನಸ್, ಡ್ಯಾರೆನ್ ಮ್ಯಾಡ್ಡಿ ಮೊದಲಾದ ಆಟಗಾರರು ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ಶ್ರೀಲಂಕಾ ದಿಗ್ಗಜರು ತಂಡದಲ್ಲಿ ಅನೇಕ ಸ್ಟಾರ್ ಆಟಗಾರರನ್ನು ಹೊಂದಿದ್ದು ತಿಲಕರತ್ನೆ ದಿಲ್ಶನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸನತ್ ಜಯಸೂರ್ಯ, ಉಫುಲ್ ತರಂಗಾ, ಇಸುರು ಉದಾನ, ನುವಾನ್ ಕುಲಸೇಕರಾ ಮೊದಲಾದ ಆಟಗಾರರು ಕಣಕ್ಕಿಳಿದಿದ್ದಾರೆ.
ಇನ್ನು ಇಯಾನ್ ಬೆಲ್ ನೇತೃತ್ವದ ಇಂಗ್ಲೆಂಡ್ ಲೆಜೆಂಡ್ಸ್ ತಂಡಕ್ಕೆ ಇದು ಈ ಆವೃತ್ತಿಯ ಮೊದಲ ಪಂದ್ಯವಾಗಿದ್ದು ಯಾಔ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಶ್ರೀಲಂಕಾ ಲೆಜೆಂಡ್ಸ್ ತಂಡಕ್ಕೆ ಎರಡನೇ ಪಂದ್ಯವಾಗಿದ್ದು ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾದ ಇಬ್ಬರು ಆರಂಭಿಕರು ಅಬ್ಬರದ ಆಟವನ್ನಾಡುವ ಮೂಲಕ ಮಿಂಚುಹರಿಸಿದ್ದರು., ಅದರಲ್ಲೂ ನಾಯಕ ದಿಲ್ಶನ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಮತ್ತೋರ್ವ ಆರಂಭಿಕ ಆಟಗಾರ ಮುನವೀರ 5 ರನ್‌ಗಳ ಅಂತರದಿಂದ ಶತಕ ವಂಚಿತವಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಶ್ರೀಲಂಕಾ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ.
ಆಡುವ ಬಳಗ ಹೀಗಿದೆ
ಇಂಗ್ಲೆಂಡ್ ಲೆಜೆಂಡ್ಸ್: ಮಾಲ್ ಲೋಯ್, ಇಯಾನ್ ಬೆಲ್ (ನಾಯಕ), ಟಿಮ್ ಆಂಬ್ರೋಸ್, ಫಿಲ್ ಮಸ್ಟರ್ಡ್ (ವಿಕೆಟ್ ಕೀಪರ್), ರಿಕ್ಕಿ ಕ್ಲಾರ್ಕ್, ಡಿಮಿಟ್ರಿ ಮಸ್ಕರೇನ್ಹಸ್, ಡ್ಯಾರೆನ್ ಮ್ಯಾಡಿ, ಕ್ರಿಸ್ ಸ್ಕೋಫೀಲ್ಡ್, ಕ್ರಿಸ್ ಟ್ರೆಮ್ಲೆಟ್, ಸ್ಟೀಫನ್ ಪ್ಯಾರಿ, ಸ್ಟುವರ್ಟ್ ಮೀಕರ್
ಬೆಂಚ್: ನಿಕ್ ಕಾಂಪ್ಟನ್, ಡ್ಯಾರೆನ್ ಸ್ಟೀವನ್ಸ್, ಜೇಮ್ಸ್ ಟಿಂಡಾಲ್
ಶ್ರೀಲಂಕಾ ಲೆಜೆಂಡ್ಸ್: ದಿಲ್ಶಾನ್ ಮುನವೀರ, ತಿಲಕರತ್ನೆ ದಿಲ್ಶಾನ್ (ನಾಯಕ), ಸನತ್ ಜಯಸೂರ್ಯ, ಉಪುಲ್ ತರಂಗ (ವಿಕಕೆಟ್ ಕೀಪರ್), ಚತುರಂಗ ಡಿ ಸಿಲ್ವ, ಅಸೆಲಾ ಗುಣರತ್ನ, ಇಸುರು ಉದಾನ, ನುವಾನ್ ಕುಲಶೇಖರ, ಚಾಮರ ಸಿಲ್ವ, ಇಶಾನ್ ಜಯರತ್ನ, ಜೀವನ್ ಮೆಂಡಿಸ್
ಪೀಠ: ಚಾಮಿಂದ ವಾಸ್, ಚಾಮರ ಕಪುಗೆಡೆರ, ಧಮ್ಮಿಕಾ ಪ್ರಸಾದ್, ದಿಲ್ರುವಾನ್ ಪೆರೇರಾ, ಮಹೇಲ ಉಡವಟ್ಟೆ, ಕೌಶಲ್ಯ ವೀರರತ್ನೆ, ತಿಸಾರ ಪೆರೇರಾ, ಚಿಂತಕ ಜಯಸಿಂಹ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications