Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಕಲ್ಟನ್‌ ಶತಕ: ಎಲ್‌ಎಸ್‌ಜಿಗೆ 244 ರನ್‌ ಗುರಿ ನೀಡಿದ ಮುಂಬೈ

ಮುಂಬೈ: ಭರವಸೆಯ ಬ್ಯಾಟರ್‌ ರಯಾನ್‌ ರಿಕಲ್ಟನ್‌ ಅವರ ಭರ್ಜರಿ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ 19ನೇ ಆವೃತ್ತಿಯ 41ನೇ ಪಂದ್ಯದಲ್ಲಿ 244 ರನ್‌ಗಳ ಗುರಿಯನ್ನು ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ನೀಡಿದೆ.

ಮುಂಬೈ ಇಂಡಿಯನ್ಸ್ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡಿತು. ನಾಯಕ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರವನ್ನು ಆರಂಭಿಕ ಆಟಗಾರರು ಸಮರ್ಥಿಸಿಕೊಂಡರು. ತಂಡವನ್ನು ಸೇರಿದ ಸ್ಟಾರ್ ಆಲ್‌ರೌಂಡರ್‌ ವಿಲ್‌ ಜಾಕ್ಸ್‌ ಅವರಿಗೆ ಆರಂಭಿಕರಾಗಿ ಆಡುವ ಅವಕಾಶವನ್ನು ಪಡೆದರು. ಇವರು ರಯಾನ್‌ ರಿಕಲ್ಟನ್‌ ಅವರೊಂದಿಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳು ವಿಫಲರಾದರು.

Ryan Rickelton

ವಿಲ್ ಜಾಕ್ಸ್‌ ಹಾಗೂ ರಯಾನ್‌ ರಿಕಲ್ಟನ್‌ ಜೋಡಿ ಮೊದಲ ವಿಕೆಟ್‌ಗೆ 7.1 ಓವರ್‌ಗಳಲ್ಲಿ 93 ರನ್‌ ಸೇರಿಸಿತು. 209ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕುತ್ತಿದ್ದ ವಿಲ್ ಜಾಕ್ಸ್ ಅವರಿಗೆ ನಿತೀಶ್‌ ಕುಮಾರ್ ರೆಡ್ಡಿ ಖೆಡ್ಡಾ ತೋಡಿದರು. ವಿಲ್ ಜಾಕ್ಸ್‌ 22 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಔಟ್ ಆದರು.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿರುವ ಸೂರ್ಯಕುಮಾರ್ ಯಾದವ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದವು. ಆದರೆ ಅವರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಇವರು 5 ರನ್ ಬಾರಿಸಿ ಔಟ್ ಆದರು. 8.3 ಓವರ್‌ಗಳಲ್ಲಿ 110 ರನ್‌ ಸೇರಿಸಿ 2 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ರಯಾನ್‌ ರಿಕಲ್ಟನ್‌ ಹಾಗೂ ನಮನ್ ಧೀರ್ ಆಧಾರವಾದರು.

ಮೂರನೇ ವಿಕೆಟ್‌ಗೆ ರಿಕಲ್ಟನ್‌ ಹಾಗೂ ನಮನ್ ಜೋಡಿ 31 ಎಸೆತಗಳಲ್ಲಿ 55 ರನ್‌ ಸೇರಿಸಿತು. ಈ ವೇಳೆ ನಮನ್ ಧೀರ್ 3 ಬೌಂಡರಿ ನೆರವಿನಿಂದ 22 ರನ್‌ ಬಾರಿಸಿ ಔಟ್ ಆದರು. 4ನೇ ವಿಕೆಟ್‌ಗೆ ರಯಾನ್‌ ರಿಕಲ್ಟನ್‌ ಹಾಗೂ ಹಾರ್ದಿಕ್ ಪಾಂಡ್ಯ (31) ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿತು. ಈ ಜೋಡಿ 27 ಎಸೆತಗಳಲ್ಲಿ 56 ರನ್‌ ಸೇರಿಸಿತು.

ರಿಕಲ್ಟನ್‌ ಶತಕ

ಆರಂಭಿಕ ಆಟಗಾರ ರಯಾನ್ ರಿಕಲ್ಟನ್‌ ಅವರು ಅಬ್ಬರಿಸಿದರು. ಇವರು 55 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್‌ ನೆರವಿನಿಂದ ಅಜೇಯ 123 ರನ್‌ ಸಿಡಿಸಿ ಮಿಂಚಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 243 ರನ್‌ ಸೇರಿಸಿತು.

Story first published: Wednesday, April 29, 2026, 22:12 [IST]
Other articles published on Apr 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+