For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಎಸ್ ಅರವಿಂದ್ ಆಯ್ಕೆ

By Mahesh

ನವದೆಹಲಿ, ಅ.19: ಕರ್ನಾಟಕದ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಅವರಿಗೆ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಕ್ಕಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದೆರಡು ಏಕದಿನ ಪಂದ್ಯಗಳಿಗೆ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿದೆ.

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇನ್ನೂ ಚೇತರಿಸಿಕೊಳ್ಳದ ಕಾರಣ ಉಳಿದ ಎರಡು ಏಕದಿನ ಕ್ರಿಕೆಟ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

ಕರ್ನಾಟಕದ ವೇಗಿ ಎಸ್ ಅರವಿಂದ್ ಅವರು ಇದೇ ತಿಂಗಳು ಮೊದಲ ಟಿ20 ಪಂದ್ಯವನ್ನು ಧರ್ಮಶಾಲದಲ್ಲಿ ಆಡಿದ್ದರು. ನಂತರ ಎರಡು ಪಂದ್ಯಗಳನ್ನು ಆಡಿರಲಿಲ್ಲ. ಈಗ ಏಕದಿನ ಕ್ರಿಕೆಟ್ ಸರಣಿಯಲ್ಲಿ ಮೂರು ಪಂದ್ಯಗಳು ಮುಗಿದಿದ್ದು, ಇನ್ನೆರಡು ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ.[ಟೆಸ್ಟ್ ತಂಡ ಪ್ರಕಟ: ಜಡೇಜ ಇನ್, ಹರ್ಭಜನ್ ಸಿಂಗ್ ಔಟ್]

S Aravind replaces Umesh Yadav in India ODI squad


ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡು ಏಕದಿನ ಸರಣಿಯಿಂದ ಹೊರ ಬಿದ್ದಿರುವ ಅಶ್ವಿನ್ ಅವರು ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಅಶ್ವಿನ್ ಅವರು ಚೇತರಿಸಿಕೊಳ್ಳಲು ಇನ್ನೂ ಎರಡು ವಾರಗಳು ಬೇಕಾಗಿದ್ದು, ಮೊಹಾಲಿಯಲ್ಲಿ ನವೆಂಬರ್ 5 ರಂದು ನಡೆಯುವ ಮೊದಲ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

ತಂಡ ಇಂತಿದೆ:
ಭಾರತ:
ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಟಿ ರಾಯುಡು, ಮೋಹಿತ್ ಶರ್ಮ, ರೋಹಿತ್ ಶರ್ಮ, ಶ್ರೀನಾಥ್ ಅರವಿಂದ್, ಗುರ್ಕೀರತ್ ಸಿಂಗ್, ಅಮಿತ್ ಮಿಶ್ರಾ ಹಾಗೂ ಹರ್ಭಜನ್ ಸಿಂಗ್.

* ನಾಲ್ಕನೇ ಏಕದಿನ ಕ್ರಿಕೆಟ್, ಚೆನ್ನೈ ಅಕ್ಟೋಬರ್ 22 (ಗುರುವಾರ)
* ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್, ಮುಂಬೈ ಅಕ್ಟೋಬರ್ (ಭಾನುವಾರ)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+