Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈಭವ್ ಸೂರ್ಯವಂಶಿಗೆ ಮಣೆ, RCB ಸ್ಟಾರ್ ವಿರಾಟ್, ಕನ್ನಡಿಗ ಕೆಎಲ್ ಕಡೆಗಣನೆ: ಹೀಗದೆ ಎಸ್‌ ಬದ್ರಿನಾಥ್ ಐಪಿಎಲ್ ತಂಡ

ಮಂಗಳವಾರದಂದು ಐಪಿಎಲ್‌ ಕ್ವಾಲಿಫೈಯರ್‌ ಪಂದ್ಯ ಆರಂಭವಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸುವ ಆಸೆ ಎರಡೂ ತಂಡಗಳದ್ದಾಗಿದೆ. ಇದೇ ವೇಳೆ ತಮಿಳುನಾಡಿನ ಮಾಜಿ ಕ್ರಿಕೆಟ್‌ ಆಟಗಾರ ಎಸ್‌ ಬದ್ರಿನಾಥ್ ಅವರು ತಮ್ಮ ಈ ಸಾಲಿನ ಐಪಿಎಲ್‌ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಹಲವು ಅಚ್ಚರಿಯ ಮುಖಗಳಿಗೆ ಅವಕಾಶ ನೀಡಲಾಗಿದೆ. ಬದ್ರಿನಾಥ್ ಪ್ರಕಟಿಸಿದ ತಂಡ ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರಿಗೆ ಎಸ್‌ ಬದ್ರಿನಾಥ್ ಅವರು ಪ್ರಸಕ್ತ ಐಪಿಎಲ್‌ ತಂಡದಲ್ಲಿ ಸ್ಥಾನ ನೀಡಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ ವಿರಾಟ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್‌ ಅವರ ಸ್ಟ್ರೈಕ್‌ ರೇಟ್‌ ಸಹ ಅಮೋಘವಾಗಿದೆ. ಆದರೂ ಇವರನ್ನು ತಮ್ಮ ತಂಡದಲ್ಲಿ ಸ್ಥಾನ ನೀಡದೆ ಇರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

S Badrinath

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಅಷ್ಟೇ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಕನ್ನಡಿಗ ಕೆಎಲ್‌ ರಾಹುಲ್‌ ಅವರಿಗೂ ಎಸ್‌ ಬದ್ರಿನಾಥ್ ಅವರ ಈ ಬಾರಿಯ ತಂಡದಲ್ಲಿ ಸ್ಥಾನ ನೀಡಿಲ್ಲ. ಇವರು ಸಹ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಡೆಲ್ಲಿ ಗೆಲುವಿನಲ್ಲಿ ಮಿಂಚಿದ್ದರು. ಇವರು ಸಹ ಈ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 45ರ ಸರಾಸರಿಯಲ್ಲಿ 593 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾರೆ. ಈ ಸ್ಟಾರ್ ಪ್ಲೇಯರ್‌ಗೂ ಬದ್ರಿನಾಥ್ ತಂಡದಲ್ಲಿ ಸ್ಥಾನ ನೀಡಿಲ್ಲ.

ವೈಭವ್‌ಗೆ ಸ್ಥಾನ

ಕಳೆದ ಋತುವಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಈ ವರ್ಷ ತಮ್ಮ ಆಟವನ್ನು ಸಂಪೂರ್ಣವಾಗಿ ವಿಭಿನ್ನ ಹಂತಕ್ಕೆ ಕೊಂಡೊಯ್ದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಇನ್ನಿಂಗ್ಸ್ ಆರಂಭಿಸುವ ಅವರು ನಿರಂತರವಾಗಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಇವರು ಆಡಿದ 14 ಪಂದ್ಯಗಳಲ್ಲಿ, ವೈಭವ್ 583 ರನ್ ಗಳಿಸಿದ್ದು, ಸರಾಸರಿ 41.64 ಮತ್ತು 232.27 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಈ ಋತುವಿನ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಇವರಿಗೂ ಸ್ಥಾನ.

ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್ ಕುಮಾರ್ ಅವರಿಗೂ ಬದ್ರಿನಾಥ್‌ ಅವರ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಸುಬ್ರಮಣ್ಯನ್ ಬದ್ರಿನಾಥ್‌ ಅವರ ಐಪಿಎಲ್‌ 2026ರ ತಂಡ: ವೈಭವ್ ಸೂರ್ಯವಂಶಿ, ಶುಭಮನ್‌ ಗಿಲ್, ಸಾಯಿ ಸುದರ್ಶನ್‌ ಹೆನ್ರಿಕ್‌ ಕ್ಲಾಸೆನ್‌, ರಜತ್ ಪಾಟಿದಾರ್, ಕೃನಾಲ್‌ ಪಾಂಡ್ಯ, ಸುನಿಲ್ ನರೈನ್‌, ಭುವನೇಶ್ವರ್ ಕುಮಾರ್, ಜೋಫ್ರಾ ಆರ್ಚರ್, ಕಗಿಸೋ ರಬಾಡ, ಪ್ರಿನ್ಸ್‌ ಯಾದವ್, ಕಾರ್ತಿಕ್ ತ್ಯಾಗಿ.

Story first published: Tuesday, May 26, 2026, 16:48 [IST]
Other articles published on May 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+