Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA20: ರಶೀದ್‌ ಖಾನ್‌ ಓವರ್​ನಲ್ಲಿ 28 ರನ್‌ ಚಚ್ಚಿದ ಎಸ್ಆರ್​ಎಚ್ ಬೌಲರ್

SA 20: SRH Bowler Marco Jansen Smashed 66 Runs In 27 Deliveries In The Chase

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ 20 ಪಂದ್ಯಾವಳಿಯಲ್ಲಿ ರಶೀದ್‌ ಖಾನ್‌ಗೆ ಎಸ್ಆರ್​ಎಚ್ ಬೌಲರ್ ಒಂದೇ ಓವರ್​ನಲ್ಲಿ 28 ರನ್‌ ಚಚ್ಚಿ ಗಮನ ಸೆಳೆದಿದ್ದಾರೆ. ಬುಧವಾರ, ಜನವರಿ 18ರಂದು ನಡೆದ ಎಂಐ ಕೇಪ್‌ ಟೌನ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಬೌಲರ್ ಮಾರ್ಕೊ ಜಾನ್ಸೆನ್ ರಶೀದ್ ಖಾನ್ ವಿರುದ್ಧ ಅಬ್ಬರಿಸಿದರು.

ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಎಸ್ಆರ್​ಎಚ್ ತಂಡದ ವೇಗಿ 27 ಎಸೆತಗಳಲ್ಲಿ 66 ರನ್ ಗಳಿಸಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಗೆಲುವಿಗೆ ಕಾರಣವಾದರು.

ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್‌ಟೌನ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಗ್ರಾಂಟ್ ರೋಲೋಫ್ಸೆನ್ 36 ಎಸೆತಗಳಲ್ಲಿ 56 ರನ್ ಗಳಿಸಿದರೆ, ರಿಕೆಲ್ಟನ್ 36 ಎಸೆತಗಳಲ್ಲಿ 46 ರನ್ ಗಳಿಸಿ ಎಂಐ ಕೇಪ್‌ಟೌನ್ ತಂಡಕ್ಕೆ ಆಸರೆಯಾದರು.

ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಒಡೆತನದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಆರಂಭದಲ್ಲೇ ಆಘಾತ ಅನುಭವಿಸಿತು. ಆಡಮ್ ರೋಸಿಂಗ್ಟನ್ 11 ರನ್‌ಗಳಿಗೆ ಔಟಾದರೆ, ಜೆಜೆ ಸ್ಮಟ್ಸ್ 4 ರನ್ ಗಳಿಸಿ ಔಟಾದರು. 14 ಓವರ್ ಗಳಲ್ಲಿ 101 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ತಂಡಕ್ಕೆ ವೇಗಿ ಮಾರ್ಕೊ ಜಾನ್ಸೆನ್ ಆಸರೆಯಾದರು.

ಎಂಐ ಕೇಪ್‌ಟೌನ್ ಗೆಲುವಿಗೆ ಮಾರ್ಕೊ ಜಾನ್ಸೆನ್ ಅಡ್ಡಿ

ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ಎಂಐ ಕೇಪ್‌ಟೌನ್ ತಂಡಕ್ಕೆ ಮಾರಕವಾಗಿದ್ದು ಮಾರ್ಕೊ ಜಾನ್ಸೆನ್. ವೇಗದ ಬೌಲರ್ ಆಗಿರುವ ಜಾನ್ಸೆನ್ ಈ ರೀತಿ ಸ್ಫೋಟಕ ಇನ್ನಿಂಗ್ಸ್ ಆಡುತ್ತಾರೆ ಎಂದು ಸ್ವತಃ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಸದಸ್ಯರೇ ಅಂದುಕೊಂಡಿರಲಿಲ್ಲ.

ಅದರಲ್ಲೂ ವಿಶ್ವದ ಅತ್ಯುತ್ತಮ ಸ್ಪಿನ್ನರ್ ರಶೀದ್‌ ಖಾನ್‌ಗೆ ಒಂದೇ ಓವರ್ ನಲ್ಲಿ 28 ರನ್‌ ಚಚ್ಚುವ ಮೂಲಕ ಎಲ್ಲರನ್ನೂ ದಂಗಾಗಿಸಿದರು. 16ನೇ ಓವರ್ ನಲ್ಲಿ ಆರ್ಭಟಿಸಿದ ಜಾನ್ಸೆನ್, ರಶೀದ್ ಖಾನ್ ಓವರ್ ನಲ್ಲಿ 6,4,6,6,0,6 ರನ್ ಗಳಿಸಿದರು. ಮುಂದಿನ ಓವರ್ ನಲ್ಲೂ ಎರಡು ಸಿಕ್ಸರ್ ಸಿಡಿಸಿದ ಜಾನ್ಸೆನ್ ರಬಾಡ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ ಕೂಡ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದಿದ್ದರು.

SA 20: SRH Bowler Marco Jansen Smashed 66 Runs In 27 Deliveries In The Chase

2 ವಿಕೆಟ್‌ಗಳ ಗೆಲುವು ಸಾಧಿಸಿದ ಸನ್‌ರೈಸರ್ಸ್

ಜಾನ್ಸೆನ್ ಔಟಾದಾಗ ಸನ್‌ರೈಸರ್ಸ್ ತಂಡಕ್ಕೆ ಗೆಲುವಿಗಾಗಿ ಕೊನೆಯ ಓವರ್ ನಲ್ಲಿ 4 ರನ್ ಮಾತ್ರ ಗಳಿಸಬೇಕಿತ್ತು. 19.3 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

26 ಎಸೆತಗಳಲ್ಲಿ 3 ಬೌಂಡರಿ 7 ಭರ್ಜರಿ ಸಿಕ್ಸರ್ ಸಹಿತ 66 ರನ್ ಗಳಿಸಿ ಮಾರ್ಕೊ ಜಾನ್ಸೆನ್ ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು. ದಕ್ಷಿಣ ಆಫ್ರಿಕಾದ ಈ ವೇಗಿ ಐಪಿಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಲಿದ್ದಾರೆ. ಅವರ ಈ ಇನ್ನಿಂಗ್ಸ್ ಕಂಡು ಎಸ್‌ಆರ್ ಹೆಚ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಎಂದರೆ 2022 ರ ಐಪಿಎಲ್‌ನಲ್ಲಿ ರಶೀದ್‌ ಖಾನ್ ಬೌಲಿಂಗ್‌ನಲ್ಲಿ ಒಂದೇ ಓವರ್ ನಲ್ಲಿ 25 ರನ್ ಸಿಡಿಸಿದ್ದರು. ಐಪಿಎಲ್ ಲೆಕ್ಕವನ್ನು ಎಸ್‌ಎ20 ಯಲ್ಲಿ ಚುಕ್ತಾ ಮಾಡಿದ್ದಾರೆ ಜಾನ್ಸೆನ್.

Story first published: Thursday, January 19, 2023, 13:42 [IST]
Other articles published on Jan 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+