'ಸೆಂಚುರಿಯನ್' ಭುವನೇಶ್ವರ್ ಕುಮಾರ್ ಕಾಲೆಳೆದ ಟ್ವಿಟ್ಟರ್
ಮುಂಬೈ, ಅ.26: ಭಾರತದ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಒಟ್ಟು ನಾಲ್ಕು 'ಸೆಂಚುರಿ' ದಾಖಲಾಗಿದೆ. ಮೂರು ಶತಕಗಳು ದಕ್ಷಿಣ ಆಫ್ರಿಕಾ ಆಟಗಾರರು ಬಾರಿಸಿದ್ದರೆ, ಮತ್ತೊಂದು ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರ ಕಡೆಯಿಂದ ದಾಖಲಾಗಿದೆ. 50 ಓವರ್ ಗಳಲ್ಲಿ 438/4 ಎಂದು ಸ್ಕೋರ್ ದಾಖಲಾಗುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅವರ ಕಾಲೆಳೆಯುವ ಪ್ರಕ್ರಿಯೆ ಶುರುವಾಯಿತು.
ಗಾಯಗೊಂಡು ನಿವೃತ್ತರಾದ ಫಾಫ್ ಡುಪ್ಲೆಸಿಸ್ (133 ರನ್), ಎಬಿ ಡಿವಿಲಿಯರ್ಸ್ (119) ಹಾಗೂ ಕ್ವಿಂಟಾನ್ ಡಿ ಕಾಕ್ (109) ರನ್ ಗಳಿಕೆ ಅಬ್ಬರವನ್ನು ಮೆಚ್ಚಿ ವಾಂಖೆಡೆಯ ಪ್ರೇಕ್ಷಕರು ಮುಕ್ತವಾಗಿ ಮೆಚ್ಚುಗೆ ಸೂಚಿಸಿದರು. ಅದರೆ, ಟ್ವಿಟ್ಟರ್ ನಲ್ಲಿ ಭಾರತದ ಬೌಲರ್ ಗಳ ಕಳಪೆ ಬೌಲಿಂಘ್ ಪ್ರದರ್ಶನದ ಬಗ್ಗೆ ಭಾರಿ ಪ್ರತಿಕ್ರಿಯೆಗಳು ಬಂದಿವೆ. [ಟೀಂ ಇಂಡಿಯಾ ಬಗ್ಗುಬಡಿದು ಸರಣಿ ಬಾಚಿಕೊಂಡ ಎಬಿಡಿ]
ಆರಂಭಿಕ ಅಟಗಾರ ಡಿಕಾಕ್ ಹಾಗೂ ಡುಪ್ಲೆಸಿಸ್ ಅವರು 2ನೇ ವಿಕೆಟ್ ಗೆ 154ರನ್ ಜೊತೆಯಾಟ ಹಾಗೂ ನಾಯಕ ಡಿವಿಲಿಯರ್ಸ್ ಮತ್ತು ಡುಪ್ಲೆಸಿಸ್ 164ರನ್ ಜೊತೆಯಾಟ ಕಾಣಲು ಕಾರಣವಾಗಿದ್ದು ಭಾರತದ ಕಳಪೆ ಬೌಲಿಂಗ್ ಕಾರಣ ಎಂದು ಅಭಿಮಾನಿಗಳು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. [ಕೊಹ್ಲಿ ದಾಖಲೆ ಮುರಿದ ಆಮ್ಲಾ]
ಭುವನೇಶ್ವರ್ ಕುಮಾರ್ ಅವರು 10 ಓವರ್ ಗಳಲ್ಲಿ 106ರನ್ ಚೆಚ್ಚಿಸಿಕೊಂಡರು. ಇದಕ್ಕೂ ಮುನ್ನ ಇಂಗ್ಲೆಂಡ್ ಬೌಲರ್ ರೊಬ್ಬರು ಮಾತ್ರ ದಕ್ಷಿಣ ಆಫ್ರಿಕಾದ ವಿರುದ್ಧ 100ಕ್ಕೂ ಅಧಿಕ ರನ್ ಕೊಟ್ಟಿದ್ದರು.

ಭುವನೇಶ್ವರ್ ಎಸೆತಗಳಿಗೆ ಬೆಲೆಯೇ ಇರಲಿಲ್ಲ
ಭುವನೇಶ್ವರ್ ಕುಮಾರ್ ಅವರು 10 ಓವರ್ ಗಳಲ್ಲಿ 106ರನ್ ಚೆಚ್ಚಿಸಿಕೊಂಡರು. ಇದಕ್ಕೂ ಮುನ್ನ ಇಂಗ್ಲೆಂಡ್ ಬೌಲರ್ ರೊಬ್ಬರು ಮಾತ್ರ ದಕ್ಷಿಣ ಆಫ್ರಿಕಾದ ವಿರುದ್ಧ 100ಕ್ಕೂ ಅಧಿಕ ರನ್ ಕೊಟ್ಟಿದ್ದರು. ಉಳಿದಂತೆ ಮೋಹಿತ್ ಶರ್ಮ 7 ಓವರ್ ಗಳಲ್ಲಿ 84ರನ್, ಹರ್ಭಜನ್ ಸಿಂಗ್ 10 ಓವರ್ ಗಳಲ್ಲಿ 70ರನ್, ಅಮಿತ್ ಮಿಶ್ರಾ 10 ಓವರ್ ಗಳಲ್ಲಿ 78 ರನ್, ಅಕ್ಷರ್ ಪಟೇಲ್ 8 ಓವರ್ ಗಳಲ್ಲಿ 65ರನ್ ಚೆಚ್ಚಿಸಿಕೊಂಡರು.
ಭುವನೇಶ್ವರ್ ಸೆಂಚುರಿ ಸಂಭ್ರಮಿಸಿದ ಫ್ಯಾನ್ಸ್
ಭುವನೇಶ್ವರ್ ಸೆಂಚುರಿ ಸಂಭ್ರಮಿಸಿದ ಫ್ಯಾನ್ಸ್ ಟ್ವೀಟ್ ಮಾಡಿ ಕಾಲೆಳೆದರು.
ಭುವನೇಶ್ವರ್ ಕಳಪೆ ಪ್ರದರ್ಶನಕ್ಕೆ ಕಾರಣ ಏನು?
ಭುವನೇಶ್ವರ್ ಕಳಪೆ ಪ್ರದರ್ಶನಕ್ಕೆ ಕಾರಣ ಏನು? ಎಂಬುದು ಗೊತ್ತಾಗಿದೆ. ಭುವನೇಶ್ವರ್ ಗೆ ಇಶಾಂತ್ ಶರ್ಮ ಫ್ರೆಂಡ್ ರಿಕ್ವೆಸ್ಟ್ ಕಳಿಸಿದಾರಂತೆ!
ಎಬಿಡಿಗಿಂತ ಮುಂಚಿತವಾಗಿ ಸೆಂಚುರಿ ಬಾರಿಸಿದ ಭುವಿ
ಎಬಿಡಿ ವಿಲಿಯರ್ಸ್ ಗಿಂತ ಮುಂಚಿತವಾಗಿ ಸೆಂಚುರಿ ಬಾರಿಸಿದ ಭುವನೇಶ್ವರ್ ಕುಮಾರ್.
ರಬಾಡಾ ಹಾಗೂ ಭುವನೇಶ್ವರ್ ಕುಮಾರ್ ಹೋಲಿಕೆ
ರಬಾಡಾ ಹಾಗೂ ಭುವನೇಶ್ವರ್ ಕುಮಾರ್ ಹೋಲಿಕೆ ಮಾಡಿದರೆ ರಬಾಡಾ ಮಾಂಸ ತಿಂದರೆ, ಭುವಿ ತೊಗರಿ ಬೇಳೆ ತಿನ್ನುತ್ತಾರೆ.
ಭುವನೇಶ್ವರ್ ಗಿಂತ ಸ್ಟುವರ್ಟ್ ಬಿನ್ನಿಯೇ ಬೆಸ್ಟ್
ಭುವನೇಶ್ವರ್ ಗಿಂತ ಸ್ಟುವರ್ಟ್ ಬಿನ್ನಿಯೇ ಬೆಸ್ಟ್. ಉತ್ತಮ ಬೌಲಿಂಗ್ ದಾಖಲೆ ಹೊಂದಿರುವ ಬಿನ್ನಿ ಬೆಂಚ್ ನಲ್ಲಿದ್ದರೆ, ಭುವನೇಶ್ವರ್ ಫೀಲ್ಡ್ ನಲ್ಲಿ ಏನು ಮಾಡುತ್ತಿದ್ದಾರೆ.
ಈ ಪಂದ್ಯ ಏನಾದರೂ ಗೆದ್ದರೆ ಎಲ್ಲರಿಗೂ ಬಹುಮಾನ
ಈ ಪಂದ್ಯ ಏನಾದರೂ ಗೆದ್ದರೆ ಎಲ್ಲಾ ಭಾರತೀಯ ಆಟಗಾರರಿಗೂ 50 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ ಕಮಲ್ ಖಾನ್.
ಗೌತಮ್ ಬಿಮಾನಿ ಅವರಿಂದ ಟ್ವೀಟ್
ಗೌತಮ್ ಬಿಮಾನಿ ಅವರಿಂದ ಟ್ವೀಟ್Fielders become spectators. And spectators become fielders
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications