SA T20: ಲೋಗೋ ಆಯ್ತು, ಎಸ್‌ಎ 20 ಲೀಗ್ ತಂಡಗಳ ಜೆರ್ಸಿ ಕೂಡ ಐಪಿಎಲ್ ತಂಡಗಳಂತೆ ವಿನ್ಯಾಸ

ದಕ್ಷಿಣ ಆಫ್ರಿಕಾ ಟಿ20 ಲೀಗ್‌ಗಾಗಿ ದಿನಗಣನೆ ಆರಂಭವಾಗಿದೆ. ಜನವರಿ 10 ರಂದು ಎಸ್‌ಎ20 ಲೀಗ್‌ಗೆ ಅದ್ದೂರಿ ಚಾಲನೆ ಸಿಗಲಿದೆ. ಐಪಿಎಲ್‌ನ ಫ್ರಾಂಚೈಸಿಗಳೇ, ಎಸ್‌ಎ 20 ಯಲ್ಲಿ ತಂಡಗಳನ್ನು ಹೊಂದಿರುವುದು ವಿಶೇಷ, ಮೊದಲ ಆವೃತ್ತಿಯಲ್ಲಿ ಒಟ್ಟು ಆರು ತಂಡಗಳು ಸೆಣೆಸಲಿವೆ.
ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ದಕ್ಷಿಣ ಆಫ್ರಿಕಾದ (SA20) ಲೀಗ್‌ನ ಭಾಗವಾಗಿವೆ.
ಈ ಮೊದಲು ಎಸ್‌ಎ 20 ಲೀಗ್‌ನ ಲೋಗೋಗಳನ್ನು ನೋಡಿ ಬಿಸಿಸಿಐ ಅಧಿಕಾರಿಗಳು ದಂಗಾಗಿದ್ದರು. ಐಪಿಎಲ್ ತಂಡಗಳ ಲೋಗೋಗಳಂತೆಯೇ ಎಸ್‌ಎ 20 ಲೋಗೋಗಳನ್ನು ವಿನ್ಯಾಸ ಮಾಡಲಾಗಿತ್ತು. ಇದರಿಂದ ಐಪಿಎಲ್‌ನ ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗುವ ಬಗ್ಗೆ ಬಿಸಿಸಿಐನ ಕೆಲ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದರು.
ಲೋಗೋ ನಂತರ ಎಸ್‌ಎ20ಯಲ್ಲಿ ಆಡುವ ತಂಡಗಳ ಜೆರ್ಸಿಗಳು ಕೂಡ ಐಪಿಎಲ್‌ನ ತಂಡಗಳ ಜೆರ್ಸಿಗಳನ್ನು ಹೋಲುತ್ತಿದ್ದು, ಬಿಸಿಸಿಐ ತಲೆನೋವನ್ನು ಹೆಚ್ಚಿಸಿದೆ. ಎಲ್ಲಾ ತಂಡಗಳು ಅಧಿಕೃತ ಜೆರ್ಸಿಯನ್ನು ಅನಾವರಣಗೊಳಿಸಿವೆ. ಐಪಿಎಲ್‌ನಲ್ಲಿ ಇರುವ ಜೆರ್ಸಿಯನ್ನೇ ಆ ಫ್ರಾಂಚೈಸಿಗಳು ಎಸ್‌ಎ 20 ಯಲ್ಲಿ ಅನುಸರಿಸಿವೆ.

ಫ್ರಾಂಚೈಸಿಗಳ ಜೊತೆ ಮಾತನಾಡಲು ನಿರ್ಧಾರ
ಲೋಗೋಗಳನ್ನು ನೋಡಿ ಬೇಸರಗೊಂಡಿರುವ ಬಿಸಿಸಿಐ ಅಧಿಕಾರಿಗಳು ಫ್ರಾಂಚೈಸಿಗಳ ಜೊತೆ ಚರ್ಚೆ ಮಾಡಲು ನಿರ್ಧರಿಸಿದ್ದಾರೆ. ಲೋಗೋಗಳಿಂದಲೇ ಬೇಸರಗೊಂಡಿದ್ದ ಅವರು ಈಗ ಜೆರ್ಸಿಯನ್ನು ನೋಡಿ, ಇನ್ನೂ ತಲೆಬಿಸಿ ಹೆಚ್ಚಿಸಿಕೊಂಡಿದ್ದಾರೆ. ಲೋಗೋ ಮತ್ತು ಜೆರ್ಸಿ ಐಪಿಎಲ್ ತಂಡಗಳಂತೆ ಇರುವುದನ್ನು ಬಿಸಿಸಿಐ ಒಪ್ಪದೇ ಇದ್ದರೂ ಈ ಬಗ್ಗೆ ಅಧಿಕೃತವಾಗಿ ನಿಯಂತ್ರಣ ಹೇರುವ ಅಧಿಕಾರವಿಲ್ಲ.
ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳು ವಿದೇಶದ ಲೀಗ್‌ಗಳಲ್ಲಿ ಭಾಗವಹಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ನಡೆಯುತ್ತಿರುವ ಬೆಳವಣಿಗೆ ಫ್ರಾಂಚೈಸಿಗಳ ಮೇಲಿನ ಬೇಸರವನ್ನು ಹೆಚ್ಚಿಸಿದೆ.

ಜನವರಿ 10 ರಂದು ಲೀಗ್‌ಗೆ ಚಾಲನೆ
ಲೋಗೋ, ಜೆರ್ಸಿ, ಫ್ರಾಂಚೈಸಿಗಳ ಹೆಸರು ಒಂದೇ ರೀತಿ ಇರುವುದರಿಂದ ಇದನ್ನು ಮಿನಿ ಐಪಿಎಲ್ ಎನ್ನುವಂತೆ ಬಿಂಬಿಸಲಾಗುತ್ತಿದೆ. ಜನವರಿ 10 ರಂದು ಮೊದಲ ಸೀಸನ್ ಆರಂಭವಾಗಲಿದೆ. ಮೊದಲನೇ ಪಂದ್ಯದಲ್ಲಿ ಎಂಐ ಕೇಪ್‌ಟೌನ್ ಮತ್ತು ಪರ್ಲ್ ರಾಯಲ್ಸ್ ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯ ಫೆಬ್ರವರಿ 11 ರಂದು ನಡೆಯಲಿದೆ. ಪ್ರತಿಷ್ಟಿತ ಟೂರ್ನಿಯ ಕಪ್ ಅನ್ನು ಈಗಾಗಲೇ 6 ತಂಡಗಳ ನಾಯಕರು ವಿನ್ಯಾಸಗೊಳಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications