SA vs AUS 3rd Test: ದಕ್ಷಿಣ ಆಫ್ರಿಕಾ ಮೇಲೆ ಫಾಲೋ ಆನ್ ಹೇರಿದ ಆಸ್ಟ್ರೇಲಿಯಾ, ರೋಚಕ ಘಟ್ಟದಲ್ಲಿ ಪಿಂಕ್ ಬಾಲ್ ಟೆಸ್ಟ್

ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 255 ರನ್‌ಗಳಿಗೆ ಆಲೌಟ್ ಮಾಡಿರುವ ಆಸ್ಟ್ರೇಲಿಯಾ ಫಾಲೋ ಆನ್ ಹೇರಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 475 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೊತ್ತವನ್ನು ಸರಿಗಟ್ಟಲು ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೂ 220 ರನ್ ಗಳಿಸಬೇಕಿದೆ. ಪಂದ್ಯದ ಅಂತಿಮ ದಿನದಲ್ಲಿ ಇನ್ನೂ 49 ಓವರ್ ಬಾಕಿಯಿದ್ದು, ದಕ್ಷಿಣ ಆಫ್ರಿಕಾ ಸೋಲಿನ ಭೀತಿಯಲ್ಲಿದೆ.
ಮಳೆಯಿಂದಾಗಿ ಮೊದಲ ನಾಲ್ಕು ದಿನಗಳು ಪಂದ್ಯ ಸಂಪೂರ್ಣವಾಗಿ ನಡೆಯಲಿಲ್ಲ. ಆಸ್ಟ್ರೇಲಿಯಾ ಮತ್ತೊಂದು ಬೃಹತ್ ಮೊತ್ತ ಕಲೆಹಾಕುವ ಉತ್ಸಾಹಕ್ಕೆ ಮಳೆ ಅಡ್ಡಿಯಾಯಿತು. 475 ರನ್ ಗಳಿಸಿದ್ದಾಗ 4ನೇ ದಿನ ಆಸ್ಟ್ರೇಲಿಯಾ ಡಿಕ್ಲೇರ್ ಮಾಡಿಕೊಂಡಿತು.
ಪ್ಯಾಟ್ ಕಮಿನ್ಸ್ ತೆಗೆದುಕೊಂಡ ನಿರ್ಣಯ ವಿವಾದಕ್ಕೆ ಕಾರಣವಾಯಿತು. ಆಸ್ಟ್ರೇಲಿಯಾ ಆರಂಭಿಕ ಆಟಗಾರ 195 ರನ್ ಗಳಿಸಿ ದ್ವಿಶತಕದ ಸನಿಹದಲ್ಲಿದ್ದಾಗ ಕಮಿನ್ಸ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ದ್ವಿಶತಕ ತಪ್ಪಿಸಿಕೊಂಡ ಖವಾಜ
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜಾ ಮತ್ತು ಸ್ವೀವ್ ಸ್ಮಿತ್ ಅಮೋಘ ಇನ್ನಿಂಗ್ಸ್ ಆಡಿದರು. 104 ರನ್ ಗಳಿಸಿದ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ದಾಖಲಿಸಿದರು. ಆರಂಭಿಕ ಆಟಗಾರ ಉಸ್ಮಾನ್ ಖವಾಜ 195 ರನ್ ಗಳಿಸಿ ಅದ್ಭುತ ಫಾರ್ಮ್ ಪ್ರದರ್ಶಿಸಿದರು. ಮಳೆಯಿಂದಾಗಿ ಪಂದ್ಯಕ್ಕೆ ಪದೇ ಪದೇ ಅಡ್ಡಿಯಾಗುತ್ತಿದ್ದ ಕಾರಣ ಆಸ್ಟ್ರೇಲಿಯಾ ನಾಯಕ ಪಾಟ್ ಕಮಿನ್ಸ್ ಡಿಕ್ಲೇರ್ ಮಾಡಿಕೊಂಡರು. ನಾಯಕನ ನಿರ್ಣಯದಿಂದಾಗಿ ಖವಾಜ ದ್ವಿಶತಕ ತಪ್ಪಿಸಿಕೊಂಡರು.
ಮಾರ್ನಸ್ ಲಾಬುಸ್ಚಾಗ್ನೆ 79 ರನ್ ಗಳಿಸಿದರು. ಟ್ರಾವಿಸ್ ಹೆಡ್ 70 ರನ್ ಗಳಿಸಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಗಳಿಸಲು ಸಹಾಯ ಮಾಡಿದರು.

ಹೇಝಲ್‌ವುಡ್, ಕಮಿನ್ಸ್ ಉತ್ತಮ ಬೌಲಿಂಗ್
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಜೋಶ್ ಹೇಜಲ್‌ವುಡ್ ದಾಳಿಗೆ ತತ್ತರಿಸಿತು. ಟೆಂಬಾ ಬವುಮಾ ಮತ್ತು ಝೋಂಡೋ ಮಾತ್ರ ಕ್ರಮವಾಗಿ 35 ಮತ್ತು 39 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಕೂಡ ಆಸ್ಟ್ರೇಲಿಯಾ ಬೌಲಿಂಗ್ ಮುಂದೆ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ತ್ವರಿತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೇಶವ್ ಮಹಾರಾಜ್ (53) ಮತ್ತು ಹಾರ್ಮರ್ (47) ಜೋಡಿ 85 ರನ್‌ಗಳ ಜೊತೆಯಾಟ ಆಡಿ ಚೇತರಿಕೆ ನೀಡಿದರು. ಹೇಜಲ್‌ವುಡ್ 4 ವಿಕೆಟ್ ಪಡೆದು ಹರಿಣಗಳಿಗೆ ಶಾಕ್ ಕೊಟ್ಟರು. ನಾಯಕ ಕಮಿನ್ಸ್ 3 ವಿಕೆಟ್ ಪಡೆದರೆ, ಲಿಯಾನ್ 2 ವಿಕೆಟ್ ಮತ್ತು ಟ್ರಾವಿಸ್ ಹೆಡ್ 1 ವಿಕೆಟ್ ಪಡೆದರು.

ಸರಣಿ ವೈಟ್ ವಾಶ್ ಮಾಡುವ ಉತ್ಸಾಹದಲ್ಲಿ ಆಸ್ಟ್ರೇಲಿಯಾ
ಒಂದು ವೇಳೆ ಆಸ್ಟ್ರೇಲಿಯಾ ತ್ವರಿತವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಮೂರನೇ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಇದೆ. ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಸರಣಿಯನ್ನು ವೈಟ್ ಮಾಡುವ ಉತ್ಸಾಹದಲ್ಲಿದೆ.
ಈ ಪಂದ್ಯದಲ್ಲಿ ಸೋತರೆ ದಕ್ಷಿಣ ಆಫ್ರಿಕಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications