ನೆದರ್ಲೆಂಡ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 8 ವಿಕೆಟ್‌ಗಳ ಗೆಲುವು
ಇತ್ತ ಭಾರತದಲ್ಲಿ ಐಪಿಎಲ್ ರಂಗು ಪಡೆದುಕೊಂಡಿದ್ದರೆ ಅತ್ತ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಪೈಪೋಟಿ ನಡೆಸುತ್ತಿದೆ. ಈ ಬಾರಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಳ್ಳುವ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವದ್ದಾಗಿದ್ದು ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಮಿಂಚಿದೆ. ಈ ಮೂಲಕ ಟೆಂಬಾ ಬವುಮಾ ಬಳಗ ಭರ್ಜರಿ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಈ ಪಂದ್ಯದಲ್ಲಿ ಅಜೇಯ 90 ರನ್‌ಗಳಿಸಿ ಮಿಂಚಿದರು.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ತಂಡ ಕೇವಲ 189 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ವಿಕ್ರಮ್‌ಜೀತ್ ಸಿಂಗ್ 45 ರನ್ ಹಾಗೂ ತೇಜ ನಿಡಮನುರು 48 ರನ್‌ಗಳಿಸಿದ್ದು ಬಿಟ್ಟರೆ ಉಳಿದಂತೆ ಯಾವ ಆಟಗಾರನಿಂದಲೂ ಉತ್ತಮ ಕೊಡುಗೆ ಬಾರಲಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡ ಮಗಲ ಅವರ ಬೌಲಿಂಗ್‌ಗೆ ನಲುಗಿದ ನೆದರ್ಲೆಂಡ್ಸ್ ತಂಡ ಕೇವಲ ಭಾರೀ ಹಿನ್ನಡೆ ಕಂಡಿತು. ಮಗಲ 3 ವಿಕೆಟ್ ಕಿತ್ತು ಆಘಾತ ನೀಡಿದ್ದಾರೆ. ಶಂಸಿ ಕೂಡ 3 ವಿಕೆಟ್ ಪಡೆದರು.
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಟೆಂಬಾ ಬವುಮಾ ಅದ್ಭುತ ಇನ್ನಿಂಗ್ಸ್ ನೀಡಿದರು. ಕ್ವಿಂಟನ್ ಡಿಕಾಕ್ ವಿಫಲವಾದರು ಕೂಡ ವಾನ್ ಡರ್ ಡಸೆನ್ ಹಾಗೂ ಐಡೆನ್ ಮಾರ್ಕ್ರಮ್ ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ಹೀಗಾಗಿ ದಕ್ಷೀಣ ಆಫ್ರಿಕಾ 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾ ಆಡುವ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವಾನ್ ಡೆರ್ ಡಸನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಸಿಸಂಡಾ ಮಗಾಲಾ, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ
ಬೆಂಚ್: ವೇಯ್ನ್ ಪಾರ್ನೆಲ್, ಜಾರ್ನ್ ಫಾರ್ಟುಯಿನ್, ಲುಂಗಿ ಎನ್‌ಗಿಡಿ, ರೀಜಾ ಹೆಂಡ್ರಿಕ್ಸ್
ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಮೂಸಾ ಅಹ್ಮದ್, ವೆಸ್ಲಿ ಬ್ಯಾರೆಸಿ, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ತೇಜ ನಿಡಮನೂರು, ಶರೀಜ್ ಅಹ್ಮದ್, ಆರ್ಯನ್ ದತ್, ರಯಾನ್ ಕ್ಲೈನ್, ಪಾಲ್ ವ್ಯಾನ್ ಮೀಕೆರೆನ್, ಫ್ರೆಡ್ ಕ್ಲಾಸೆನ್
ಬೆಂಚ್: ಟಾಮ್ ಕೂಪರ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ವಿವಿಯನ್ ಕಿಂಗ್ಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications