ಇದೇ ಜನವರಿ 10ರಿಂದ ಪ್ರಾರಂಭವಾಗುವ 2024ರ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ (SA20) ಆವೃತ್ತಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಕೀರಾನ್ ಪೊಲಾರ್ಡ್ ಅವರನ್ನು MI ಕೇಪ್ ಟೌನ್ ತಂಡದ ನಾಯಕನನ್ನಾಗಿ ಭಾನುವಾರ, ಜನವರಿ 7ರಂದು ನೇಮಕ ಮಾಡಲಾಗಿದೆ.
ಕೀರಾಮ್ ಪೊಲಾರ್ಡ್ ಅವರು ಉದ್ಘಾಟನಾ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ MI ಕೇಪ್ ಟೌನ್ ತಂಡದ ಭಾಗವಾಗಿದ್ದರು ಮತ್ತು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ನಾಯಕತ್ವದಡಿಯಲ್ಲಿ ಆಡಿದ್ದರು.

ಆದರೆ, ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಚೇತರಿಕೆಯ ಹಾದಿಯಲ್ಲಿರುವ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರು 2024ರ ಆವೃತ್ತಿಗೆ ಲಭ್ಯವಿರುವುದಿಲ್ಲ ಎಂದು MI ಕೇಪ್ ಟೌನ್ ದೃಢಪಡಿಸಿದೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಸಹಾಯಕ ಕೋಚ್ ಆಗಿರುವ ಕೀರಾನ್ ಪೊಲಾರ್ಡ್, ಯುಎಇಯಲ್ಲಿ ಫ್ರಾಂಚೈಸ್ ಆಧಾರಿತ ಟಿ20 ಲೀಗ್ ILT20 ಉದ್ಘಾಟನಾ ಆವೃತ್ತಿಯಲ್ಲಿ ಎಂಐ ಎಮಿರೇಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
"SA20ರ ಎರಡನೇ ಋತುವಿನಲ್ಲಿ ಎಂಐ ಕೇಪ್ ಟೌನ್‌ಗೆ ಕೀರಾನ್ ಪೊಲಾರ್ಡ್ ನಾಯಕರಾಗಿರುತ್ತಾರೆ. ರಶೀದ್ ಖಾನ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಪ್ರಸ್ತುತ ಅಲಭ್ಯರಾಗಿದ್ದಾರೆ. MI ಕೇಪ್ ಟೌನ್ ತಂಡವು ರಶೀದ್ ಖಾನ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಶೀಘ್ರದಲ್ಲೇ ಮೈದಾನಕ್ಕೆ ಮರಳಲು ಬಯಸುತ್ತಾರೆ," ಎಂದು MI ಕೇಪ್ ಟೌನ್ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.
ಕೀರಾನ್ ಪೊಲಾರ್ಡ್ ಕಳೆದ ತಿಂಗಳು ಅಬುಧಾಬಿ ಟಿ10 ಲೀಗ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡ ಪ್ರಶಸ್ತಿ ಜಯಿಸಲು ಕಾರಣರಾದರು. ಫೈನಲ್ ಪಂದ್ಯದಲ್ಲಿ ನಿಕೋಲಸ್ ಪೂರನ್ ನಾಯಕತ್ವದ ಡೆಕ್ಕನ್ ಗ್ಲಾಡಿಯೇಟರ್ಸ್ ವಿರುದ್ಧ ಅಜೇಯ 22 ರನ್ ಗಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು.
ಮುಂಬೈ ಇಂಡಿಯನ್ಸ್, MI ನ್ಯೂಯಾರ್ಕ್ (ಮೇಜರ್ ಲೀಗ್ ಕ್ರಿಕೆಟ್), MI ಎಮಿರೇಟ್ಸ್ ಮತ್ತು MI ಕೇಪ್ ಟೌನ್ ಸೇರಿದಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಲ್ಲಾ ನಾಲ್ಕು ತಂಡಗಳನ್ನು ಮುನ್ನಡೆಸುವ ಗೌರವವನ್ನು ಕೀರಾನ್ ಪೊಲಾರ್ಡ್ ಹೊಂದಿದ್ದಾರೆ.
ಮತ್ತೊಂದೆಡೆ, ಅಫ್ಘಾನಿಸ್ತಾನ ತಂಡವು ಪ್ರಭಾವಶಾಲಿ ಪ್ರದರ್ಶನ ನೀಡಿದ 2023ರ ಏಕದಿನ ವಿಶ್ವಕಪ್‌ನ ನಂತರ, ರಶೀದ್ ಖಾನ್ ನವೆಂಬರ್‌ನಲ್ಲಿ ಬೆನ್ನುನೋವಿಗೆ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಅಡಿಲೇಡ್ ಸ್ಟ್ರೈಕರ್ಸ್‌ಗೆ ದೊಡ್ಡ ಹಿನ್ನಡೆಯೆಂಬಂತೆ ಡಿಸೆಂಬರ್‌ನಲ್ಲಿ ಪ್ರಾರಂಭವಾದ ಬಿಗ್ ಬ್ಯಾಷ್ ಲೀಗ್ 13ರ ಆವೃತ್ತಿಯನ್ನು ರಶೀದ್ ಖಾನ್ ತಪ್ಪಿಸಿಕೊಂಡರು.
ಜನವರಿ 11ರಿಂದ ಪ್ರಾರಂಭವಾಗುವ ಭಾರತ ವಿರುದ್ಧದ 3 ಪಂದ್ಯಗಳ ಸರಣಿಗಾಗಿ 19 ಸದಸ್ಯರ ಅಫ್ಘಾನಿಸ್ತಾನ ತಂಡದಲ್ಲಿ ಶನಿವಾರ, ಜನವರಿ 6ರಂದು ರಶೀದ್ ಖಾನ್ ಅವರನ್ನು ಹೆಸರಿಸಲಾಯಿತು.
ಆದರೆ, ತಮ್ಮ ನಿಗದಿಪಡಿಸಿದ ಟಿ20 ನಾಯಕರಾಗಿರುವ ಲೆಗ್ ಸ್ಪಿನ್ನರ್ ಅವರು ಸರಣಿಯಲ್ಲಿ ಒಂದು ಪಂದ್ಯವನ್ನೂ ಆಡದಿರಬಹುದು ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ದೃಢಪಡಿಸಿದೆ. ಯುಎಇಯಲ್ಲಿ 2-1 ಅಂತರದಿಂದ ಸರಣಿ ಗೆದ್ದ ನಂತರ ಇಬ್ರಾಹಿಂ ಜದ್ರಾನ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.