Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA20 2025: ವಿಶ್ವದ ಶ್ರೀಮಂತ ಲೀಗ್‌ಗೂ ಮೊದಲು ಎಲ್ಲರ ಚಿತ್ತ SA20 ನತ್ತ: ಇಲ್ಲಿದೆ ಕಂಪ್ಲೀಟ್ ಮಾಹಿತಿ

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದಲೂ ವಿಶ್ವದಲ್ಲಿ ಲೀಗ್‌ಗಳ ಹಾವಳಿ ಜೋರಾಗಿದೆ. ಇದಕ್ಕೂ ಮೊದಲು ಸಹ ಕ್ರಿಕೆಟ್‌ ಲೀಗ್‌ಗಳು ಹೆಚ್ಚಾಗಿದ್ದವು. ಆದರೆ ಇಷ್ಟು ಖ್ಯಾತಿಯನ್ನು ಅವುಗಳು ಪಡೆದಿರಲಿಲ್ಲ. ಐಪಿಎಲ್ ನಲ್ಲಿ ಒಂದೇ ಸೂರಿ ನಡಿ ಎಲ್ಲ ದೇಶಗಳ ತಾರೆಯರು ಒಟ್ಟಾಗಿ ಆಡುತ್ತಾರೆ. ಅಭಿಮಾನಿಗಳು ಸಹ ಈ ಲೀಗ್‌ ನೋಡಲು ಕಾತುರತೆಯಿಂದ ಕಾಯುತ್ತಾ ಇರುತ್ತಾರೆ. ಮಾರ್ಚ್‌ನಲ್ಲಿ ಭಾರತದಲ್ಲಿ ಐಪಿಎಲ್‌ ಆರಂಭವಾಗಲಿದೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದಲ್ಲಿ SA T20 ಲೀಗ್ ಶುರುವಾಗಲಿದೆ.

ಭಾರತದಲ್ಲಿ ಐಪಿಎಲ್‌ ಯಶಸ್ಸು ಗಳಿಸುತ್ತಿದ್ದಂತೆ ವಿಶ್ವದಲ್ಲಿ ಟಿ20 ಲೀಗ್‌ಗಳು ಹೆಚ್ಚಾದವು. ಇದರಲ್ಲಿನ ಹಣ ಹಾಗೂ ಪ್ರಾಮುಖ್ಯತೆಯನ್ನು ಕಂಡು ಹಲವು ದೇಶಗಳು ಈ ಲೀಗ್ ಆರಂಭಿಸಿದವು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಸಹ ಸೇರುತ್ತದೆ. 2017ರಲ್ಲಿ ಟಿ20 ಗ್ಲೋಬಲ್‌ ಲೀಗ್‌ ಹೆಸರಿನಲ್ಲಿ ಆರಂಭವಾದ ಈ ಸರಣೀ, ಬಳಿಕ ಮಜಾಂನ್ಸಿ ಸೂಪರ್‌ ಲೀಗ್‌ ಹೆಸರಿನಲ್ಲಿ ನಡೆಯಿತು. ಆರಂಭದಲ್ಲಿ ಹೆಚ್ಚು ನ್ಯೂನತೆಗಳಿಂದ ಕೂಡಿದ್ದ ಲೀಗ್, ಕೋವಿಡ್‌-19 ಸಮಯದಲ್ಲಿ ರದ್ದಾಯಿತು.

SA20 2025 Teams Captains and Key Details for the Upcoming T20 League in South Africa

ತಾವು ಮಾಡಿದ ತಪ್ಪುಗಳಿಂದಲೇ ಪಾಠ ಕಲಿತ ದಕ್ಷಿಣ ಆಫ್ರಿಕಾ SA20 ಹೆಸರಿನಲ್ಲಿ ಲೀಗ್‌ ಆರಂಭಿಸಿತು. ಈ ಲೀಗ್‌ನಲ್ಲಿ ತಂಡಗಳನ್ನು ಐಪಿಎಲ್‌ ಫ್ರಾಂಚೈಸಿಗಳೇ ಖರೀದಿಸಿದ್ದು ಮತ್ತೊಂದು ವಿಶೇಷ. ಇದರಲ್ಲಿ ಒಟ್ಟು ಆರು ತಂಡಗಳಿದ್ದು, ಎಲ್ಲ ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳು ಮಾಲಿಕತ್ವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಮಾಡಿದಂತೆ ಪ್ರಾಂತ್ಯವಾರು ತಂಡಗಳನ್ನು ಮಾಡಲಾಯಿತು.

SA20 2025 ಮೂರನೇ ಆವೃತ್ತಿ ಜನವರಿ 9 ರಿಂದ ಪ್ರಾರಂಭವಾಗುತ್ತಿದ್ದು, ಒಟ್ಟು 6 ತಂಡಗಳು ಭಾಗವಹಿಸಲಿವೆ. ಒಟ್ಟು 34 ಪಂದ್ಯಗಳು ನಡೆಯಲಿದ್ದು ಫೈನಲ್‌ ಪಂದ್ಯ ಫೆಬ್ರವರಿ 2 ರಂದು ನಡೆಯಲಿದೆ.

SA20 2025 Teams Captains and Key Details for the Upcoming T20 League in South Africa

SA20 ಲೀಗ್‌ನಲ್ಲಿರುವ ತಂಡಗಳು ಯಾವವು?

ಮುಂಬೈ ಇಂಡಿಯನ್ಸ್‌ ತಂಡ ಕೇಪ್‌ ಟೌನ್‌ ತಂಡವನ್ನು ಹೊಂದಿದ್ದು, ಈ ತಂಡಕ್ಕೆ ಎಂಐ ಕೇಪ್‌ಟೌನ್ ಎಂದು ನಾಮಕರಣ ಮಾಡಲಾಗಿದೆ. ಲಕ್ನೋ ತಂಡ ಡರ್ಬನ್‌ ಸೂಪರ್‌ ಜೈಂಟ್ಸ್‌, ಚೆನ್ನೈ ತಂಡ ಜೋಬರ್ಗ್ ಸೂಪರ್ ಕಿಂಗ್ಸ್, ರಾಜಸ್ಥಾನ ತಂಡ ಪರ್ಲ್‌ ರಾಯಲ್ಸ್‌, ಡೆಲ್ಲಿ ತಂಡ ಪ್ರಿಟೋರಿಯಾ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್ ತಂಡ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳನ್ನು ಹೊಂದಿವೆ. ಈ ಲೀಗ್‌ ಈಗಾಗಲೇ ಎರಡು ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಮೂರನೇ ಆವೃತ್ತಿಗೆ ಕಾತುರದಿಂದ ಕಾಯುತ್ತಿದೆ. ಮತ್ತೊಂದು ವಿಶೇಷ ಎಂದರೆ ಈ ಟೀಮ್‌ಗಳ ಲೋಗ್‌ಗಳು ಸಹ ಸೇಮ್ ಐಪಿಎಲ್ ತಂಡದ ಲೋಗೋಗಳಂತೆ ಇವೆ.

SA20 ಚಾಂಪಿಯನ್ಸ್‌ ತಂಡಗಳು

ಈ ಲೀಗ್‌ ಎರಡು ಆವೃತ್ತಿಗಳನ್ನು ಕಂಡಿದ್ದು ಎರಡೂ ಆವೃತ್ತಿಗಳಲ್ಲಿ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಟ್ರೋಫಿಗೆ ಮುತ್ತಿಟಿದೆ. 2023ರಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಹಾಗೂ 2024ರಲ್ಲಿ ಡರ್ಬನ್‌ ಸೂಪರ್‌ ಜೈಂಟ್ಸ್‌ ರನ್ನರ್ ಅಪ್‌ ಆಗಿವೆ.

ಈ ಬಾರಿ ತಂಡಗಳ ನಾಯಕರು

  • ಡರ್ಬನ್‌ ಸೂಪರ್‌ ಜೈಂಟ್ಸ್‌, ಕೇಶವ್ ಮಹರಾಜ್
  • ಜೋಬರ್ಗ್ ಸೂಪರ್ ಕಿಂಗ್ಸ್, ಫಾಫ್ ಡುಪ್ಲೇಸಿಸ್‌
  • ಎಂಐ ಕೇಪ್‌ಟೌನ್‌, ರಾಶೀದ್ ಖಾನ್
  • ಪರ್ಲ್ ರಾಯಲ್ಸ್‌, ಡೇವಿಡ್ ಮಿಲ್ಲರ್‌
  • ಪ್ರಿಟೋರಿಯಾ ಕ್ಯಾಪಿಟಲ್ಸ್, ರಯಿಲ್ ರೋಸೂ
  • ಸನ್ ರೈಸರ್ಸ್ ಈಸ್ಟರ್ನ್ ಕೇಪ್, ಐಡನ್ ಮಾರ್ಕ್ರಮ್

Story first published: Wednesday, January 8, 2025, 11:00 [IST]
Other articles published on Jan 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+