For Quick Alerts
ALLOW NOTIFICATIONS  
For Daily Alerts
 

Sourav Ganguly: ಗಂಗೂಲಿಗೆ ಕೋಚ್‌ ಹುದ್ದೆ: ಇಲ್ಲಿದೆ ಕಪ್ಲೀಟ್ ರಿಪೋರ್ಟ್‌

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈಗ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ಹೊರಲಿದ್ದಾರೆ. ಇವರು ಈಗಾಗಲೇ ಟೀಮ್ ಇಂಡಿಯಾದ ನಾಯಕ, ಬಿಸಿಸಿಐ ಮುಖ್ಯಸ್ಥ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಅಲ್ಲದೆ ಐಪಿಎಲ್‌ನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. SA20 ಲೀಗ್ ಋತುವಿಗೆ ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಹೊಸ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಭಾನುವಾರ ಫ್ರಾಂಚೈಸಿ ಘೋಷಣೆ ಮಾಡಿದೆ.

ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದೆ. ದಿ ಪ್ರಿನ್ಸ್ ಈಗ ಕ್ಯಾಪಿಟಲ್ಸ್ ಶಿಬಿರಕ್ಕೆ ರಾಜಮನೆತನದ ಬಣ್ಣ ತುಂಬಲು ಸಿದ್ಧರಾಗಿದ್ದಾರೆ ಎಂದು ಫ್ರಾಂಚೈಸಿ ಬರೆದುಕೊಂಡಿದೆ. ಅಲ್ಲದೆ ಸೌರವ್ ಗಂಗೂಲಿ ಮುಖ್ಯ ಕೋಚ್ ಆಗಿದ್ದಾರೆ ಎಂದು ನಮಗೆ ಖುಷಿ ವಿಚಾರ ಎಂದು ಸಹ ತಿಳಿಸಿದೆ. ತಂಡದ ಪರ ಕೋಚ್‌ ಆಗಿ ಮೊದಲ ಅವಧಿ ಈದಾಗಿದೆ.

SA20 League Sourav Ganguly Takes Over as Head Coach of Pretoria Capitals

ಪ್ರಿಟೋರಿಯಾ ಕ್ಯಾಪಿಟಲ್ಸ್‌ ತಂಡವನ್ನು ಜೊನಾಥನ್ ಟ್ರಾಟ್ ಮುನ್ನಡೆಸಿದ್ದರು. ಇವರು ರಾಜೀನಾಮೆ ನೀಡಿದ 24 ಗಂಟೆಯಲ್ಲಿ ಆಫ್ರಿಕಾ ಈ ತಂಡಕ್ಕೆ ಹೊಸ ಕೋಚ ನೇಮಕ ಮಾಡಿದೆ. ದಾದಾ, ಟ್ರಾಟ್ ಅವರ ಸ್ಥಾನವನ್ನ ತುಂಬಲಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಒಂದು ಪೋಸ್ಟ್‌ ಮಾಡಿದೆ. ನೀವು ಕೋಚ್‌ ಆಗಿ ತಂಡವನ್ನು ಮುನ್ನಡೆಸಿದ ಧಾಟಿಗೆ, ಸಮರ್ಪಣೆಯ ಮನೋಭಾವಕ್ಕೆ ಕೃತಜ್ಞ ಎಂದು ತಿಳಿಸಿದೆ. ಇನ್ನು ಈ ಬಾರಿ ಎಸ್‌ಎ ಟಿ20 ಲೀಗ್‌ನ ವೇಳಾಪಟ್ಟಿ ಟಿ20 ವಿಶ್ವಕಪ್‌ ಒಂದೇ ಸಮಯದಲ್ಲಿ ಕಾಣಿಸಿಕೊಳ್ಳಲಿದ್ದು, ಆಯೋಜಕರು ಈ ಟೂರ್ನಿಯನ್ನು ವಿಶ್ವಕಪ್‌ಗೂ ಮುನ್ನ ಆಯೋಜಿಸುವ ಸಾಧ್ಯತೆ ಇದೆ. ಈ ಬಾರಿಯ ಟೂರ್ನಿ ಡಿಸೆಂಬರ್ 26 ರಿಂದ ಜ.25ರ ವರೆಗೆ ನಡೆಯಲದೆ.

ಸೌರವ್ ಗಂಗೂಲಿ ವೃತ್ತಿಪರ ಕ್ರಿಕೆಟ್‌ಗೆ 2012ರಲ್ಲಿ ವಿದಾಯ ಹೇಳಿದ್ರು. ಆ ಬಳಿಕ ಅವರು ಆಡಳಿತಾತ್ಮಕ ಮತ್ತು ಸಲಹಾ ಹುದ್ದೆಗಳನ್ನು ಅಲಂಕರಿಸಿದ್ದರು. ಇವರು 2015 ರಿಂದ 2019ರ ಅವಧಿಗೆ ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿ 2019ರಲ್ಲಿ ಆಯ್ಕೆ ಆದರು. ಇವರು ಈ ಮೊದಲು ದೆಹಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗ ನೇಮಕಗೊಂಡಿದ್ದರು. ಆ ಬಳಿಕ 2024ರಲ್ಲಿ ಗಂಗೂಲಿಯನ್ನು JSW ಸ್ಪೋರ್ಟ್ಸ್‌ನ ಕ್ರಿಕೆಟ್ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು ಮತ್ತು ಮಹಿಳಾ ಫ್ರಾಂಚೈಸ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ಅನ್ನು ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಅವರಿಗೆ ವಹಿಸಲಾಯಿತು.

ದಾದಾ ಸಾಧನೆ

ಟೀಮ್ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಸ್ಥಾನ. ಇವರು ಟೀಮ್ ಇಂಡಿಯಾದ ಪರ 113 ಟೆಸ್ಟ್‌ ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ7212 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 16 ಶತಕ ಹಾಗೂ 35 ಅರ್ಧಶತಕಗಳು ಸೇರಿವೆ. ಇನ್ನು 311 ಏಕದಿನ ಪಂದ್ಯದಲ್ಲ 11363 ರನ್ ಸಿಡಿಸಿದ್ದಾರೆ. ಈ ವೇಳೆ 22 ಶತಕ ಹಾಗೂ 72 ಅರ್ಧಶತಕ ಬಾರಿಸಿದ್ದಾರೆ.

Story first published: Sunday, August 24, 2025, 20:10 [IST]
Other articles published on Aug 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+