"ಆತನ ಮೇಲೆ ಈಗ ರೋಹಿತ್ ಶರ್ಮಾ ಹಾಗೂ ಟೀಮ್ ಇಂಡಿಯಾಗೆ ನಂಬಿಕೆ ಬರುತ್ತಿದೆ"
ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ಬಗ್ಗೆ ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ತಂಡದ ಮ್ಯಾನೇಜ್‌ಮೆಂಟ್ ಈಗ ಇಶಾನ್ ಕಿಶನ್ ಮೇಲೆ ನಂಬಿಕೆಯಿಟ್ಟಂತೆ ತೋರುತ್ತಿದೆ ಎಂದಿದ್ದಾರೆ ಸಬಾ ಕರೀಮ್. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕನ ಕ್ರಮಾಂಖದಲ್ಲಿ ಬ್ಯಾಟಿಂಗ್‌ಗೆ ಇಳಿದ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗಮನಸೆಳೆದಿದ್ದರು. ಅಲ್ಲದೆ ಟೆಸ್ಟ್ ಮಾದರಿಯಲ್ಲಿ ಚೊಚ್ಚಲ ಅರ್ಧ ಶತಕ ಸಿಡಿಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಕೊನೆಯ ದಿನದಲ್ಲಿ ಜಿಯೋ ಸಿನಿಮಾದಲ್ಲಿ ಮಾತನಾಡಿದ ಸಬಾ ಕರೀಮ್ ಇಶಾನ್ ಕಿಶನ್ ವಿಕೆಟ್ ಕೀಪರ್ ಕೌಶಲ್ಯದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಈ ಯುವ ಆಟಗಾರ ಕೀಪಿಂಗ್‌ನಲ್ಲಿ ತನ್ನ ಕಶಲ್ಯವನ್ನು ಹೆಚ್ಚಿಸಿಕೊಳ್ಳಲು ನಿಜಕ್ಕು ಕೂಡ ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ ಎಂದಿದ್ದಾರೆ.

"ರಿಷಭ್ ಪಂತ್ ಅವರಂಥಾ ಆಟಗಾರನ ಸ್ಥಾನದಲ್ಲಿ ಆಡುವುದು ದೊಡ್ಡ ಜವಾಬ್ಧಾರಿ. ಆಸ್ಟ್ರೇಲಿಯಾದ ವಿರುದ್ಧ ಉತ್ತಮ ಪರಿಸ್ಥಿತಿಯಲ್ಲಿ ಪರೀಕ್ಷಿಸಲ್ಪಟ್ಟರೂ ಕೆಎಸ್ ಭರತ್‌ಗೆ ಏನಾಯಿತು ಎಂಬುದನ್ನು ನೋಡಿದೆವು. ಆತ ಹೆಚ್ಚು ಪಂದ್ಯಗಳನ್ನು ಆಡಿದ್ದರಿಂದಾಗಿ ಆತನ ವಿಕೆಟ್ ಕೀಪಿಂಗ್ ಕೌಶಲ್ಯ ಸುಧಾರಿಸಿತ್ತು" ಎಂದಿದ್ದಾರೆ ಸಬಾ ಕರೀಮ್.
"ಆದರೆ ಇಶಾನ್ ಅವರನ್ನು ಆಯ್ಕೆ ಮಾಡಿದಾಗ ಅವರಿಗೆ ಸಂಪ್‌ನ ಹಿಂದೆ ಜವಾಬ್ಧಾರಿ ಇದೆ ಎನ್ನುವುದನ್ನು ಅರ್ಥ ಮಾಡಿಕೊಂಡರು. ವಿಕೆಟ್ ಕೀಪರ್ ಆಗು ಹಾಗೂ ಬ್ಯಾಟರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದು ಇದರಲ್ಲಿ ಅವರು ಇನ್ನಷ್ಟು ಸುಧಾರಣೆ ಕಾಣುತ್ತಾ ಮುಂದುವರಿಯುವ ವಿಶ್ವಾಸ ಇದೆ" ಎಂದಿದ್ದಾರೆ ಸಬಾ ಕರೀಮ್.
ಇನ್ನು ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಅಂತಿಮ ದಿನಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಮೊದಲ ಸೆಶನ್ ಸಂಪೂರ್ನ ಮಳೆಗೆ ಆಹುತಿಯಾದ ಬಳಿಕ ಎರಡನೇ ಸೆಶನ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಹೀಗಾಗಿ ಫಲಿತಾಂಶ ಹೊರಬೀಳುವುದು ಕೂಡ ಈ ಹಂತದಲ್ಲಿ ಕಷ್ಟಕರ ಎನ್ನಬಹುದು.
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್, ಶಾನನ್ ಗೇಬ್ರಿಯಲ್ ಆಡುತ್ತಿದ್ದಾರೆ
ಬೆಂಚ್: ಕೆವಿನ್ ಸಿಂಕ್ಲೇರ್, ರಹಕೀಮ್ ಕಾರ್ನ್ವಾಲ್
ಟೀಮ್ ಇಂಡಿಯಾ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಮುಖೇಶ್ ಕುಮಾರ್, ಮೊಹಮ್ಮದ್ ಸಿರಾಜ್
ಬೆಂಚ್: ಋತುರಾಜ್ ಗಾಯಕ್ವಾಡ್, ಶ್ರೀಕರ್ ಭರತ್, ಅಕ್ಸರ್ ಪಟೇಲ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications