ಸದ್ಯ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಈತನೇ ಭಾರತದ ಮ್ಯಾಚ್ ವಿನ್ನರ್: ಸಬಾ ಕರೀಮ್

ಭಾರತೀಯ ಕ್ರಿಕೆಟ್‌ನಲ್ಲಿ ಅನೇಕ ಯುವ ಆಟಗಾರರು ಅವಕಾಶ ಪಡೆದುಕೊಂಡು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಕೆಲ ಆಟಗಾರರು ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದು ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಈ ವರ್ಷದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಈ ಪ್ರದರ್ಶನಗಳು ಭಾರತ ತಂಡಕ್ಕೆ ಬಹಳಷ್ಟು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಭಾರತದ ಓರ್ವ ಆಟಗಾರನನ್ನು ಪ್ರಸ್ತುತ ತಂಡದ ಮ್ಯಾಚ್ ವಿನ್ನರ್ ಎಂದು ಬಣ್ಣಿಸಿದ್ದಾರೆ.
ಸಬಾ ಕರೀಮ್ ಹೀಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಬೇರೆ ಯಾರೂ ಅಲ್ಲ ಆಲ್‌ರೌಂಡರ್ ದೀಪಕ್ ಹೂಡಾ ಬಗ್ಗೆ. ಈ ಬಾರಿ ಐಪಿಎಲ್‌ನ ಬಳಿಕ ದೀಪಕ್ ಹೂಡಾ ಅದ್ಭುತ ಲಯದಲ್ಲಿದ್ದು ಭಾರತ ತಂಡದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಿಸಿಕೊಂಡು ಮಿಂಚಿದ್ದಾರೆ. ಹೀಗಾಗಿ ದೀಪಕ್ ಹೂಡಾ ಪ್ರಸ್ತುತ ಭಾರತ ವೈಟ್‌ಬಾಲ್ ತಂಡದ ಮ್ಯಾಚ್ ವಿನ್ನರ್ ಎಂದಿದ್ದಾರೆ.

ಆಲ್‌ರೌಂಡರ್‌ನನ್ನು ಹೊಗಳಿದ ಸಬಾ ಕರೀಮ್
ಮಾಜಿ ವಿಕೆಟ್ ಕೀಪರ್ ಸಬಾ ಕರೀಮ್ ಆಲ್‌ರೌಂಡರ್ ದೀಪಕ್ ಹೂಡಾ ಅವರ ಪ್ರದರ್ಶನದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ನನ್ನ ಪ್ರಕಾರ ಭಾರತದ ವೈಟ್ ಬಾಲ್ ತಂಡದಲ್ಲಿ ದೀಪಕ್ ಹೂಡಾ ಅವರೇ ದೊಡ್ಡ ಮ್ಯಾಚ್ ವಿನ್ನರ್ ಆಗಿದ್ದಾರೆ. ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವುದು ಅದ್ಭುತವಾದ ಸಂಗತಿಯಾಗಿದೆ. ಅವರು ಆಲ್‌ರೌಂಡರ್ ಆಗಿ ತಂಡಕ್ಕೆ ಕೊಡುಗೆಯನ್ನು ನೀಡಬಲ್ಲ ಆಟಗಾರ. ಅವರು ಐಪಿಎಲ್‌ನಲ್ಲಿ ಬೌಲಿಂಗ್ ಮಾಡಿದ್ದಷ್ಟೇ ಆತ್ಮ ವಿಶ್ವಾಸವನ್ನು ಹೊಂದಿದ್ದು ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಪ್ರಯತ್ನದಲ್ಲಿದ್ದಾರೆ" ಎಂದು ದೀಪಕ್ ಹೂಡಾ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

ಮಿಂಚುತ್ತಿದ್ದಾರೆ ದೀಪಕ್ ಹೂಡಾ
ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ದೀಪಕ್ ಹೂಡಾ ಬಳಿಕ ಭಾರತ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರು. ಸಿಕ್ಕ ಅವಕಾಶವನ್ನೆಲ್ಲಾ ಅತ್ಯುತ್ತಮವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದು ಬೌಲಿಂಗ್‌ನಲ್ಲಿಯೂ ಕೊಡುಗೆ ನಿಡುವ ಸಾಮರ್ಥ್ಯವನ್ನು ಹೊಂದಿರುವುದು ತಂಡಕ್ಕೆ ದೊಡ್ಡ ಶಕ್ತಿ ನೀಡುತ್ತಿದೆ. ಇನ್ನು ಟಿ20 ಮಾದರಿಯಲ್ಲಿ ಶತಕವನ್ನು ಸಿಡಿಸಿರುವ ಕೇವಲ ಐದನೇ ಭಾರತೀಯ ಆಟಗಾರ ಎನಿಸಿದ್ದಾರೆ ದೀಪಕ್ ಹೂಡಾ.

ಕೆಳ ಕ್ರಮಾಂಕದ ಪ್ರದರ್ಶನದ ಬಗ್ಗೆ ಸಬಾ ಕರೀಮ್ ಮೆಚ್ಚುಗೆ
ಇನ್ನು ಭಾರತ ತಂಡದಲ್ಲಿ ಕೆಳ ಕ್ರಮಾಂಕದ ಆಟಗಾರರು ನೀಡುತ್ತಿರುವ ಪ್ರದರ್ಶನದ ಬಗ್ಗೆಯೂ ಸಬಾ ಕರೀಮ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರ ಅದ್ಭುತ ಆಟವನ್ನು ಸಬಾ ಕರೀಮ್ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಅಕ್ಷರ್ ಪಟೇಲ್ ಈ ರೀತಿಯ ಪ್ರದರ್ಶನ ನೀಡುತ್ತಿರುವುದು ಇದು ಮೊದಲೇನಲ್ಲ ಎಂದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಮೊದಲ ಪಂದ್ಯದಲ್ಲಿಯೇ ಅಕ್ಷರ್ ಬ್ಯಾಟಿಂಗ್ ಮೂಲಕ ಡೆಲ್ಲಿ ತಂಡವನ್ನು ಗೆಲ್ಲಿಸಿದ್ದರು. ಹಾಗಾಗಿ ಆತ ಭಾರೀ ಒತ್ತಡದ ಸಂದರ್ಭದಲ್ಲಿಯೂ ರನ್‌ಗಳಿಸಬಲ್ಲ ಆಟಗಾರ ಎಂಬುದನ್ನು ಭಾವಿಸಿದ್ದೆವು. ಅದನ್ನು ಅವರು ಇಲ್ಲಿ ಮಾಡಿ ತೋರಿಸಿದ್ದಾರೆ. ಇದರಿಂದಾಗಿ ತಂಡದ ಮ್ಯಾನೇಜ್‌ಮೆಂಟ್‌ನ ಆತ್ಮ ವಿಶ್ವಾಸ ಕೂಡ ಹೆಚ್ಚಾಗುತ್ತದೆ ಎಂದಿದ್ದಾರೆ ಸಬಾ ಕರೀಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications