ಯಶಸ್ವಿ ಜೈಸ್ವಾಲ್ ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಯಶಸ್ವಿಗೆ ಇಂದಿನ ಶತಕ ನಿಜಕ್ಕೂ ವಿಶೇಷವಾಗಿದೆ. ಏಕೆಂದರೆ ಇದು ಭಾರತದಲ್ಲಿ ಅವರ ಮೊದಲ ಟೆಸ್ಟ್ ಶತಕವಾಗಿದೆ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್‌ನಲ್ಲಿ ಅವರ ಮೊದಲ ಶತಕ ಬಂದಿತ್ತು.
ಯಶಸ್ವಿ ಜೈಸ್ವಾಲ್ ಈ ಇನಿಂಗ್ಸ್ ಇಂದು ತಂಡಕ್ಕೆ ಅಗತ್ಯವಿದ್ದಾಗ ಆಡಿದ್ದು ತಂಡಕ್ಕೆ ನೆರವಾಗಿದೆ. ಈ ಶತಕದೊಂದಿಗೆ, ಅವರು ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಮತ್ತು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರ ವಿಶೇಷ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಯಶಸ್ವಿ ಜೈಸ್ವಾಲ್ ವಯಸ್ಸು ಕೇವಲ 22 ವರ್ಷ. ಇತ್ತೀಚೆಗೆ ಅವರು ಡಿಸೆಂಬರ್ 28 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂದರೆ ಅವರಿಗೆ 23 ವರ್ಷ ತುಂಬಲು ಇನ್ನೂ ಸಮಯವಿದೆ. 23 ನೇ ವರ್ಷಕ್ಕೆ ಕಾಲಿಡುವ ಮೊದಲು ದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಶತಕಗಳನ್ನು ಗಳಿಸಿದ ನಾಲ್ಕನೇ ಆಟಗಾರ ಎಂಬ ಹಿರಿಮೆ ತನ್ನದಾಗಿಸಿಕೊಂಡಿದ್ದಾರೆ.
ಈ ಹಿಂದೆ ಕೇವಲ ಮೂವರು ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದರು. ಆದರೆ ಈಗ ಜೈಸ್ವಾಲ್ ಕೂಡ ಈ ವಿಶೇಷ ಲೀಸ್ಟ್ ಪ್ರವೇಶಿಸಿದ್ದಾರೆ. ಇದರಲ್ಲಿ ಬರುವ ಮೊದಲ ಹೆಸರು ರವಿಶಾಸ್ತ್ರಿ. ಇವರು 23 ವರ್ಷಕ್ಕೆ ಕಾಲಿಡುವ ಮೊದಲೇ ಸ್ವದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್ ಶತಕಗಳನ್ನು ಗಳಿಸಿದ್ದರು. ಎರಡನೇ ಹೆಸರು ಸಚಿನ್ ತೆಂಡೂಲ್ಕರ್ ನಂತರ ಮತ್ತು ವಿನೋದ್ ಕಾಂಬ್ಳಿ ನಂತರ ಬರುತ್ತದೆ.

ವಿನೋದ್ ಕಾಂಬ್ಳಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು 1993 ರಲ್ಲಿ ಆಡಿದ್ದರು. ನಂತರ ಅವರ ಕೊನೆಯ ಟೆಸ್ಟ್ ಪಂದ್ಯ 1995 ರಲ್ಲಿ ಆಡಿದರು. ಅಂದಿನಿಂದ, ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ 2024 ರಲ್ಲಿ, ಯಶಸ್ವಿ ಜೈಸ್ವಾಲ್ ಈ ವಿಶೇಷ ಪಟ್ಟಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಈ ಸರಣಿಯ ಮೊದಲ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಭಾರತ ತಂಡ ಸೋತಾಗ ಮತ್ತು ತಂಡದ ದೌರ್ಬಲ್ಯಗಳು ಹೆಚ್ಚು ಬಹಿರಂಗಗೊಂಡವು. ಆ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದಾಗ 74 ಎಸೆತಗಳಲ್ಲಿ 80 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ 10 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಹೊಂದಿದ್ದರು.

ಯಶಸ್ವಿ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್ ಅಬ್ಬರಿಸಲಿಲ್ಲ. ಮತ್ತು ಅವರು ಕೇವಲ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದೀಗ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರದ ಕೊರತೆಯನ್ನು ಎರಡನೇ ಟೆಸ್ಟ್‌ನಲ್ಲಿ ತುಂಬಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್‌ನಲ್ಲಿ ಮೊದಲ ಶತಕ ಗಳಿಸಿದ್ದರು. ಜೈಸ್ವಾಲ್ ಅವರ ವಿಶೇಷವೆಂದರೆ ಅವರು ಶತಕ ಬಾರಿಸಿದಾಗಲೂ ಅದನ್ನು ಇನ್ನೂ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುತ್ತಾರೆ. ಇದಕ್ಕೂ ಮೊದಲು, ಅವರು ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದರು.
ವಿಂಡೀಸ್ ತಂಡದ ಎರಡನೇ ಪಂದ್ಯದಲ್ಲೂ ಅರ್ಧಶತಕ ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಅವರು ತಮ್ಮ ಬ್ಯಾಟ್‌ನಿಂದ ಹೆಚ್ಚು ರನ್ ಗಳಿಸಿದ್ದರು. ಈಗ ಜೈಸ್ವಾಲ್ ತೋರಿದ ಫಾರ್ಮ್ ಇನ್ನುಳಿದ ಸರಣಿಯಲ್ಲೂ ಇದೇ ರೀತಿ ಬ್ಯಾಟಿಂಗ್ ಮುಂದುವರಿಸಿ ಟೀಂ ಇಂಡಿಯಾ ಸರಣಿ ವಶಪಡಿಸಿಕೊಳ್ಳಬಹುದು ಎಂದು ನಿರೀಕ್ಷಿಸಬೇಕು.