ಭಾನುವಾರ ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಜೇಯ ಓಟವನ್ನು ಮುನ್ನಡೆಸುವ ಇರಾದೆ ಎರಡೂ ತಂಡಗಳದ್ದಾಗಿದೆ. ಈಗಾಗಲೇ ಈ ಗುಂಪಿನಿಂದ ಲೀಗ್ ಹಂತದಿಂದ ಸೆಮಿಫೈನಲ್ ಹಂತವನ್ನು ತಲುಪಿದೆ. ಉಭಯ ತಂಡಗಳಿಗೆ ಈ ಪಂದ್ಯ ಅನೌಪಚಾರಿಕವಾಗಿದೆ. ಈ ಪಂದ್ಯದ ದುಬೈ ನಡೆಯಲಿದ್ದು ಎಲ್ಲರ ಚಿತ್ತ ನೆಟ್ಟಿದೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ತಲಾ ನಾಲ್ಕು ಅಂಕಗಳನ್ನು ಹಂಚಿಕೊಂಡಿದೆ. ಉಭಯ ತಂಡಗಳು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡವನ್ನು ಮಣಿಸಿವೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಯಾವ ಆಟಗಾರ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆ ಬಗ್ಗೆ ವರದಿ ಇಲ್ಲಿದೆ.

ಉಭಯ ತಂಡಗಳ ನಡುವೆ ಈಗಾಗಲೇ 118 ಪಂದ್ಯಗಳನ್ನು ಆಡಲಾಗಿದೆ. ಈ ವೇಳೆ 60 ಜಯವನ್ನು ಭಾರತ ಕಂಡಿದ್ದು, 50 ಪಂದ್ಯಗಳನ್ನು ನ್ಯೂಜಿಲೆಂಡ್ ಗೆದ್ದಿದ್ದು, 7 ಪಂದ್ಯಗಳು ಫಲಿತಾಂಶ ಹೀನವಾಗಿವೆ. ಇನ್ನು ಒಂದು ಪಂದ್ಯ ಟೈ ಆಗಿವೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರು ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬ ಪ್ರಶ್ನೆಗಳು ಮೂಡಿವೆ.
ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಥಾನ. ಇವರು 42 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 1750 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಇದ್ದಾರೆ. ಇವರು 31 ಪಂದ್ಯಗಳಲ್ಲಿ 1645 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 9 ಅರ್ಧಶತಕಗಳು ಸೇರಿವೆ. ಮೂರನೇ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್ ಇದ್ದು, 1157 ರನ್ ಕಲೆ ಹಾಕಿದ್ದಾರೆ.

ಸಚಿನ್ ತೆಂಡೂಲ್ಕರ್, 42 ಪಂದ್ಯ, 1750 ರನ್, 5 ಶತಕ, 8 ಅರ್ಧಶತಕ
ವಿರಾಟ್ ಕೊಹ್ಲಿ, 31 ಪಂದ್ಯ, 1645 ರನ್, 6 ಶತಕ, 9 ಅರ್ಧಶತಕ
ವೀರೇಂದ್ರ ಸೆಹ್ವಾಗ್, 23 ಪಂದ್ಯ, 1157 ರನ್, 1 ಶತಕ, 10 ಅರ್ಧಶತಕ
ಸೌರವ್ ಗಂಗೂಲಿ, 32 ಪಂದ್ಯ, 1079 ರನ್, 3 ಶತಕ, 6 ಅರ್ಧಶತಕ
ರಾಹುಲ್ ದ್ರಾವಿಡ್, 31 ಪಂದ್ಯ, 1032 ರನ್, 2 ಶತಕ, 5 ಅರ್ಧಶತಕ
ವಿರಾಟ್ ಕೊಹ್ಲಿ, 31 ಪಂದ್ಯ, 1645 ರನ್, 6 ಶತಕ, 9 ಅರ್ಧಶತಕ
ರೋಹಿತ್ ಶರ್ಮಾ, 29 ಪಂದ್ಯ, 982 ರನ್, 2 ಶತಕ, 5 ಅರ್ಧಶತಕ
ಶುಭಮನ್ ಗಿಲ್, 10 ಪಂದ್ಯ, 590 ರನ್, 2 ಶತಕ, 2 ಅರ್ಧಶತಕ
ಶ್ರೇಯಸ್ ಅಯ್ಯರ್, 8 ಪಂದ್ಯ, 484 ರನ್, 2 ಶತಕ, 3 ಅರ್ಧಶತಕ
ರವೀಂದ್ರ ಜಡೇಜಾ, 14 ಪಂದ್ಯ, 361 ರನ್, 4 ಅರ್ಧಶತಕ