Sachin Tendulkar-Kumar Sangakkara: ಮೈದಾನದಲ್ಲಿ ಮತ್ತೆ ಮುಖಾಮುಖಿಯಾಗಲಿರುವ ಸಚಿನ್-ಸಂಗಕ್ಕಾರ
ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಈ ಎರಡು ಹೆಸರುಗಳನ್ನು ಪರಿಚಯಿಸುವ ಅಗತ್ಯವಿಲ್ಲ. ಇಬ್ಬರೂ ದಂತಕಥೆಗಳು ತಮ್ಮ ವೃತ್ತಿಜೀವನದಲ್ಲಿ ಅನೇಕ ಮಹಾನ್ ಸಾಧನೆಗಳನ್ನು ಮಾಡಿದ್ದಾರೆ. ಈ ಇಬ್ಬರು ದಿಗ್ಗಜ ಬ್ಯಾಟರ್‌ಗಳ ಆಟವಾಡುವುದನ್ನು ನೋಡುವುದು ಅಭಿಮಾನಿಗಳಿಗೆ ಒಂದು ಅದ್ಭುತ ಅನುಭವ. ಈಗ ಮತ್ತೊಮ್ಮೆ ಈ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ನಡುವೆ, ಇಬ್ಬರೂ ದಿಗ್ಗಜರು ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿಯೇ ಸಚಿನ್ ತೆಂಡಲ್ಕೂರ್ ನಾಯಕತ್ವದ ಭಾರತ ತಂಡ ಮತ್ತು ಕುಮಾರ ಸಂಗಕ್ಕಾರ ನಾಯಕತ್ವದ ಶ್ರೀಲಂಕಾ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ ಮೊದಲ ಸೀಸನ್ ಚಾಂಪಿಯನ್ಸ್ ಟ್ರೋಫಿಯ ನಡುವೆ ಪ್ರಾರಂಭವಾಗಲಿದೆ. ಆದರೆ, ಉದ್ಘಾಟನಾ ಪಂದ್ಯದ ದಿನವೇ ಟೀಮ್ ಇಂಡಿಯಾದ ಪಂದ್ಯ ನಡೆಯದ ಕಾರಣ ವೀಕೆಂಡ್ ಅಭಿಮಾನಿಗಳಿಗೆ ರೋಚಕವಾಗಿರುತ್ತದೆ.

ಫೆಬ್ರವರಿ 22 ರಿಂದ ಪ್ರಾರಂಭವಾಗಲಿರುವ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾಗವಹಿಸಲಿವೆ. ಈ ಲೀಗ್ ಮೂಲಕ ತಮ್ಮ ನೆಚ್ಚಿನ ಕ್ರಿಕೆಟಿಗರು ಒಟ್ಟಿಗೆ ನೋಡುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿ ಸಿಗಲಿದೆ.
ಜಿಯೋ ಸ್ಟಾರ್‌ನ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮತ್ತು ಕಲರ್ಸ್ ಸಿನೆಪ್ಲೆಕ್ಸ್ (SD ಮತ್ತು HD) ಮತ್ತು ಕಲರ್ಸ್ ಸಿನೆಪ್ಲೆಕ್ಸ್ ಸೂಪರ್‌ಹಿಟ್‌ಗಳಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ ಪಂದ್ಯಗಳು ಲೈವ್ ಆಗಲಿವೆ. ಎಲ್ಲಾ ಪಂದ್ಯಗಳು ರಾತ್ರಿ 7.30 ಗಂಟೆಗೆ ಆರಂಭವಾಗಲಿವೆ. ನವಿ ಮುಂಬೈ, ರಾಜ್‌ಕೋಟ್ ಮತ್ತು ರಾಯ್‌ಪುರದಲ್ಲಿ ಲೀಗ್ ನಡೆಯಲಿದೆ. ಮೊದಲ ಪಂದ್ಯ ಫೆಬ್ರವರಿ 22 ರಂದು ನವಿ ಮುಂಬೈನಲ್ಲಿ ನಡೆಯಲಿದೆ ಮತ್ತು ಫೈನಲ್ ಮಾರ್ಚ್ 16 ರಂದು ರಾಯ್ಪುರದಲ್ಲಿ ನಡೆಯಲಿದೆ.
ಈ ಲೀಗ್ ಕುರಿತು ಮಾತನಾಡಿದ ಸಚಿನ್ ತೆಂಡೂಲ್ಕರ್, 'ಐಎಂಎಲ್ ಕ್ರಿಕೆಟ್‌ನ ವಿಶಿಷ್ಟ ಪರಂಪರೆಯ ಆಚರಣೆಯಾಗಲಿದೆ. ನನ್ನ ಸಮಕಾಲೀನ ಆಟಗಾರರೊಂದಿಗೆ ಮತ್ತೆ ಮೈದಾನಕ್ಕಿಳಿಯಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ ಶ್ರೀಲಂಕಾ ನಾಯಕ ಸಂಗಕ್ಕಾರ ಕೂಡ ಪ್ರತಿಕ್ರಿಯಿಸಿದ್ದಾರೆ.'ಮಾಜಿ ಕ್ರಿಕೆಟಿಗರಿಗೆ ಹಳೆಯ ಪೈಪೋಟಿಯನ್ನು ಪುನರುಜ್ಜೀವನಗೊಳಿಸುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಇದು ಅದ್ಭುತ ಅವಕಾಶವಾಗಿದೆ. ಹಲವಾರು ದಿಗ್ಗಜರನ್ನು ಹೊಂದಿರುವ ಈ ಐತಿಹಾಸಿಕ ಲೀಗ್‌ನ ಭಾಗವಾಗಲು ಸಂತೋಷವಾಗಿದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications