Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Athletics Championships: ಜಾವೆಲಿನ್ ಥ್ರೋದಲ್ಲಿ ಭಾರತಕ್ಕೆ ಬೆಳ್ಳಿ: ಪಾಕ್‌ಗೆ ಬಂಗಾರ

ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದೆ. ಜಾವೆಲಿನ್ ಥ್ರೋನಲ್ಲಿ ಭಾರತದ ಸಚಿನ್ ಯಾದವ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯವಾಳಿಯಲ್ಲಿ ಡಬಲ್‌ ಒಲಿಂಪಿಕ್ಸ್‌ ಪದಕ ವಿಜೇತ ಕ್ರೀಡಾ ಪಟು ನೀರಜ್ ಚೋಪ್ರಾ ಭಾಗವಹಿಸಿರಲಿಲ್ಲ. ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್‌ ಬಂಗಾರವನ್ನು ಪಡೆದು ಬೀಗಿದ್ದಾರೆ. ಭಾರತದ ಸಚಿನ್‌ ಯಾದವ್ ಕೆಲವೇ ಮೀಟರ್ ಅಂತರದಲ್ಲಿ ಸ್ವರ್ಣ ಪದಕವನ್ನು ಮಿಸ್ ಮಾಡಿಕೊಂಡಿದ್ದಾರೆ.

ಎಲ್ಲರ ಚಿತ್ತವನ್ನು ಕದ್ದಿದ್ದ ಜಾವೆಲಿನ್ ಥ್ರೋದಲ್ಲಿ ಭಾರತದ ಸಚಿನ್ ಯಾದವ್ ತಮ್ಮ ಮೊದಲ ಪ್ರಯತ್ನದಲ್ಲಿ 79.65 ಮೀಟರ್‌ ಜಾವೆಲಿನ್ ಎಸೆದು ಬೀಗಿದರು. ಅರ್ಷದ್ ನದೀಮ್‌ ತಮ್ಮ ಮೊದಲ ಪ್ರಯತ್ನದಲ್ಲಿ 75.64 ಮೀಟರ್‌ ದೂರ ಜಾವೆಲಿನ್‌ ಎಸೆದರು. ಅರ್ಷದ್ ನದೀಮ್‌ ತಮ್ಮ ಎರಡನೇ ಪ್ರಯತ್ನದಲ್ಲಿ 85.57 ಮೀಟರ್‌ ದೂರ ಜಾವೆಲಿನ್‌ ಎಸೆದು ಮುನ್ನಡೆ ಸಾಧಿಸಿದರು. ಆದರೆ ಈ ಪ್ರಯತ್ನದಲ್ಲಿ ಸಚಿನ್ ಯಾದವ್ ಕಡಿಮೆ ದೂರ ಜಾವೆಲಿನ್ ಎಸೆದರು.

Sachin Yadav Wins Silver in Asian Athletics Championships Javelin Throw

ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆಯಲ್ಲಿ ಅರ್ಷದ್ ನದೀಮ್ ಆರಂಭದಿಂದಲೂ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಭಾರತದ ಸಚಿನ್ ಯಾದವ್ ತಮ್ಮ ಐದನೇ ಪ್ರಯತ್ನದಲ್ಲಿ 83.08 ಮೀಟರ್ ದೂರ ಜಾವೆಲಿನ್ ಎಸೆದು ಬೀಗಿದರು. ಈ ಮೂಲಕ ಪದಕಕ್ಕೆ ಹತ್ತಿರವಾದರು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಬಂಗಾರದ ಸಾಧನೆಯನ್ನು ಮಾಡಿದ್ದ ಅರ್ಷದ್ ನದೀಮ್‌ ತಮ್ಮ ಆರನೇ ಪ್ರಯತ್ನದಲ್ಲಿ 86.40 ಮೀಟರ್‌ ದೂರ ಜಾವೆಲಿನ್‌ ಎಸೆದು, ಬಂಗಾರವನ್ನು ತಮ್ಮದಾಗಿಸಿಕೊಂಡರು.

ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆಯಲ್ಲಿ ಭಾರತ ಸಚಿನ್ ಯಾದವ್ ಅಂತಿಮ ಪ್ರಯತ್ನದಲ್ಲಿ 85.16 ದೂರ ಜಾವೆಲಿನ್ ಎಸೆದು ಬೀಗಿದರು. ಈ ಮೂಲಕ ಬೆಳ್ಳಿ ಪದಕ ಪಡೆದರು. ಅರ್ಷದ್ ನದೀಮ್‌ ಹಾಗೂ ಸಚಿನ್‌ ಯಾದವ್ ಅವರಿಗೆ 1.24 ಮೀಟರ್‌ ದೂರ ಅಂತರ ಇತ್ತು. ಇದೇ ಸ್ವರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಯಶ್ವೀರ್ ಸಿಂಗ್ ಐದನೇ ಸ್ಥಾನ ಪಡೆದರು. ಯಶ್ವೀರ್ ಸಿಂಗ್ 82.57 ಮೀಟರ್ ದೂರದಲ್ಲಿ ಜಾವೆಲಿನ್ ಎಸೆದರು. ಜಪಾನಿನ ಅಥ್ಲೀಟ್ ಯುಟಾ ಸಕಿಯಾಮಾ 83.75 ಮೀಟರ್ ದೂರದಲ್ಲಿ ಜಾವೆಲಿನ್ ಎಸೆದು ಕಂಚಿನ ಪದಕ ಗೆದ್ದರು. ಶ್ರೀಲಂಕಾದ ಪತಿರಾಜ್ (83.27 ಮೀಟರ) ನಾಲ್ಕನೇ ಸ್ಥಾನ ಪಡೆದರು.

ಭಾರತದ ಸಾಧನೆ

ಒಟ್ಟಾರೆ ಟೂರ್ನಿಯಲ್ಲಿ ಭಾರತ 24 ಪದಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ 8 ಬಂಗಾರ, 10 ಬೆಳ್ಳಿ, 6 ಕಂಚಿನ ಪದಕ ಪಡೆದಿದೆ. ಚೀನಾ 4 ಪದಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

Story first published: Sunday, June 1, 2025, 11:41 [IST]
Other articles published on Jun 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+