Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಮೇಲಿನ ಸಿಟ್ಟಿಗೆ ಕುಂಬ್ಳೆ ಪರ ಗವಾಸ್ಕರ್ ಬ್ಯಾಟಿಂಗ್!

ಮುಂಬೈ, ಜೂನ್ 22: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಇತರೆ ಆಟಗಾರರ ಜೊತೆಗಿನ ಮನಸ್ತಾಪದಿಂದ ನೊಂದು ಅನಿಲ್ ಕುಂಬ್ಳೆ ಅವರು ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದು ಕ್ರಿಕೆಟ್ ಇತಿಹಾಸದ ಅತ್ಯಂತ ದುಃಖದ ದಿನ ಎಂದು ಮಾಜಿ ನಾಯಕ, ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕಾರ್ ಹೇಳಿದ್ದಾರೆ.

ಇದರ ಜತೆಗೆ ಟೀಂ ಇಂಡಿಯಾದ ಆಟಗಾರರ ಮೇಲೆ ಗವಾಸ್ಕಾರ್ ಕಿಡಿಕಾರಿದ್ದಾರೆ. ಮ್ಯಾಚ್ ಪ್ರಾಕ್ಟೀಸ್ ಗಿಂತ ಕೆಲ ಆಟಗಾರರಿಗೆ ಶಾಪಿಂಗ್ ಮುಖ್ಯ. ಮೈದಾನದಲ್ಲಿ ಬೆವರಿಳಿಸುವುದಕ್ಕಿಂತ ಎಸಿ ಹೋಟೆಲ್ ನಲ್ಲೇ ಕಾಲ ಕಳೆಯುವುದು ಅಭ್ಯಾಸವಾಗಿರುವುದು ದುರಾದೃಷ್ಟ ಎಂದು ಗವಾಸ್ಕರ್ ಹೇಳಿದ್ದಾರೆ.

ಕೊಹ್ಲಿ ಬಯಸಿದತೆ ಸೌಮ್ಯ ಸ್ವಭಾವದ ಕೋಚ್ ಸಿಕ್ಕರೆ ಏನಾಗುತ್ತದೆ? 'ಓಕೆ ಬಾಯ್ಸ್, ನಿಮಗೆ ಹುಷಾರಿಲ್ಲವಲ್ಲ, ಇವತ್ತು ಪ್ರಾಕ್ಟೀಸ್'ಗೆ ಬರಬೇಡಿ, ಆರಾಮವಾಗಿ ಶಾಪಿಂಗ್ ಮಾಡಿಕೊಂಡು ಇರಿ,' ಎಂದು ಹೇಳುವ ವ್ಯಕ್ತಿ ಸಿಗುತ್ತಾರೆ. ತಂಡದಲ್ಲಿ ಶಿಸ್ತು ಸಾಯುತ್ತದೆ. ಕ್ರಿಕೆಟ್ ಪಂದ್ಯಗಳಲ್ಲಿ ಸೋಲು ನಿಶ್ಚಿತವಾಗುತ್ತದೆ ಎಂದು ಗವಾಸ್ಕರ್ ಕೆಂಡಕಾರಿದ್ದಾರೆ.

ಬಿಸಿಸಿಐ ವೈಫಲ್ಯ

ಬಿಸಿಸಿಐ ವೈಫಲ್ಯ

ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ಅನುಭವ ಹೊಂದಿರುವ ಸುನಿಲ್ ಗವಾಸ್ಕರ್ ಅವರು ಈಗಿನ ಆಡಳಿತ ಮಂಡಳಿ ಮೇಲೂ ಕಿಡಿಕಾರಿದ್ದಾರೆ. ಆರ್ಥಿಕ ಕಡಿವಾಣ ಹಾಕುವುದಷ್ಟೇ ಬಿಸಿಸಿಐ ಕೆಲಸವಲ್ಲ. ತಂಡದ ಮೇಲೆ ನಿಯಂತ್ರಣವೂ ಅಗತ್ಯ ಎಂದಿದ್ದಾರೆ. ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಸಮಸ್ಯೆ ಇರುವುದು ಗೊತ್ತಿದ್ದರೂ ಸುಮ್ಮನೆ ಇದ್ದು, ಸಮಸ್ಯೆ ಉಲ್ಬಣವಾದ ಮೇಲೆ ಮುಲಾಮು ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದು ದುರಂತ ಎಂದು ಗವಾಸ್ಕರ್ ಹೇಳಿದ್ದಾರೆ.

ಬಿಸಿಸಿಐಗೆ ಬೈದ ಗವಾಸ್ಕರ್

ಬಿಸಿಸಿಐಗೆ ಬೈದ ಗವಾಸ್ಕರ್

ಬಿಸಿಸಿಐಗೆ ಬೈದಿರುವ ಗವಾಸ್ಕರ್ ಅವರು ಸಚಿನ್ ಅವರಿರುವ ತ್ರಿಸದಸ್ಯ ಸಮಿತಿ ಬಗ್ಗೆ ಹೆಚ್ಚು ಮಾತನಾಡಿಲ್ಲ. ಗಂಗೂಲಿ ಹಾಗೂ ಲಕ್ಷ್ಮಣ್ ಕೂಡಾ ಇರುವ ಸಮಿತಿಗೆ ಕುಂಬ್ಳೆ ಬದಲಿಗೆ ಹೊಸಬರನ್ನು ಆಯ್ಕೆ ಮಾಡುವುದು ಕಠಿಣ ಕೆಲಸ ಎಂದಿದ್ದಾರೆ.

ಕೊಹ್ಲಿ ಪರ ಸಿಡಿದಿದ್ದ ಸುನಿಲ್

ಕೊಹ್ಲಿ ಪರ ಸಿಡಿದಿದ್ದ ಸುನಿಲ್

ಒಬ್ಬ ವಿಶ್ವದರ್ಜೆಯ ಬ್ಯಾಟ್ಸ್ ಮನ್ ಆಡುವ ಆಟ ಅದಲ್ಲ. ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲಿ. ಆಗ ಅವರಿಗೆ ಅವರೆಂಥ ತಪ್ಪು ಮಾಡಿದ್ದಾರೆಂದು ಅವರಿಗೆ ತಿಳಿಯುತ್ತದೆ ಎಂದು ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವಿರುದ್ಧ ಐಪಿಎಲ್ ನಲ್ಲಿ ಕಿಡಿಕಾರಿದ್ದರು ಕೊಹ್ಲಿ ನಾಯಕತ್ವದ ಬಗ್ಗೆಯೂ ಪ್ರಶ್ನೆ ಎತ್ತಿದ್ದರು.

ಕುಂಬ್ಳೆ ರಾಜೀನಾಮೆ ನೀಡಬಾರದಿತ್ತು

ಕುಂಬ್ಳೆ ರಾಜೀನಾಮೆ ನೀಡಬಾರದಿತ್ತು

ಕುಂಬ್ಳೆಯಥ ಹೋರಾಟಗಾರ ಈ ರೀತಿ ರಾಜೀನಾಮೆ ನೀಡಿ, ವಿಮುಖರಾಗಿರುವುದು ಸರಿಯಲ್ಲ. ಸಮಸ್ಯೆ ಏನೇ ಇರಲಿ, ತಂಡದ ಒಳಿತಿಗಾಗಿ ಇನ್ನಷ್ಟು ಕಾಲ ತಂಡದ ಜತೆ ಇರಬೇಕಾಗಿತ್ತು. ಹೊಸ ಕೋಚ್ ನೇಮಕವಾಗುವ ತನಕವಾದರೂ ಕುಂಬ್ಳೆ ತಂಡಕ್ಕೆ ಬಲ ತುಂಬಬಹುದಿತ್ತು. ಸಿಎಸಿ ಕೂಡಾ ಕುಂಬ್ಳೆಯಂಥ ದಿಗ್ಗಜರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದರು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+