
ಟೂರ್ನಿಯಲ್ಲಿ ಮೊದಲಾರ್ಧದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮುನ್ನುಗ್ಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಕಂಡಿದೆ. ಅದರಲ್ಲೂ ಹೈದರಾಬಾದ್ ವಿರುದ್ಧದ ಪಂದ್ಯ ಸೋಲು ಡೆಲ್ಲಿಯನ್ನು ಚಿಂತೆಗೀಡು ಮಾಡಿದೆ. ಆರಂಭಿಕನಾಗಿ ಡೇವಿಡ್ ವಾರ್ನರ್ ಜೊತೆಗೆ ಕಣಕ್ಕಿಳಿದ ವೃದ್ಧಿಮಾನ್ ಸಾಹಾ ಸ್ಪೋಟಕ ಆಟವನ್ನ್ನು ಪ್ರದರ್ಶಿಸಿದರು. ಡೆಲ್ಲಿ ವಿರುದ್ದ ಸಾಹಾ ಇನ್ನಿಂಗ್ಸ್ ಟೂರ್ನಿಯ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ರಶೀದ್ ಖಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಾಯಕ ಡೇವಿಡ್ ವಾರ್ನರ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಸಾಹ ಮೊದಲ ಆರು ಓವರ್‌ಗಳಲ್ಲಿ 77 ನ್ ಬಾರಿಸಿ ಟೂರ್ನಿಯಲ್ಲಿ ದಾಖಲೆ ಬರೆದರು. ಈ ಪಂದ್ಯದಲ್ಲಿ 45 ಎಸೆತಗಳನ್ನು ಎದುರಿಸಿದ ಸಾಹ 87 ರನ್‌ಗಳನ್ನು ಬಾರಿಸಿದರು. ಸಾಹಾ ಹಾಗೂ ವಾರ್ನರ್ ಅಬ್ಬರದ ಆಟದಿಂದಾಗಿ 200ರನ್‌ಗಳ ಗಡಿಯನ್ನು ದಾಟಲು ಹೈದರಾಬಾದ್ ಯಶಸ್ವಿಯಾಗಿತ್ತು.
ವಿಕೆಟ್ ಕೀರ್ ಬ್ಯಾಟ್ಸ್‌ಮನ್ ಸಾಹಾ ಎದುರಾಳಿ ತಂಡದ ಬೌಲರ್‌ಗಳನ್ನು ದಂಡಿಸಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ಕಾರಣಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ರಶೀದ್ ಖಾನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಪ್ರದರ್ಶನವನ್ನು ನಾನು ಈ ಬಾರಿಯ ಐಪಿಎಲ್‌ನಲ್ಲಿ ಗಮನಿಸಲಿಲ್ಲ. ಈ ಬಾರಿಯ ಆವೃತ್ತಿಯ ಸರ್ವ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಇದು ಒಂದು ಎಂದು ರಶೀದ್ ಸಾಹಾ ಪ್ರದರ್ಶನವನ್ನು ಕೊಂಡಾಡಿದ್ದಾರೆ. ರಶೀದ್ ಖಾನ್ ಹಯದರಾಬಾದ್ ಪರ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚಿದ್ದಾರೆ.
ಡೆಲ್ಲಿ ವಿರುದ್ಧದ ಗೆಲುವಿನ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಸ್ಥಾನ ಕೆಳಕ್ಕೆ ಜಾರಿದ್ದು ಮೂರನೇ ಸ್ಥಾನದಲ್ಲಿದೆ.