Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದೊಂದಿಗೆ ಕ್ರಿಸ್ ಗೇಲ್ ದಾಖಲೆ ಮುರಿದ ಸಾಹಿಲ್ ಚೌಹಾಣ್

ಎಸ್ಟೋನಿಯಾದ ಬ್ಯಾಟರ್ ಸಾಹಿಲ್ ಚೌಹಾಣ್ ಅವರು ಸೋಮವಾರ ಸೈಪ್ರಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕಕ್ಕಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಫೆಬ್ರವರಿ 2024ರಲ್ಲಿ ನೇಪಾಳ ವಿರುದ್ಧ ಟಿ20 ಶತಕವನ್ನು ಪೂರ್ಣಗೊಳಿಸಲು ನಮೀಬಿಯಾದ ಜಾನ್-ನಿಕೋಲ್ ಲೋಫ್ಟಿ ಈಟನ್ ಅವರ 33 ಎಸೆತಗಳ ದಾಖಲೆಯನ್ನು ಸಾಹಿಲ್ ಚೌಹಾಣ್ ಮುರಿದರು.

ಅಲ್ಲದೆ, ಐಪಿಎಲ್ 2013ರಲ್ಲಿ ಕ್ರಿಸ್ ಗೇಲ್ ಅವರ 30 ಎಸೆತಗಳ ವೇಗದ ಟಿ20 ಶತಕವನ್ನು ಮೀರಿಸುವ ಮೂಲಕ ಸಾಹಿಲ್ ಚೌಹಾಣ್ ಇದೀಗ ಟಿ20 ಪಂದ್ಯಗಳಲ್ಲಿ ಅತಿ ವೇಗದ ಶತಕ ದಾಖಲೆಯನ್ನು ಹೊಂದಿದ್ದಾರೆ.

Sahil Chauhan breaks Chris Gayle s record for fastest century in T20 cricket

ಸೋಮವಾರ ಎಪಿಸ್ಕೋಪಿಯಲ್ಲಿ ನಡೆದ ಎಸ್ಟೋನಿಯಾ ಮತ್ತು ಸೈಪ್ರಸ್ ನಡುವಿನ ಆರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ, ಆತಿಥೇಯ ಸೈಪ್ರಸ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದರು.

ಸೈಪ್ರಸ್ ಪರ ತರಂಜಿತ್ ಸಿಂಗ್ 17 ಎಸೆತಗಳಲ್ಲಿ 44 ರನ್ ಗಳಿಸಿದರೆ, ಚಮಲ್ ಸದುನ್ 28 ರನ್ ಗಳಿಸಿದರು. ಎಸ್ಟೋನಿಯಾ ಪರ ಪ್ರಣಯ್ ಘೀವಾಲಾ ಮತ್ತು ಅರ್ಸ್ಲಾನ್ ಅಮ್ಜದ್ ತಲಾ ಎರಡು ವಿಕೆಟ್ ಪಡೆದರು.

ಚೇಸಿಂಗ್ ವೇಳೆ ಎಸ್ಟೋನಿಯಾ ಅತ್ಯಂತ ಕೆಟ್ಟ ಆರಂಭ ಪಡೆಯಿತು, ಸಾಹಿಲ್ ಚೌಹಾಣ್ ಇನ್ನಿಂಗ್ಸ್‌ನ ನಿಯಂತ್ರಣ ತೆಗೆದುಕೊಳ್ಳುವ ಮೊದಲು ಕೇವಲ 40 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆ ಬಳಿಕ ಸ್ಫೋಟಕ್ಕೆ ತಿರುಗಿದ ಸಾಹಿಲ್ ಚೌಹಾಣ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಮತ್ತು 27 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟಾರೆ ಕೇವಲ 41 ಎಸೆತಗಳಲ್ಲಿ ಅಜೇಯ 144 ರನ್ ಬಾರಿಸಿದರು. ಎಸ್ಟೋನಿಯಾ ತಂಡ ಇನ್ನೂ ಏಳು ಓವರ್‌ಗಳು ಉಳಿದಿರುವಂತೆ ಆರು ವಿಕೆಟ್‌ಗಳಿಂದ ಗೆದ್ದುಬೀಗಿತು.

ಸಾಹಿಲ್ ಚೌಹಾಣ್ ಇನ್ನಿಂಗ್ಸ್ ಅದ್ಭುತ ಇನ್ನಿಂಗ್ಸ್‌ನಲ್ಲಿ 18 ಸಿಕ್ಸರ್‌ಗಳನ್ನು ಸಿಡಿಸಿದರು. ಇದು ಪುರುಷರ ಟಿ20 ಇನ್ನಿಂಗ್ಸ್‌ನಲ್ಲಿ ಆಟಗಾರನೊಬ್ಬನ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ.

ಅಫ್ಘಾನಿಸ್ತಾನದ ಹಜರತುಲ್ಲಾ ಝಜೈ ಮತ್ತು ನ್ಯೂಜಿಲೆಂಡ್‌ನ ಫಿನ್ ಅಲೆನ್ ಅವರ ದಾಖಲೆಯನ್ನು ಮೀರಿಸಿದೆ. ಅವರು ತಮ್ಮ ದಾಖಲೆಯ 162 ಮತ್ತು 137 ರನ್‌ಗಳಲ್ಲಿ ತಲಾ 16 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಎರಡನೇ ಪಂದ್ಯದಲ್ಲಿ ಸೈಪ್ರಸ್ 20 ಓವರ್‌ಗಳಲ್ಲಿ 191/7 ಗಳಿಸಿದರೆ, ಎಸ್ಟೋನಿಯಾ 13 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಹೊಂದಿರುವಂತೆ ಚೇಸಿಂಗ್ ಮಾಡಿತು. ಬಿಲಾಲ್ ಮಸೂದ್ ಅವರು ಸಾಹಿಲ್ ಚೌಹಾಣ್ ನಂತರದ ಗರಿಷ್ಠ (ಅಜೇಯ 21) ರನ್ ಗಳಿಸಿದರು.

ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಸಾಹಿಲ್ ಚೌಹಾಣ್ ಗೋಲ್ಡನ್ ಡಕ್‌ಗೆ ಔಟಾದರು. ಇದನ್ನು ಕೂಡ ಎಸ್ಟೋನಿಯಾ ಐದು ವಿಕೆಟ್‌ಗಳಿಂದ ಗೆದ್ದಿತ್ತು.

Story first published: Tuesday, June 18, 2024, 8:00 [IST]
Other articles published on Jun 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+