ಸಾಯಿ ಸುದರ್ಶನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಮಾಡಿದರು. ಮೊದಲೆರಡು ಪಂದ್ಯಗಳಲ್ಲಿ ಎಡಗೈ ಬ್ಯಾಟ್ಸ್ ಮನ್ ಅರ್ಧಶತಕ ಬಾರಿಸುವ ಮೂಲಕ ಜನರ ಗಮನ ಸೆಳೆದಿದ್ದರು. ಇದಾದ ಬಳಿಕ ಮೂರನೇ ಪಂದ್ಯದಲ್ಲಿ ರನ್ ಬರ ಅನುಭವಿಸಿದರು. ಆದರೆ ತಮ್ಮ ಉಪಸ್ಥಿತಿಯನ್ನು ತ್ರರಕ್ಷಣೆಯ ವೇಳೆ ಸಾಬೀತು ಪಡಿಸಿದ್ದಾರೆ.
ಸಾಯಿ ಸುದರ್ಶನ್ ಅವರ ಅದ್ಭುತ ಕ್ಯಾಚ್‌ಗಾಗಿ 'ಇಂಪ್ಯಾಕ್ಟ್ ಫೀಲ್ಡರ್ ಆಫ್ ದಿ ಸೀರೀಸ್' ಪ್ರಶಸ್ತಿ ಲಭಿಸಿದೆ. ಏಕದಿನ ಸರಣಿಗೆ ಭಾರತೀಯ ಫೀಲ್ಡಿಂಗ್ ಕೋಚ್ ಆಗಿದ್ದ ಅಜಯ್ ರಾತ್ರಾ, ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ನಾವು ಸರಣಿಯಲ್ಲಿ ಒಟ್ಟು 12 ಕ್ಯಾಚ್‌ಗಳನ್ನು ಪಡೆದಿದ್ದೇವೆ. ಅದರಲ್ಲಿ 6 ಕೆಎಲ್ ರಾಹುಲ್ ಅವರದ್ದು ಎಂದು ಹೇಳಿದ್ದಾರೆ. ಆದರೆ, ಇದಾದ ಬಳಿಕವೂ ಸಾಯಿ ಸುದರ್ಶನ್ ಅವರಿಗೆ ಉತ್ತಮ ಫೀಲ್ಡರ್ ಪದಕ ಲಭಿಸಿದೆ.

ಫೀಲ್ಡಿಂಗ್ ಪದಕ ಯಾರಿಗೆ ನೀಡಬೇಕು ಎಂದು ನಿರ್ಧರಿಸಲು ಕೆಎಲ್ ರಾಹುಲ್ ಮತ್ತು ಸಾಯ್ ಸುದರ್ಶನ್ ಬಾರೀ ಪೈಪೋಟಿ ಇತ್ತು. ಆಗ ಕೋಚ್ ನನ್ನ ಕ್ಯಾಚ್‌ಗಳು ತುಂಬಾ ಕಷ್ಟಕರವಲ್ಲ ಮತ್ತು ನೇರವಾಗಿ ಕೈಗೆ ಬಂದಿದ್ದವು. ಆದ್ದರಿಂದ ನಾವು ಸಾಯಿ ಸುದರ್ಶನ್‌ಗೆ ಈ ಪ್ರಶಸ್ತಿಯನ್ನು ನೀಡಬೇಕೆಂದು ರಾಹುಲ್ ಹೇಳಿದರು. ಇದಾದ ಬಳಿಕ ಫೀಲ್ಡಿಂಗ್ ಕೋಚ್ ಸಾಯಿ ಅವರಿಗೆ ಪದಕ ಪ್ರದಾನ ಮಾಡಿದರು.
ಅವೇಶ್ ಖಾನ್ ಬೌಲಿಂಗ್‌ನ 33 ನೇ ಓವರ್‌ನ ಎರಡನೇ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ಚೆಂಡನ್ನು ತಪ್ಪಾಗಿ ಅರ್ಥಹಿಸಿಕೊಂಡರು. ಚೆಂಡು ಆಫ್ ಸ್ಟಂಪ್ ಆಚೆಗೆ ಬಿದ್ದಿದ್ದು, ಕೌಂಚ್ ಬೌನ್ಸ್ ಸಿಕ್ಕಿತು. ಪರಿಣಾಮ ಹೆನ್ರಿಚ್ ಕ್ಲಾಸೆನ್ ಬೌಲ್‌ನ್ನು ಜಸ್ಟ್ ಅದು ಪ್ಲೇಡ್ ಮಾಡಲು ಹೋದರು. ಆದರೆ ಸಾಯ್ ಸುದರ್ಶನ ಆಫ್ ಸೈಡನಲ್ಲಿ, ಡೈವ್ ಮಾಡಿ ಉತ್ತಮ ಕ್ಯಾಚ್ ಪಡೆದಿದ್ದರು.

ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಆದರೆ ಎರಡನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಟೀಂ ಇಂಡಿಯಾ ಸೋಲನುಭವಿಸಬೇಕಾಯಿತು. ಇದಾದ ಬಳಿಕ ಭಾರತ ತಂಡ ಮೂರನೇ ಹಾಗೂ ಕೊನೆಯ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.