Sai Sudarshan: ಸಚಿನ್ ತೆಂಡೂಲ್ಕರ್ ಟಿ20 ದಾಖಲೆ ಮುರಿದ ಸಾಯಿ ಸುದರ್ಶನ್
ಐಪಿಎಲ್ 2025 ರ 51ನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ, ಕಮ್ಮಿನ್ಸ್ ಅಂದುಕೊಂಡಂತೆ ಪವರ್ ಪ್ಲೇ ಹೈದರಾಬಾದ್ ತಂಡದ ಕಡೆ ಹೋಗಲಿಲ್ಲ. ಗುಜರಾತ್ ಟೈಟಾನ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 82 ರನ್ ಗಳಿಸಿತು. ಈ ವೇಳೆ ಗುಜರಾತ್ ಯುವ ಬ್ಯಾಟರ್ ಸಾಯಿ ಸುದರ್ಶನ್ ತಮ್ಮ ಟಿ20 ವೃತ್ತಿಜೀವನದಲ್ಲಿ 2000 ರನ್‌ಗಳನ್ನು ಪೂರೈಸಿದರು.
ಸಾಯಿ ಸುದರ್ಶನ್ ಟಿ20 ವೃತ್ತಿಜೀವನದಲ್ಲಿ ವೇಗವಾಗಿ 2000 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ದಾಖಲೆ ಬ್ರೇಕ್ ಮಾಡಿದರು. ಇದರೊಂದಿಗೆ ಸಾಯಿ ಸುದರ್ಶನ್ 2000 ಟಿ20 ರನ್‌ಗಳನ್ನು ವೇಗವಾಗಿ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್ 2025 ರಲ್ಲಿ ಸಾಯಿ ಸುದರ್ಶನ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅವರು 2021 ರಲ್ಲಿ ತಮಿಳುನಾಡು ಪರ ಟಿ20 ಕ್ರಿಕೆಟ್ ಪಾದಾರ್ಪನೆ ಮಾಡಿದರು. ಇದಾದ ನಂತರ ಅವರು ತಮ್ಮ ಬ್ಯಾಟಿಂಗ್ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಭಾರಿ ಸದ್ದು ಮಾಡಿದರು. ಇಂದು ಅವರು ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಸುದರ್ಶನ್ ಟಿ20 ಮಾದರಿಯಲ್ಲಿ 2000 ರನ್ ಗಳಿಸಲು 32 ರನ್‌ಗಳ ಅವಶ್ಯಕತೆಯಿತ್ತು. ಹೈದರಾಬಾದ್ ವಿರುದ್ಧ ಈ ಸ್ಕೋರ್ ಕಲೆ ಹಾಕುವ ಮೂಲಕ ಸಾಧನೆ ಮಾಡಿದರು. ಸುದರ್ಶನ್ ತಮ್ಮ ವೃತ್ತಿಜೀವನದ 54ನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಮಾಡಿದ್ದಾರೆ. ಇದುವರೆಗೂ ಯಾವುದು ಭಾರತೀಯ ಆಟಗಾರ ವೇಗವಾಗಿ 2000 ಟಿ20 ರನ್ ಗಳಿಸಲ್ಲ. ಈ ಹಿಂದೆ 59 ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 2000 ಟಿ20 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸುದರ್ಶನ್ ಮುರಿದ್ದಾರೆ. ಇದಲ್ಲದೆ, ಐಪಿಎಲ್‌ನಲ್ಲಿ 1500 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ವೇಗದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೇಗವಾಗಿ 2000 ಟಿ20 ರನ್ ಗಳಿಸಿದವರು
ಶಾನ್ ಮಾರ್ಷ್ (ಆಸ್ಟ್ರೇಲಿಯಾ)- 53 ಇನ್ನಿಂಗ್ಸ್
ಸಾಯಿ ಸುದರ್ಶನ್ (ಭಾರತ)- 64 ಇನ್ನಿಂಗ್ಸ್
ಬ್ರಾಡ್ ಹಾಡ್ಜ್/ ಮಾರ್ಕಸ್ ಟ್ರೆಸ್ರ್ಕೋಥಿಕ್/ ಮುಹಮ್ಮದ್ ವಾಸಿಮ್- 58 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್/ ಡಾರ್ಸಿ ಶಾರ್ಟ್- 59 ಇನ್ನಿಂಗ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications