Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಡಿಲೇಡ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ರನೌಟ್ ಬಳಿಕ ಕ್ಷಮೆ ಕೇಳಿದ್ದೆ: ಅಜಿಂಕ್ಯ ರಹಾನೆ

Said sorry to Virat Kohli, he was okay about it: Rahane on run-out incident

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರು ಪಂದ್ಯಗಳಿಗೆ ಹಂಗಾಮಿ ನಾಯಕನಾಗಿರುವ ಅಜಿಂಕ್ಯ ರಹಾನೆ ಮೊದಲನೇ ಟೆಸ್ಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಯ ರನ್‌ಔಟ್ ಬಗ್ಗೆ ಮಾತನಾಡಿದ್ದಾರೆ. ಮೊದಲ ಟೆಸ್ಟ್‌ಪಂದ್ಯದಲ್ಲಿ ಓಟದಲ್ಲಿ ಗೊಂದಲ ಮಾಡಿಕೊಂಡ ಕಾರಣ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಬೇಕಾಯಿತು. ಆ ರನ್‌ಔಟ್‌ಗೆ ನಾನು ಕೊಹ್ಲಿ ಬಳಿ ಕ್ಷಮೆ ಕೇಳಿದ್ದೆ ಎಂದು ರಹಾನೆ ಹೇಳಿದರು.

ಅಡಿಲೇಡ್ ಟೆಸ್ಟ್‌ನಲ್ಲಿ ರಹಾನೆ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜತೆಯಾಟವನ್ನು ನೀಡುತ್ತಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ಶತಕವನ್ನು ಗಳಿಸುವ ನಿರೀಕ್ಷೆ ಮೂಡಿಸಿದ್ದರು. ಆದರೆ ರಹಾನೆ ನೀಡಿದ ಇಲ್ಲದ ರನ್‌ಗೆ ಕರೆನೀಡಿ ಬಳಿಕ ಓಟಕ್ಕೆ ನಿರಾಕರಿಸಿದ್ದರು. ಆದರೆ ಅಷ್ಟರಲ್ಲಾಗಲೇ ವಿರಾಟ್ ಕೊಹ್ಲಿ ಕ್ರೀಸ್‌ನ ಮಧ್ಯಕ್ಕೆ ತಲುಪಿದ್ದರು. ಹೀಗೆ ವಿರಾಟ್ ಕೊಹ್ಲಿ ತನ್ನ ವಿಕೆಟ್ ಕಳೆದುಕೊಳ್ಳಬೇಕಾಯಿತು.

"ದಿನದ ಪಂದ್ಯ ಮುಕ್ತಾಯದ ಬಳಿಕ ನಾನು ವಿರಾಟ್ ಕೊಹ್ಲಿಯ ಬಳಿ ಕ್ಷಮೆ ಕೇಳಿದ್ದೆ. ಆದರೆ ಅದನ್ನು ವಿರಾಟ್ ಕೊಹ್ಲಿ ಸ್ವೀಕರಿಸಿದ್ದರು" ಎಂದು ರಹಾನೆ ಎರಡನೇ ಟೆಸ್ಟ್‌ಗೆ ಮುನ್ನ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡ ಕೆಲವೇ ರನ್‌ಗಳ ಅಂತರದಲ್ಲಿ ರಹಾನೆ ಕೂಡ ವಿಕೆಟ್ ಒಪ್ಪಿಸಿದ್ದರು. ಬಳಿಕ ಟೀಮ್ ಇಂಡಿಯಾದ ಉಳಿದ ವಿಕೆಟ್‌ಗಳನ್ನು ಕೂಡ ಬೇಗನೆ ಕಳೆದುಕೊಂಡಿತು.

ಆ ಸಂದರ್ಭದಲ್ಲಿ ನಾನು ಚೆನ್ನಾಗಿ ಆಡುತ್ತಿದ್ದೆವು. ಆದರೆ ಪರಿಸ್ಥಿತಿಯ ಕಾರಣದಿಂದಾಗಿ ಹಾಗಾಯಿತು ಎಂದು ನಾವಿಬ್ಬರಊ ಅರ್ಥ ಮಾಡಿಕೊಂಡಿದ್ದೇವೆ. ಕ್ರಿಕೆಟ್‌ನಲ್ಲಿ ಇಂತಾ ಸಂಗತಿಗಳು ನಡೆಯುತ್ತದೆ. ನೀವು ಅದನ್ನು ಗೌರವಿಸಬೇಕು ಹಾಗೂ ಮುಂದುವರಿಯಬೇಕು ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆ ರನ್‌ಔಟ್ ಆಸ್ಟ್ರೇಲಿಯಾ ಮೇಲುಗೈ ಸಾಧಿಸಲು ಪ್ರಮುಖ ಕಾರಣವಾಯಿತು ಎಂದು ಒಪ್ಪಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಲ್ಳುವ ಮುನ್ನ ಟೀಮ್ ಇಂಡಿಯಾ 188ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಅದಾದ ಬಳಿಕ 244 ರನ್‌ಗಳಿಗೆ ಆಲೌಟ್ ಆಗಿತ್ತು.

Story first published: Friday, December 25, 2020, 18:31 [IST]
Other articles published on Dec 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+