ಚೊಚ್ಚಲ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ Sakib Hussain ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್‌ನ 21 ನೇ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 57 ರನ್‌ಗಳಿಂದ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ಪರ 21 ವರ್ಷದ ಬೌಲರ್ ಶಕೀಬ್ ಹುಸೇನ್ ಪದಾರ್ಪಣೆ ಮಾಡಿದರು. ಇವರು ತಮ್ಮ ಶಿಸ್ತುಬದ್ಧ ದಾಳಿಯ ಮೂಲಕ ಸನ್ ಗೆಲುವಿಗೆ ಕಾರಣರಾದರು.
ತಮ್ಮ ಮೊದಲ ಪಂದ್ಯದಲ್ಲಿ ಶಕೀಬ್ ಬಿಗುವಿನ ದಾಳಿ ನಡೆಸಿ ಮಿಂಚಿದರು. ಇವರು 4 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ ನಾಲ್ಕು ಪ್ರಮುಖ ವಿಕೆಟ್ ಕಬಳಿಸಿದರು. ಇವರ ಕರಾರುವಾಕ್ ದಾಳಿಗೆ ಉತ್ತಿರಿಸುವಲ್ಲಿ ಯಶಸ್ವಿ ಜೈಸ್ವಾಲ್, ಡುನೋವನ್ ಫೆರೇರಾ, ಜೋಫ್ರಾ ಆರ್ಚರ್ ಮತ್ತು ರವಿ ಬಿಷ್ಣೋಯ್ ಅವರನ್ನು ಔಟ್ ಮಾಡಿದರು. ಈ ಬಿಗುವಿನ ಪ್ರದರ್ಶನದ ಬಲದಿಂದ ಶಕೀಬ್ ದೊಡ್ಡ ದಾಖಲೆ ಬರೆದಿದ್ದಾರೆ.

ಬಿಹಾರದ 21 ವರ್ಷದ ವೇಗಿ ಸಾಕಿಬ್ ಹುಸೇನ್ 2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ಆ ಆವೃತ್ತಿಯಲ್ಲಿ ಇವರು ಒಂದೇ ಒಂದು ಪಂದ್ಯ ಆಡುವ ಅವಕಾಶ ಲಭಿಸಲಿಲ್ಲ. ಇವರನ್ನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 30 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿತ್ತು. ಇವರು ಬಿಹಾರ ಪರ 2022-23ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡಿದರು.
ಬಿಹಾರ ಪೋರನ ಅಬ್ಬರ
ಬಿಹಾರ ಪರ ಟಿ20 ಪಂದ್ಯವನ್ನು ಆಡಿದಾಗ ಶಕೀಬ್‌ಗೆ ಕೇವಲ 17 ವರ್ಷ. ಇವರು ತಾವಾಡಿದ ಎರಡನೇ ಟಿ20 ಪಂದ್ಯದಲ್ಲಿ 20 ರನ್ ನೀಡಿ 4 ವಿಕೆಟ್ ಪಡೆದರು. ಇವರು ಕಳೆದ ಆವೃತ್ತಿಯ ದೇಶೀಯ ಋತುವಿನಲ್ಲಿ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅರುಣಾಚಲ್ ಪ್ರದೇಶ ವಿರುದ್ಧ ಶಕೀಬ್ ಆರು ವಿಕೆಟ್ ಪಡೆದು ಮಿಂಚಿದರು.
ಅಲ್ಲಿ ಅವರು ಅರುಣಾಚಲ ಪ್ರದೇಶ ವಿರುದ್ಧದ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಸೇರಿದಂತೆ 41 ರನ್ ನೀಡಿ 6 ವಿಕೆಟ್‌ಗಳನ್ನು ಕಬಳಿಸಿದರು. ಈಗ, ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಪ್ರವೇಶದೊಂದಿಗೆ, ಶಕೀಬ್ ತಮ್ಮ ಪ್ರತಿಭೆಯನ್ನು ದೊಡ್ಡ ವೇದಿಕೆಯಲ್ಲಿ ಸಾಬೀತುಪಡಿಸಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್‌ನ ಪದಾರ್ಪಣಾ ಪಂದ್ಯದಲ್ಲಿ
ಪದಾರ್ಪಣಾ ಪಂದ್ಯದಲ್ಲಿ ಅಬ್ಬರಿಸಿದ ಬೌಲರ್ಸ್‌ಗಳ ಪಟ್ಟಿ
ಅಲ್ಜಾರಿ ಜೋಸೆಫ್, 12 ರನ್‌ಗೆ 6 ವಿಕೆಟ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ
ಆಂಡ್ರ್ಯೂ ಟೈ, 17 ರನ್‌ಗೆ 5 ವಿಕೆಟ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ
ಶೋಯೆಬ್ ಅಖ್ತರ್, 11 ರನ್‌ಗೆ 5 ವಿಕೆಟ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ
ಕೆವೊನ್ ಕೂಪರ್, 26 ರನ್‌ಗೆ 4 ವಿಕೆಟ್, ಪಂಜಾಬ್ ಕಿಂಗ್ಸ್ ವಿರುದ್ಧ
ಅಶ್ವಿನಿ ಕುಮಾರ್, 24 ರನ್‌ಗೆ 4 ವಿಕೆಟ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ
ಶಕಿಬ್ ಹುಸೇನ್, 24 ರನ್‌ಗೆ 4 ವಿಕೆಟ್, ರಾಜಸ್ಥಾನ ರಾಯಲ್ಸ್ ವಿರುದ್ಧ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications